ಶಾಸಕ ಪ್ರೀತಂಗೌಡ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕೆಂಡಾಮಂಡಲ

ಶಾಸಕ ಪ್ರೀತಂಗೌಡ ಹೇಳಿಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕೆಂಡಾಮಂಡಲ
ಶಾಸಕ ಪ್ರೀತಂಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ

ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ತೊರೆಯುವ ವಿಚಾರವಾಗಿ ಮಾತನಾಡಿದ್ದು, ಶಿವಲಿಂಗೇಗೌಡರು ಪಕ್ಷ ಬಿಡಲ್ಲ. ಮಾರನೇ ದಿನ ನನ್ನ ಜೊತೆ ಶಿವಲಿಂಗೇಗೌಡ ಪೋನ್‌ನಲ್ಲಿ ಮಾತನಾಡಿದ್ದಾರೆ. ನಮ್ಮ ತಾಯಿ ಆಣೆ ಪಕ್ಷ ಬಿಡಲ್ಲ ಅಂತ ಅಣ್ಣಾ ಅಂದಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 24, 2022 | 2:51 PM

ಹಾಸನ: ಅವರು ದೊಡ್ಡವರು, ದಿನ ಅವರ ಮನೆಯಲ್ಲಿ ದಲಿತರಿಗೆ ಊಟ ಹಾಕುತ್ತಿದ್ದಾರೆ. ಮೀಸಲಾತಿ ಇಲ್ಲದಿದ್ದಾಗ ಅಧಿಕಾರ ಕೊಟ್ಟಿರುವ ಪಕ್ಷ ಯಾವುದಾದರೆ ಇದ್ದರೆ ಅದು ದೇವೇಗೌಡರ ಪಕ್ಷ. ಇವರ ಯೋಗ್ಯತೆಗೆ ಅಲ್ಪಸಂಖ್ಯಾತರ ಮೇಲೆ ಆರೋಪ ಮಾಡಲು ಹೊರಟಿದ್ದಾರೆ ಎಂದು ಶಾಸಕ ಪ್ರೀತಂಗೌಡ ಹೇಳಿಕೆಗೆ ಮಾಜಿಸಚಿವ ಎಚ್.ಡಿ.ರೇವಣ್ಣ ಕೆಂಡಾಮಂಡಲವಾಗಿದ್ದಾರೆ. ನಮ್ಮ ಮನೆಗೆ ಎಷ್ಟು ಜನ ದಲಿತರನ್ನು ಕರೆದುಕೊಂಡು ಬರುತ್ತಾರೋ ಬರಲಿ ಊಟ ಹಾಕ್ತಿನಿ. ನಮ್ಮ ಬಗ್ಗೆ ಮಾತನಾಡದಿದ್ದರೆ ಅವರ ಹೊಟ್ಟೆಪಾಡು ನಡೆಯಲ್ಲ. ಮಾನ ಮಾರ್ಯಾದೆ ಇದ್ದರೆ ಇರೋವಷ್ಟು ದಿನ ವ್ಯಾಪಾರ ಮಾಡ್ಕಂಡು ಮನೆ ಬೀಳಲಿ. ಯಡಿಯೂರಪ್ಪ ಈ ಜಿಲ್ಲೆಗೆ ಏನು ಕಡಿದು ಕಟ್ಟೆ ಹಾಕಿದ್ದಾನೆ. ನಾನು ಇಲ್ಲಿಯವರೆಗೂ ತಡೆದಿದ್ದೇನೆ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ. ಹಾಸನಕ್ಕೆ ಭವಾನಿ ರೇವಣ್ಣ ಬರಲಿ ಆಹ್ವಾನ ನೀಡಿದ್ದ ಪ್ರೀತಂಗೌಡ ವಿಚಾರ ಇವನನ್ನು ಕೇಳಿ ಯಾರೂ ಅಭ್ಯರ್ಥಿ ಮಾಡ್ತಾರೆ. ಮೊದಲು ಅವರದ್ದು ನೋಡ್ಕಳಕೆ ಹೇಳಿ.

ಈಗೇನು ಆಟ ಆಡುತ್ತಿದ್ದಾರೆ 2023 ಕ್ಕೆ ತೋರುಸ್ತಿನಿ. ಕಾಂಗ್ರೆಸ್ ಮಾಡಿದ ತಪ್ಪಿಗೆ ಬಿಜೆಪಿ ಬಂತು, ಇಲ್ಲ ಅಂದ್ರೆ ಈ ಗಿರಾಕಿ ಎಲ್ಲಿ ಇರನು. ಯಡಿಯೂರಪ್ಪನ ಸರ್ಕಾರ ಬಂದಿದ್ದಕ್ಕೆ ಜೀವ ಉಳುಸ್ಕಂಡಿದನೆ. ನಾನು ಅವನ್ನು ಲೆಕ್ಕಕ್ಕೆ ಇಟ್ಟಿಲ್ಲ, ಅವರು ದೊಡ್ಡ ವ್ಯಕ್ತಿ. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ನಾನು ಹೆಬ್ಬೆಟ್ಟು. ಅವರು ಬಾರ್‌ಅಟ್‌ಲಾ ಓದಿರೋರು. ಅವರು ಯಡಿಯೂರಪ್ಪ, ಅವರ ಮಗನತ್ರ ಓದಿ ಬಂದಿರೋರು. ಭವಾನಿರೇವಣ್ಣ ಒಂದು ದಿನ ಎಂ.ಎಲ್.ಎ. ಆಗೇ ಆಗುತ್ತಾರೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷ, ಹತ್ತು ವರ್ಷ ಆಗುತ್ತೋ. ಹೊಳೆನರಸೀಪುರದಲ್ಲಿ ಭವಾನಿರೇವಣ್ಣಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತೇನೆ. ಹಾಸನದಲ್ಲಿ ಟ್ರಕ್ ಟರ್ಮಿನಲ್ ಹಾಗೂ ನೂತನ ತಾಲ್ಲೂಕು ಕಛೇರಿ ನಿರ್ಮಾಣದ ವಿಚಾರಕ್ಕೆ ರೇವಣ್ಣ ಗರಂ ಆಗಿದ್ದು, ವಿರೋಧದ ನಡುವೆ ಮಾಡಲು ಹೋದರೆ ಏನಾದ್ರು ಕಾನೂನು ಸುವ್ಯವಸ್ಥೆಗೆ ಭಂಗ ಆದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಹಾಸನದ ಕೆಲವು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

ಹಾಸನ ಒಬ್ಬ ಎಂ.ಎಲ್.ಎ. ಸ್ವತ್ತಲ್ಲ ಇವನ್ಯಾವನು ಹೇಳಲು. ಹಾಸನ ತಾಲ್ಲೂಕು ಆಫೀಸ್ ನಿರ್ಮಾಣಕ್ಕೆ ಹಣ ಕೊಟ್ಟಿದ್ದು ನಾನು. ಮಂತ್ರಿಗಳು ಹೇಳಿದ್ದು ಅಂತ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಇದುವರೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದಿದ್ದೇವೆ. ನಾಳೆ ಹೆಚ್ಚು ಕಮ್ಮಿ ಆದರೆ ಜಿಲ್ಲಾಧಿಕಾರಿ ನೇರ ಹೊಣೆಯಾಗುತ್ತಾರೆ. ದೊಡ್ಡಹಳ್ಳಿ ಗೋಲಿಬಾರ್ ತರ ಆಗುತ್ತೆ. ಆಸ್ಪತ್ರೆ ಕಟ್ಟಿದಾಗ ಇದು ಹುಟ್ಟಿತ್ತೋ ಇಲ್ಲವೋ. ಒತ್ತಡ ಹಾಕಿ ದೊಡ್ಡಗೇಣಿಗೆರೆ ಪಂಚಾಯ್ತಿ ಪಿಡಿಓನಿಂದ ಪರ್ಮಿಷನ್ ತಗೊಂಡ್ರೆ ಸುಮ್ಮನಿರಲ್ಲ. ಅಧಿಕಾರಿಗಳನ್ನು ಇಡ ಮಾಡುತ್ತೇನೆ. ಇನ್ನೊಂದು ವರ್ಷ ಅಧಿಕಾರಗಳ ಇಡಾ ಮಾಡುವುದೇ ನನ್ನ ಕೆಲಸ. ರಕ್ತಕೋಡಿ ಹರಿಸಬೇಕು ಅನ್ನುವ ಹಾಗಿದ್ರೆ ಮಾಡಿ. ನಾನು ಇದುವರೆಗೂ ಕೈಹಾಕಿರಲಿಲ್ಲ, ಅದ್ಯಾವನು ಬರ್ತಾನೆ ಬರಲಿ‌ ನಾನು ನಿಂತ್ಕತನಿ. ದೇವರೇ ಶಿಕ್ಷೆ ಕೊಡುವ ಕಾಲ‌ ಬರುತ್ತೆ ಎಂದರು.

ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ತೊರೆಯುವ ವಿಚಾರವಾಗಿ ಮಾತನಾಡಿದ್ದು, ಶಿವಲಿಂಗೇಗೌಡರು ಪಕ್ಷ ಬಿಡಲ್ಲ. ಮಾರನೇ ದಿನ ನನ್ನ ಜೊತೆ ಶಿವಲಿಂಗೇಗೌಡ ಪೋನ್‌ನಲ್ಲಿ ಮಾತನಾಡಿದ್ದಾರೆ. ನಮ್ಮ ತಾಯಿ ಆಣೆ ಪಕ್ಷ ಬಿಡಲ್ಲ ಅಂತ ಅಣ್ಣಾ ಅಂದಿದ್ದಾರೆ. ಯಾವ ಕಾರಣದಿಂದಲೂ ಜೆಡಿಎಸ್ ಬಿಡಲ್ಲ. ನಾನು ಜೆಡಿಎಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ. ಐದಾರು ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ನಾವೆಲ್ಲ ಒಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ;

ಭಾರತದಲ್ಲಿ ಸಖತ್ ಟ್ರೆಂಡಿಂಗ್​​ನಲ್ಲಿರುವ ಸ್ಮಾರ್ಟ್​​ಫೋನ್​ಗಳು ಯಾವುವು ಗೊತ್ತೇ?: ಇಲ್ಲಿದೆ ನೋಡಿ

Rashmika Mandanna: ಮದ್ಯದ ಕಂಪನಿ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ

Follow us on

Related Stories

Most Read Stories

Click on your DTH Provider to Add TV9 Kannada