AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿಗೆ ತಾಯ್ತನದ ಹೆಸರಿನಲ್ಲಿ ಯಾರದ್ದೋ ಮಕ್ಕಳನ್ನ ನೀಡಿ ವಂಚನೆ; ಆರೋಪಿ ಅಂದರ್

ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಹೆಸರಿನಲ್ಲಿ ಭರವಸೆ ನೀಡುತ್ತಿದ್ದ ಭಾನುಮತಿ, ಕದ್ದು ತಂದಿರುವ ಯಾರದ್ದೋ ಮಕ್ಕಳನ್ನ ನಿಮ್ಮದೇ ಮಗು ಎಂದು ನೀಡಿ ಹಣ ಪಡೆಯುತ್ತಿದ್ದಳು. ಸದ್ಯ ಆರೋಪಿ ಬಸವನಗುಡಿ‌ ಮಹಿಳಾ ಠಾಣಾ ಪೊಲೀಸರ ವಶದಲ್ಲಿದ್ದಾಳೆ. 

ಬಾಡಿಗೆ ತಾಯ್ತನದ ಹೆಸರಿನಲ್ಲಿ ಯಾರದ್ದೋ ಮಕ್ಕಳನ್ನ ನೀಡಿ ವಂಚನೆ; ಆರೋಪಿ ಅಂದರ್
ಬಂಧಿತ ಆರೋಪಿ ಭಾನುಮತಿ
TV9 Web
| Edited By: |

Updated on: Apr 23, 2022 | 9:07 PM

Share

ಬೆಂಗಳೂರು: ಬಾಡಿಗೆ ತಾಯ್ತನದ (Motherhood) ಹೆಸರಿನಲ್ಲಿ ಯಾರದ್ದೋ ಮಕ್ಕಳನ್ನ ನೀಡಿ ವಂಚಿಸಿದ ಆರೋಪಿಯನ್ನು ದಕ್ಷಿಣ ವಿಭಾಗದ ಮಾನವ ಕಳ್ಳಸಾಗಣಿಕೆ ನಿಗ್ರಹ ದಳದಿಂದ ಬಂಧನ ಮಾಡಲಾಗಿದೆ. ತಲೆಮರೆಸಿಕೊಂಡಿದ್ದ ಭಾನುಮತಿ ಬಂಧಿತ ಆರೋಪಿ. ಮಕ್ಕಳ ಕಳ್ಳತನ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದಳು. ಪೋಷಕರನ್ನ ಪುಸಲಾಯಿಸಿ, ಕದ್ದು ಮಕ್ಕಳನ್ನ ತಂದು ಇತರೆ ಆರೋಪಿಗಳು ಭಾನುಮತಿಗೆ ನೀಡುತ್ತಿದ್ದರು. ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಹೆಸರಿನಲ್ಲಿ ಭರವಸೆ ನೀಡುತ್ತಿದ್ದ ಭಾನುಮತಿ, ಕದ್ದು ತಂದಿರುವ ಯಾರದ್ದೋ ಮಕ್ಕಳನ್ನ ನಿಮ್ಮದೇ ಮಗು ಎಂದು ನೀಡಿ ಹಣ ಪಡೆಯುತ್ತಿದ್ದಳು. ಸದ್ಯ ಆರೋಪಿ ಬಸವನಗುಡಿ‌ ಮಹಿಳಾ ಠಾಣಾ ಪೊಲೀಸರ ವಶದಲ್ಲಿದ್ದಾಳೆ.

ನಕಲಿ ದಾಖಲೆ ಸೃಷ್ಟಿಸಿ ಜೈಲಿನಲ್ಲಿದ್ದವರಿಗೆ ಜಾಮೀನು ನೀಡುತ್ತಿದ್ದವರ ಬಂಧನ

ನಕಲಿ ದಾಖಲೆ ಸೃಷ್ಟಿ ಮಾಡಿ, ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ಕೊಡುತ್ತಿದ್ದ ಗ್ಯಾಂಗ್​ನ್ನು ಕೆ.ಆರ್​.ಮಾರ್ಕೆಟ್​ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸರು ಪುಟ್ಟಸ್ವಾಮಿ, ನಸ್ರೀನ್, ರಾಜಣ್ಣ, ಮಂಜುನಾಥ್, ಆಂಜಿನಪ್ಪ, ಕುಮಾರ್, ಚಂದ್ರಗೌಡ, ಸೊಣ್ಣೆಗೌಡ ಮತ್ತು ಟಿ.ಎಂ. ರಾಜಪ್ಪ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಜೈಲಿನಲ್ಲಿರುವ ಯಾವುದೇ ಆರೋಪಿಗೆ ಬೇಕಾದರೂ ಇವರು ಜಾಮೀನು ಕೊಡಿಸಲು ಸಿದ್ಧರಿರುತ್ತಿದ್ದರು. ಅದಕ್ಕಾಗಿ ನಕಲಿ ದಾಖಲೆ ಸೃಷ್ಟಿಸಿ, ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದರು. ರೈತರ ಹೆಸರಿನಲ್ಲಿ ಇರುವ ಆಸ್ತಿಗಳ ದಾಖಲೆಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸುವ ಜತೆ, ಪ್ರತಿಷ್ಠಿತ ಕಂಪನಿಗಳ ಹೆಸರಲ್ಲೂ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು.

ಎಲ್ಲ ನಕಲಿ ದಾಖಲೆಗಳನ್ನೂ ನಾಜೂಕಾಗಿ ತಯಾರಿಸಿ, ಆರೋಪಿಗಳನ್ನು ಜೈಲಿನಿಂದ ಕರೆದುಕೊಂಡು ಬಂದ ಬಳಿಕ, ಅವರಿಂದ ಇಂತಿಷ್ಟು ಎಂದು ಹಣ ಪಡೆಯುತ್ತಿದ್ದರು. 9 ಮಂದಿಯನ್ನು ಬಂಧಿಸಿರುವ ಪೊಲೀಸರು ಅವರಿಂದ ನಾಲ್ಕು ಸರ್ಕಾರಿ ಸೀಲುಗಳು, ನಕಲಿ ಆಧಾರ್​, ಪಹಣಿ, ಸಲ್ವೆನ್ಸಿ ಸರ್ಟಿಫಿಕೇಟ್​​ಗಳನ್ನೂ ವಶಪಡಿಸಿಕೊಂಡಿದ್ದಾರೆ. ಹಲವು ಕಂಪನಿಗಳಿಗೆ ಸೇರಿದ 100ಕ್ಕೂ ಹೆಚ್ಚು ಪಹಣಿಗಳು ಈ ಆರೋಪಿಗಳ ಬಳಿ ಇದ್ದವು. ಇವರು ಚಿಕ್ಕಬಳ್ಳಾಪುರದ ಹರಿ ಗ್ರಾಫಿಕ್ಸ್​ ಅಂಗಡಿಯಲ್ಲಿ ನಕಲಿ ದಾಖಲೆಗಳ ತಯಾರು ಮಾಡುತ್ತಿದ್ದರು. ಈ ಬಗ್ಗೆ ಕೆ.ಆರ್.ಮಾರ್ಕೆಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಹಾವೇರಿಯಲ್ಲಿ ಆಯೋಜಿಸಲು ಸರ್ಕಾರ ನಿರ್ಧಾರ

ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಓದಿ, ಸ್ವಾವಲಂಬಿಗಳಾಗಿ, ಗೌರವಾನ್ವಿತ ಬದುಕು ನಡೆಸಬೇಕು: ಶೋಭಾ ಕರಂದ್ಲಾಜೆ