AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯಿಂದಲೇ ಮಗನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆಗೆ ಯತ್ನ

ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆರ್.ಟಿ.ನಗರದ ಚಾಮುಂಡಿನಗರದಲ್ಲಿ ನಡೆದಿದೆ. ಸುಲೇಮಾನ್(18) ಕೊಲೆಯಾದ ಯುವಕ.

ತಂದೆಯಿಂದಲೇ ಮಗನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆಗೆ ಯತ್ನ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 06, 2022 | 11:01 PM

Share

ಬೆಂಗಳೂರು: ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆರ್.ಟಿ.ನಗರದ ಚಾಮುಂಡಿನಗರದಲ್ಲಿ ನಡೆದಿದೆ. ಸುಲೇಮಾನ್(18) ಕೊಲೆಯಾದ ಯುವಕ. ಕಬ್ಬಿಣದ ರಾಡ್​ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರ ಹತ್ಯೆ ಮಾಡಲಾಗಿದೆ. ಹಣಕ್ಕಾಗಿ ತಂದೆ ಶಂಶೀರ್​ನನ್ನು ಪುತ್ರ ಸುಲೇಮಾನ್ ಪೀಡಿಸುತ್ತಿದ್ದ ನು. ​ಹಣ ನೀಡದಿದ್ರೆ ಮಲತಾಯಿಯನ್ನು ಕೊಲ್ಲುವುದಾಗಿ ತಂದೆಗೆ ಸುಲೇಮಾನ್​ ಧಮ್ಕಿ ಹಾಕಿದ್ದನು.

ಬಾರ್ ಬೆಂಡಿಂಗ್ ಕೆಲಸ ಮಾಡುವ ಶಂಶೀರ್​ಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನೆಲೆಸಿದ್ದಾರೆ.  ಮೊಹಮ್ಮದ್ ಶಂಶೀರ್​  2ನೇ ಪತ್ನಿ ಜತೆ ಬೆಂಗಳೂರಲ್ಲಿ ನೆಲೆಸಿದ್ದಾನೆ. ಸುಲೇಮಾನ್​ ಗ್ಯಾರೇಜ್​ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದನು. ಮೊಹಮ್ಮದ್​ ಶಂಶೀರ್​ನ ಮೊದಲ ಪತ್ನಿಯ ಮಗ ಸುಲೇಮಾನ್.  ಇಂದು ಬೆಳಗ್ಗೆ ಮನೆಯಲ್ಲಿ ಶಂಶೀರ್, ಸುಲೇಮಾನ್​ ನಡುವೆ ಜಗಳ ಉಂಟಾಗಿದೆ.  2ನೇ ಪತ್ನಿಯನ್ನು ಕೊಲ್ಲುವ ಆತಂಕದಿಂದ ತಂದೆ ಮಗನನ್ನು ಕೊಂದಿದ್ದಾನೆ.  ಆರೋಪಿ ಮೊಹಮ್ಮದ್ ಶಂಶೀರ್​ನನ್ನ ಪೊಲೀಸರು ಬಂಧಿಸಿದ್ದು,  ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನುಓದಿ: ಚಡ್ಡಿಗಳು ಮಾಡೋದು ಚಡ್ಡಿ ಕೆಲಸಾನೆ ಚಡ್ಡಿಗಳು ಇನ್ನೇನ್ ಕೆಲಸ ಮಾಡುತ್ತವೆ: ಸಿದ್ದರಾಮಯ್ಯ

ಮಾರಕಾಸ್ತ್ರಗಳೊಂದಿಗೆ ವ್ಯಕ್ತಿ ಮೇಲೆ ಅಟ್ಯಾಕ್ ಮಾಡಲು ಯತ್ನ ಓರ್ವನನ್ನು ಪೊಲೀಸರಿಗೊಪ್ಪಿಸಿದ ಜನ

ಬೆಂಗಳೂರು: ಮಾರಕಾಸ್ತ್ರಗಳೊಂದಿಗೆ ವ್ಯಕ್ತಿ ಮೇಲೆ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಅನ್ನಪೂರ್ಣೇಶ್ವರಿ ನಗರದ ವಿಶ್ವೇಶ್ವರಯ್ಯ ಲೇಔಟ್​​ನಲ್ಲಿ ನಡೆದಿದೆ. ಮುನಿಕೃಷ್ಣ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದ ಮೂವರ ಪೈಕಿ ಒಬ್ಬನನ್ನ ಹಿಡಿದು ಜನರು ಪೊಲೀಸರಿಗೊಪ್ಪಿಸಿದ್ದಾರೆ. ಬೈಕ್​ನಲ್ಲಿ ಬಂದಿದ್ದ ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದು ಒಬ್ಬನನ್ನು ಬಂಧಿಸಲಾಗಿದೆ. ಕಿರಣ್​ ಎಂಬುವವನನ್ನ ಹಿಡಿದು ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನು ಓದಿ: ಮಳಲಿ ಮಸೀದಿ ವಿವಾದ; ಅರ್ಜಿ ವಿಚಾರಣೆ ಜೂನ್ 9ಕ್ಕೆ ಮುಂದೂಡಿದ ಮಂಗಳೂರು ಕೋರ್ಟ್ 

ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆಗೆ ಯತ್ನ

ಮಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಹತ್ಯೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಬೈಕಂಪಾಡಿ ಜಂಕ್ಷನ್ ಬಳಿ ನಡೆದಿದೆ.  ರವಿರಾಜ್ ಬಂಗೇರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ.  ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.  ಗಾಯಾಳು ರವಿರಾಜ್​​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ರವಿರಾಜ್ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:01 pm, Mon, 6 June 22

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ