AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಐಪಿಎಲ್ ಸೀಸನ್ 15​ ಮುಂದೂಡ್ತಾರಾ?

IPL 2022: ಈ ಬಾರಿ ಪ್ರೇಕ್ಷಕರಿಗೆ ಸ್ಟೇಡಿಯಂಗೆ ಅನುಮತಿಸಿರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಪ್ರಸ್ತುತ ಸಂಪೂರ್ಣ ಸುರಕ್ಷತೆಯೊಂದಿಗೆ ಐಪಿಎಲ್ ಆಡುತ್ತಿದ್ದರೂ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

IPL 2022: ಐಪಿಎಲ್ ಸೀಸನ್ 15​ ಮುಂದೂಡ್ತಾರಾ?
IPL 2022
TV9 Web
| Edited By: |

Updated on: Apr 24, 2022 | 2:42 PM

Share

IPL 2022: ಐಪಿಎಲ್​ ಸೀಸನ್​ 15 ಗೂ ಕೊರೋನಾತಂಕ ಎದುರಾಗಿದೆ. ಏಕೆಂದರೆ ಈ ಬಾರಿ ಒಂದು ಪ್ರಕರಣದಿಂದ ಭಯ ಹುಟ್ಟಿಸಿದ್ದ ಕೋವಿಡ್ ಸೋಂಕು ಇದೀಗ 9 ಕ್ಕೆ ಬಂದು ನಿಂತಿದೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ 9 ಮಂದಿಯಲ್ಲಿ ಕೊರೋನಾ ಸೋಂಕು ಕಂಡು ಬಂದಿದೆ. ಇವರಲ್ಲಿ ಇಬ್ಬರು ಆಟಗಾರರಾದರೆ, ಉಳಿದವರು ಸಿಬ್ಬಂದಿಗಳು. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಹೀಗಾಗಿ ಪಾಂಟಿಂಗ್ ಡೆಲ್ಲಿ ಡಗೌಟ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಒಂದೇ ತಂಡದಲ್ಲಿ ಒಂಬತ್ತು ಪ್ರಕರಣಗಳು ಕಂಡು ಬಂದರೂ ಈ ಬಾರಿ ಯಾವುದೇ ಪಂದ್ಯವನ್ನು ಮುಂದೂಡಿಲ್ಲ. ಅಷ್ಟೇ ಅಲ್ಲದೆ ಐಪಿಎಲ್​ ಅನ್ನು ಮುಂದೂಡುವ ಬಗ್ಗೆ ಗಂಭೀರವಾಗಿ ಚರ್ಚಿಸಿಲ್ಲ. ಆದರೆ ಈ ನಿರ್ಧಾರವು ನಿಸ್ಸಂದೇಹವಾಗಿ BCCI ವಿಪತ್ತಿಗೆ ಕರೆ ನೀಡುವಂತಿದೆ. ಏಕೆಂದರೆ ಏಪ್ರಿಲ್ 1 ರಂದು, ಭಾರತದಲ್ಲಿ ಕೇವಲ 1,335 ಕೊರೋನಾ ಪ್ರಕರಣಗಳು ವರದಿಯಾಗಿವೆ. ಆದರೆ ಶುಕ್ರವಾರ, ಈ ಸಂಖ್ಯೆ 2,451 ಕ್ಕೆ ಏರಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೊಸ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಅಂದರೆ ಈ ಹಿಂದೆ ಕೂಡ ಒಂದು ನಗರದಲ್ಲಿ ಕಾಣಿಸಿಕೊಂಡ ಬಳಿಕ, ಇಡೀ ದೇಶದಾದ್ಯಂತ ಕೊರೋನಾ ಪ್ರಕರಣಗಳು ದಿಢೀರಣೆ ಹೆಚ್ಚಾಗಿತ್ತು.

ಪ್ರಸ್ತುತ, ಮುಂಬೈನಲ್ಲಿ ದಿನಕ್ಕೆ ಸುಮಾರು 100 ಪ್ರಕರಣಗಳು ಕಂಡು ಬರುತ್ತಿದೆ ವರದಿಯಾಗಿದೆ. ಆದರೆ ಅಂಕಿಅಂಶಗಳು ಹೆಚ್ಚುತ್ತಲೇ ಇದ್ದರೆ, ಮುಂಬೈ ಪ್ರದೇಶವನ್ನು ವ್ಯಾಪಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕಳೆದ ಸೀಸನ್​ನಲ್ಲಿ ಕೆಕೆಆರ್ ತಂಡದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಕೊರೋನಾ ಸೋಂಕು ಆ ಬಳಿಕ SRH ಮತ್ತು DC ತಂಡಗಳ ಆಟಗಾರರಲ್ಲೂ ಕಾಣಿಸಿಕೊಂಡಿತ್ತು. ಹೀಗಾಗಿ ಪಂದ್ಯಾವಳಿಯನ್ನು ಮುಂದೂಡಬೇಕಾಯಿತು. ಅಲ್ಲದೆ ಎರಡನೇ ಭಾಗವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆಡಲಾಯಿತು.

ಈ ಬಾರಿ ಪ್ರೇಕ್ಷಕರಿಗೆ ಸ್ಟೇಡಿಯಂಗೆ ಅನುಮತಿಸಿರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಪ್ರಸ್ತುತ ಸಂಪೂರ್ಣ ಸುರಕ್ಷತೆಯೊಂದಿಗೆ ಐಪಿಎಲ್ ಆಡುತ್ತಿದ್ದರೂ 9 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದಾಗ್ಯೂ ಬಿಸಿಸಿಐ ಖಾಲಿ ಸ್ಟೇಡಿಯಂನಲ್ಲಿ ಟೂರ್ನಿ ನಡೆಸುವ ನಿರ್ಧಾರ ಕೂಡ ತೆಗೆದುಕೊಂಡಿಲ್ಲ. ಹೀಗಾಗಿ ಈ ಬಾರಿ ಕೊರೋನಾತಂಕ ಕಳೆದ ಬಾರಿಗಿಂತ ಹೆಚ್ಚು ಎಂದೇ ಹೇಳಬಹುದು.

ವಿಶ್ವದಾದ್ಯಂತ ಕಟ್ಟುನಿಟ್ಟಾದ ಮಾರ್ಗಸೂಚಿಗಳ ಅಡಿಯಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಉದಾಹರಣೆಗೆ, ಇಂಗ್ಲಿಷ್ ಪ್ರೀಮಿಯರ್ ಲೀಗ್ ಅಥವಾ ನ್ಯಾಷನಲ್ ಫುಟ್‌ಬಾಲ್ ಲೀಗ್‌ನಲ್ಲಿನ ಅನೇಕ ಶಿಬಿರಗಳು COVID ಪ್ರಕರಣಗಳ ಏಕಾಏಕಿ ಹೆಚ್ಚಳದಿಂದ ಹಾನಿಗೊಳಗಾಗಿವೆ. ಆದರೆ ಈ ಟೂರ್ನಿಗಳನ್ನು ನಿಲ್ಲಿಸುವ ಬದಲು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಮಾರ್ಗಗಳನ್ನು ರೂಪಿಸಿತು. ಆದರೆ ಐಪಿಎಲ್​ನಲ್ಲಿ ಅಂತಹ ಯಾವುದೇ ಕ್ರಮ ಕೈಗೊಂಡಿಲ್ಲ.

ಮತ್ತೊಂದೆಡೆ ದೇಶದಲ್ಲಿ ಕಳೆದ ಒಂದು ಅಥವಾ ಎರಡು ವಾರಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಸಾವಿನ ಪ್ರಮಾಣ ಮತ್ತು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ನಿಯಂತ್ರಣದಲ್ಲಿದೆ. ಅಲ್ಲದೆ, ಮುಂಬೈ ಮತ್ತು ಪುಣೆಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿಲ್ಲ. ಹೀಗಾಗಿ ಬಿಸಿಸಿಐ ಕೂಡ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಹೊಸ ಮಾರ್ಗಸೂಚಿ ಅಥವಾ ಸುರಕ್ಷತಾ ನಿಯಮಗಳಿಲ್ಲದೇ ಪ್ರೇಕ್ಷಕರಿಗೆ ಅವಕಾಶ ನೀಡಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಂತೆ ಇತರೆ ತಂಡಗಳಲ್ಲೂ ಕೊರೋನಾ ಪ್ರಕರಣಗಳು ಕಾಣಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿ ಬಿಸಿಸಿಐ ಪ್ರೇಕ್ಷಕರ ವಿಷಯದಲ್ಲಿ ಮತ್ತು ಆಟಗಾರರ ವಿಷಯದಲ್ಲಿ ಮತ್ತಷ್ಟು ಜಾಗೃತೆವಹಿಸಿದರೆ ಮಾತ್ರ ಐಪಿಎಲ್​ ನಿರಾಳವಾಗಿ ನಡೆಯಲಿದೆ. ಇಲ್ಲದಿದ್ರೆ ಕೊರೋನಾ ಪ್ರಕರಣಗಳ ಕಾರಣ ಮತ್ತೆ ಐಪಿಎಲ್ ಮುಂದೂಡಬೇಕಾಗಿ ಬರಬಹುದು.

ಇದನ್ನೂ ಓದಿ: Virat Kohli: IPL ನಲ್ಲಿ ವಿರಾಟ್ ಕೊಹ್ಲಿ ಎಷ್ಟು ಬಾರಿ ಝೀರೊಗೆ ಔಟಾಗಿದ್ದಾರೆ ಗೊತ್ತಾ?

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ