ವಿಜಯನಗರ: ಸಾಲಬಾಧೆ ತಾಳಲಾರದೇ ಮನನೊಂದು ವಿಷ (Poison) ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ತಾಂಡದಲ್ಲಿ ನಡೆದಿದೆ. ಗುಂಡಾನಾಯ್ಕ್ ( 37) ಆತ್ಮಹತ್ಯೆ ಮಾಡಿಕೊಂಡ ರೈತ. ಬೆಳೆಗಾಗಿ ಕೈಸಾಲ ಮಾಡಿಕೊಂಡಿದ್ದ ರೈತ ಗುಂಡಾನಾಯ್ಕ್, ಮಳೆಗಾಲದಲ್ಲಿ ಈರುಳ್ಳಿ ಬೆಳೆ ನಾಶವಾಗಿತ್ತು. ಈಗ ಬೆಳೆದಿರೋ ಈರುಳ್ಳಿಗೂ ಬೆಲೆ ಕುಸಿತವಾಗಿದೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವೈನ್ಶಾಪ್ವೊಂದರಲ್ಲಿ ಕಳ್ಳರ ಕೈಚಳಕ; ನಗದು ಮತ್ತು ಮದ್ಯ ಎಗರಿಸಿ ಪರಾರಿ;
ಯಾದಗಿರಿ: ವೈನ್ ಶಾಪ್ವೊಂದರಲ್ಲಿ 5 ಸಾವಿರ ನಗದು ಹಾಗೂ ಮದ್ಯವನ್ನ ಎಗರಿಸಿ ಪರಾರಿಯಾಗಿದ್ದ ಕಳ್ಳರುನ್ನು 9 ದಿನಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಇದೆ ಎಪ್ರಿಲ್ 15 ರಂದು ಗುರುಮಠಕಲ್ ಪಟ್ಟಣದಲ್ಲಿ ಘಟನೆ ನಡೆದಿದೆ. ಯಾದಗಿರಿ ನಗರದ ನಿವಾಸಿಗಳಾದ ಸಂಗಮೇಶ, ಮಹೇಶ್ವರ ರೆಡ್ಡಿ ಹಾಗೂ ವಿಶ್ವರಾಧ್ಯ ಬಂಧಿತ ಕಳ್ಳರು. ಗುರುಮಠಕಲ್ ಪಟ್ಟಣದ ನರಸರೆಡ್ಡಿ ಎಂಬವರ ವೈನ್ ಶಾಪ್ಗೆ ಕನ್ನ ಹಾಕಿದ್ದರು. ಗುರುಮಠಕಲ್ ಪೊಲೀಸರಿಂದ ಕಳ್ಳರ ಬಂಧನ ಮಾಡಿ ಪ್ರಕರಣ ದಾಖಲು ಮಾಡಲಾಗಿದೆ.
ಬೊಲೆರೊ ವಾಹನ ಡಿಕ್ಕಿ, ಇಬ್ಬರ ಸಾವು
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಬೋಕಿಕೆರೆ ಗ್ರಾಮದ ಬಳಿ ಮರಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದು ಇಬ್ಬರ ಮೃತಪಟ್ಟ ಘಟನೆ ನಡೆದಿದೆ. ಹೊನ್ನಾವರ ಮೂಲದ ಪ್ರಮೋದ್(43), ವಿನಾಯಕ(30) ಮೃತರು. ಬೊಲೆರೊ ವಾಹನದಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮಲಿಂಗೇಶ್ವರ ದೇಗುಲದಲ್ಲಿ ಶಿವಲಿಂಗ ಕಳವು
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಬುರಡೇಕಟ್ಟೆ ಗ್ರಾಮದಲ್ಲಿ ರಾಮಲಿಂಗೇಶ್ವರ ದೇಗುಲದಲ್ಲಿ ಸುಮಾರು 5 ಅಡಿ ಎತ್ತರವಿದ್ದ ಶಿವಲಿಂಗ ಕಳವಾಗಿದೆ. ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೆ ಸಿದ್ದಗೊಂಡಿದ್ದ ದೇಗುಲ ಕಳ್ಳತನ ಮಾಡಲಾಗಿದೆ. ನಿಧಿ ಆಸೆಗಾಗಿ ಶಿವಲಿಂಗ ತೆಗೆದು ನಿಧಿಗಳ್ಳರು ಗುಂಡಿ ಅಗೆದಿರುವ ಶಂಕೆ ವ್ಯಕ್ತವಾಗಿದೆ. 500 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ಈ ದೇಗುಲ ನಿರ್ಮಾಣವಾಗಿತ್ತು.
ಇದನ್ನೂ ಓದಿ;