AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಡ್ರೈ ಫ್ರೂಟ್ಸ್​​ ಕೆಲಸ ಮಾಡಿಕೊಂಡಿದ್ದ ಯುವಕ, ರಂಜಾನ್​ಗೆ ಊರಿಗೆ ಹೋದ ಎರಡನೇ ದಿನವೇ ಬರ್ಬರವಾಗಿ ಹತ್ಯೆಗೀಡಾದ

ಒಟ್ನಲ್ಲಿ ಸಂಬಂಧಗಳು ಅಂದ ಮೇಲೆ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಆಗೋದು ಕಾಮನ್. ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಮಾಡಿ ಬಗೆ ಹರಿಸಿಕೊಂಡು ಜೀವನ ನಡೆಸಬೇಕಾಗಿತ್ತು. ಆದ್ರೆ ಇಲ್ಲಿ ಆಗಿದ್ದೆ ಬೇರೆಯಾಗಿದ್ದು, ಸಣ್ಣ ವಿಚಾರಕ್ಕೆ ಕೊಲೆಯಾಗಿದ್ದು ಮಾತ್ರ ದುರಂತ.

ಬೆಂಗಳೂರಲ್ಲಿ ಡ್ರೈ ಫ್ರೂಟ್ಸ್​​ ಕೆಲಸ ಮಾಡಿಕೊಂಡಿದ್ದ ಯುವಕ, ರಂಜಾನ್​ಗೆ ಊರಿಗೆ ಹೋದ ಎರಡನೇ ದಿನವೇ ಬರ್ಬರವಾಗಿ ಹತ್ಯೆಗೀಡಾದ
ರಂಜಾನ್​ಗೆ ಊರಿಗೆ ಹೋದ ಎರಡನೇ ದಿನವೇ ಬರ್ಬರವಾಗಿ ಹತ್ಯೆಗೀಡಾದ
TV9 Web
| Updated By: ಸಾಧು ಶ್ರೀನಾಥ್​|

Updated on: Apr 15, 2023 | 10:28 AM

Share

ಆ ಯುವಕ ಬೆಂಗಳೂರಿನಲ್ಲಿ ಡ್ರೈ ಫ್ರೂಟ್ಸ್​​ (Dry Fruits) ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಎರಡು ದಿನಗಳ ಹಿಂದೆ ರಂಜಾನ್ (Ramadan, Ramzan) ಹತ್ರ ಬಂದಿದ್ದಕ್ಕೆ ವಾಪಸ್ ಊರಿಗೆ ಬಂದಿದ್ದ. ಬೆಂಗಳೂರಿನಿಂದ ಬಂದ ಎರಡನೇ ದಿನವೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಬಾವನಿಂದ್ಲೇ (Husband) ಚಾಕುವಿನಿಂದ ಇರಿತಕ್ಕೆ ಒಳಗಾಗಿ ಉಸಿರು ನಿಲ್ಲಿಸಿದ್ದಾರೆ. ಅಷ್ಟಕ್ಕೂ ಯುವಕನ ಕೊಲೆಗೆ ಕಾರಣವಾದರೂ ಏನು ಅಂತೀರಾ ಈ ಸ್ಟೋರಿ ನೋಡಿ.. ಬಾವನಿಂದ್ಲೇ ಚಾಕುವಿನಿಂದ ಇರಿದು ಬಾಮೈದುನ (Brother) ಕೊಲೆ… ನಡು ರಸ್ತೆಯಲ್ಲಿಯೇ ನಡೆದ ಜಗಳ ಕೊಲೆಯಲ್ಲಿ ಅಂತ್ಯ… ತಂಗಿಯನ್ನ ಯಾಕೆ ಹೊಡೆದಿರಾ ಅಂತ ಪ್ರಶ್ನೆ ಮಾಡಿದ್ದಕ್ಕೆ ನಡೆದ ಕೊಲೆ.. ಯಸ್ ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ನಗರದಲ್ಲಿ.. ಹೌದು ಯಾದಗಿರಿ (Yadgir) ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಭೀಕರವಾದ ಕೊಲೆ ನಡೆದಿದೆ.

24 ವರ್ಷದ ಯುವಕ ಮಹ್ಮದ್ ಸಲೀಂ ಎಂಬಾತನಿಗೆ ಚಾಕುವಿನಿಂದ ಎದೆಗೆ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ಮಾಡಿದ್ದು ಮತ್ಯಾರು ಅಲ್ಲ ಬದಲಿಗೆ ಕೊಲೆಯಾದ ಯುವಕನ ಬಾವ, ಅಂದ್ರೆ ತಂಗಿಯ ಗಂಡ ಮಹೆಬೂಬ್. ಈ ಮಹೆಬೂಬ್ ಹಾಗೂ ಮಹೆಬೂಬ್ ಸಹೋದರ ಕರೀಮ್ ಸೇರಿ ಸಲೀಮ್ ನನ್ನ ಕೊಲೆ ಮಾಡಿದ್ದಾರೆ. ಮೊದ್ಲೇ ರಂಜಾನ್ ತಿಂಗಳು ಆರಂಭವಾಗಿದ್ದರಿಂದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಜನ ಸಂದಣಿ ಹೆಚ್ಚಿರುತ್ತೆ. ಸಂಜೆಯಾಗುತ್ತಿದ್ದ ಹಾಗೆ ಎಲ್ಲರೂ ಇಫ್ತಿಯಾರ್ ಮುಗಿಸಿಕೊಂಡು ನಮಾಜ್ ಮಾಡಲು ಹೋಗುತ್ತಿದ್ರು.

ಮಸೀದಿ ಮುಂದೆ ಸಲೀಮ್ ಹಾಗೂ ಮಹೆಬೂಬ್ ಸಹೋದರರ ಮದ್ಯ ಜಗಳ ಶುರುವಾಗಿದೆ. ಇದೆ ವೇಳೆ ಕೈಯಲ್ಲಿದ್ದ ಚಾಕುವಿನಿಂದ ಮಹೆಬೂಬ್ ಹಾಗೂ ಕರೀಮ್ ಸಲೀಮ್ ನ ಕೊಲೆ ಮಾಡಿದ್ದಾರೆ. ಇನ್ನು ಈ ಘಟನೆ ನಡೆದ ಜಸ್ಟ್ ಕೂಗಳತೆಯಲ್ಲೇ ಯಾದಗಿರಿ ಪೊಲೀಸ್ ಇನ್ಸಪೆಕ್ಟರ್ ಕಚೇರಿ ಕೂಡ ಇದೆ. ಜೊತೆಗೆ ನೂರಾರು ಮಂದಿ ರಸ್ತೆಯಲ್ಲಿ ಓಡಾಡುತ್ತಿದ್ದರೂ ಸಂಜೆ ವೇಳೆ ಎಲ್ಲರ ಮುಂದೆಯೇ ಕೊಲೆ ನಡೆದು ಹೋಗಿದೆ. ಇನ್ನು ಕೊಲೆಗೆ ಕಾರಣ ಸಲೀಮ್ ತನ್ನ ತಂಗಿ ಮೂಬಿನಾಳಿಗೆ ಗಂಡ ಮಹೆಬೂಬ್ ಹಾಗೂ ಕುಟುಂಬಸ್ಥರು ಸೇರಿ ಹೊಡೆದಿದ್ದಾರಂತೆ. ಇದೆ ವಿಚಾರವನ್ನ ಕೇಳಲು ಸಲೀಮ್ ಹೋಗಿದ್ದ. ಅಷ್ಟಕ್ಕೆ ಜಗಳವಾಗಿ ಕೊಲೆಯಾಗಿದೆ. ಇನ್ನು ನನ್ನ ಅಣ್ಣನಿಗೆ ನನ್ನ ಗಂಡನೇ ಕೊಲೆ ಮಾಡಿದ್ದಾನೆ ಅಂತಾಳೆ ಸಲೀಮ್ ಸಹೋದರಿ ಮೂಬಿನಾ.

ಆರು ತಿಂಗಳ ಹಿಂದೆಯಷ್ಟೇ ಯಾದಗಿರಿ ನಿವಾಸಿಯೇ ಆಗಿರುವ ಮಹೆಬೂಬ್, ಈ ಸಲೀಮ್ ಸಹೋದರಿ ಮೂಬಿನಾಳನ್ನು ಕೊಟ್ಟು ಮದುವೆ ಮಾಡಿದ್ದರು. ತಳ್ಳೋ ಗಾಡಿಯಲ್ಲಿ ಹಣ್ಣುಗಳನ್ನ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಹೆಬೂಬ್, ತಂಗಿಗೆ ಇದ್ದುದರಲ್ಲೇ ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತ ಕೊಟ್ಟು ಮದುವೆ ಮಾಡಿದ್ರು. ಆದ್ರೆ ಮಹೆಬೂಬ್ ನಿತ್ಯ ಮದ್ಯ ಸೇವನೆ ಮಾಡ್ತಾಯಿದ್ನಂತೆ. ಕುಡಿದು ಮನೆಗೆ ಬರೋದು ಪತ್ನಿ ಜೊತೆ ಜಗಳ ಮಾಡಿಕೊಳ್ಳುತ್ತಿದ್ನಂತೆ.

ರಂಜಾನ್ ತಿಂಗಳು ಆರಂಭವಾಗಿ ಆಗಿದೆ. ಈ ತಿಂಗಳಲ್ಲಿ ಕುಡಿಯಬಾರದು, ತಪ್ಪು ಅಂತ ಪತ್ನಿ ಮಹೆಬೂಬ್ ಗೆ ಬುದ್ದಿ ಮಾತು ಹೇಳಿದ್ದಾಳೆ. ಇದೆ ವಿಚಾರಕ್ಕೆ ಮಹೆಬೂಬ್ ಹಾಗೂ ಕುಟುಂಬಸ್ಥರು ಸೇರಿ ಮೂಬಿನಾಗೆ ಖಾರದ ಪುಡಿ ಹಾಕಿ ಹೊಡೆದಿದ್ದಾರಂತೆ. ಕೆಲ ದಿನಗಳ ಹಿಂದೆ ಸಮುದಾಯದ ಹಿರಿಯರು ಕುಳಿತುಕೊಂಡು ಜಗಳವನ್ನ ಬಗೆಹರಿಸಿ ಮಹೆಬೂಬ್ ನಿಗೆ ಬುದ್ದಿ ಮಾತು ಹೇಳಿದ್ದಾರೆ.

ಆದ್ರೆ ಮತ್ತೆ ಇವತ್ತು ಕುಡಿದು ಬಂದಿರುವ ವಿಚಾರಕ್ಕೆ ಜಗಳವಾಗಿದ್ದರಿಂದ ಮಹೆಬೂಬ್ ತನ್ನ ಪತ್ನಿಗೆ ಹೊಡಿದ್ದಾನೆ. ಇದೆ ವಿಚಾರವನ್ನ ಸಲೀಮ್ ಕೇಳಲು ಹೋದಾಗ ಜಗಳವಾಗಿ ಕೊಲೆಯಾಗಿದೆ. ಇನ್ನು ಅಳಿಯ ಏನಾದ್ರು ಸಣ್ಣಪುಟ್ಟ ಸ್ವಂತ ವ್ಯಾಪಾರ ಮಾಡಿಕೊಂಡು ಮಗಳಿಗೆ ಚೆನ್ನಾಗಿ ನೋಡಿಕೊಳ್ಳಲಿ ಅಂತ ಮೂಬಿನಾ ತಾಯಿ ಒಂದು ಲಕ್ಷ ಹಣವನ್ನ ಕೊಟ್ಟಿದ್ದರಂತೆ.

ಆದ್ರೆ ಅತ್ತೆ ಕೊಟ್ಟ ಹಣವನ್ನ ಮಹೆಬೂಬ ತನ್ನ ಕೆಟ್ಟ ಚಟಕ್ಕೆ ಬಳಸಿ ಹಾಳು ಮಾಡಿದ್ದಾನಂತೆ. ಈ ವಿಚಾರಕ್ಕೂ ಆಗಾಗ ಜಗಳ ಆಗ್ತಾಯಿತ್ತು. ಆದ್ರೆ ಇವತ್ತು ಕೊನೆಗೆ ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಕೊಲೆಯಾಗುವ ಹಂತಕ್ಕೆ ಬಂದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಮಹೆಬೂಬ್ ಹಾಗೂ ಕರೀಮ್ ಪರಾರಿಯಾಗಿದ್ದಾರೆ. ಈ ಸಂಬಂಧ ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ತಲಾಷ್ ನಡೆಸುತ್ತಿದ್ದಾರೆ.

ಒಟ್ನಲ್ಲಿ ಸಂಬಂಧಗಳು ಅಂದ ಮೇಲೆ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಆಗೋದು ಕಾಮನ್. ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಮಾಡಿ ಬಗೆ ಹರಿಸಿಕೊಂಡು ಜೀವನ ನಡೆಸಬೇಕಾಗಿತ್ತು. ಆದ್ರೆ ಇಲ್ಲಿ ಆಗಿದ್ದೆ ಬೇರೆಯಾಗಿದ್ದು, ಸಣ್ಣ ವಿಚಾರಕ್ಕೆ ಕೊಲೆಯಾಗಿದ್ದು ಮಾತ್ರ ದುರಂತ.

ಅಮೀನ್ ಹೊಸುರ್, ಟಿವಿ 9, ಯಾದಗಿರಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ