ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿ ಅರೆಸ್ಟ್!

ಮೃತ ಸಂತೋಷ್ ಮಾರ್ಚ್ 1 ರಂದು ಬೆಳಗಾವಿ ತಾಲೂಕಿನ ಕಣಬರಗಿಗೆ ಬಂದಿದ್ದ. ಈ ವೇಳೆ ಪುಸಲಾಯಿಸಿ ಸ್ನೇಹಿತನನ್ನು ಮದ್ಯ ಕುಡಿಯಲು ಕರೆದುಕೊಂಡು ಹೋಗಿದ್ದ. ಮಾಲಿನಿ ನಗರ ಬಳಿ ಗದ್ದೆಯೊಂದರಲ್ಲಿ ಮದ್ಯಪಾನ ಮಾಡಿಸಿ ಹತ್ಯೆ ಮಾಡಿದ್ದಾನೆ.

ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿ ಅರೆಸ್ಟ್!
ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ
Follow us
TV9 Web
| Updated By: sandhya thejappa

Updated on:Mar 06, 2022 | 11:16 AM

ಬೆಳಗಾವಿ: ಟವೆಲ್​ನಿಂದ ಕತ್ತು ಹಿಸುಕಿ ಸ್ನೇಹಿತನ ಹತ್ಯೆಗೈದು (Murder) ಬಣವೆಯಲ್ಲಿ ಸುಟ್ಟು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಜೊತೆ ಅನೈತಿಕ (Immoral Relationship) ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ನೇಹಿತ ಸಂತೋಷ ಫರೀಟ್​​ನನ್ನು ಪರಶುರಾಮ ಕುರುಬರ ಕೊಲೆ ಮಾಡಿದ್ದಾನೆ. ಸಂತೋಷ್ ಫರೀಟ್(36) ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ನಿವಾಸಿ. ಆರೋಪಿ ಪರಶುರಾಮ ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ. ಕೊಲೆಯಾದ ಸಂತೋಷ್ ಪತ್ನಿ ಜೊತೆ ಪರಶುರಾಮ ಕುರಬರ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೇ ಪರಶುರಾಮ ಸ್ನೇಹಿತನ ಪತ್ನಿಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ.

ಮೃತ ಸಂತೋಷ್ ಮಾರ್ಚ್ 1 ರಂದು ಬೆಳಗಾವಿ ತಾಲೂಕಿನ ಕಣಬರಗಿಗೆ ಬಂದಿದ್ದ. ಈ ವೇಳೆ ಪುಸಲಾಯಿಸಿ ಸ್ನೇಹಿತನನ್ನು ಮದ್ಯ ಕುಡಿಯಲು ಕರೆದುಕೊಂಡು ಹೋಗಿದ್ದ. ಮಾಲಿನಿ ನಗರ ಬಳಿ ಗದ್ದೆಯೊಂದರಲ್ಲಿ ಮದ್ಯಪಾನ ಮಾಡಿಸಿ ಹತ್ಯೆ ಮಾಡಿದ್ದಾನೆ. ಟವೆಲ್​ನಿಂದ ಕತ್ತು ಹಿಸುಕಿ, ಭತ್ತದ ಬಣವೆಯಲ್ಲಿ ಶವವಿಟ್ಟು ಬೆಂಕಿ ಹಚ್ಚಿದ್ದ ಪರಶುರಾಮ ಪರಾರಿಯಾಗಿದ್ದ. ಪರಶುರಾಮ, ಸಂತೋಷ ಬೈಕ್ನಲ್ಲಿ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಬೈಕ್ ಸಮೇತ ಆರೋಪಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದಲ್ಲಿ ಚಿನ್ನಾಭರಣಗಳು ಕಳವು: ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಮನೆ ಕಿಟಕಿ ರಾಡ್ ಮುರಿದು ಕಳ್ಳತನ ನಡೆಸಿದ್ದಾರೆ. ನಾರಯಣಪ್ಪ ಅವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದ್ದು, 2 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಕಳುವಾಗಿದೆ. ತುಮಕೂರಿನ ಸಂಬಂಧಿ ಮನೆಗೆ ತೆರಳಿ ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಡಿಓ ಅಮಾನತ್ತು: ಮೈಸೂರು: ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪಿಡಿಓ ಮಹೇಶ್ ಅಮಾನತ್ತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್ ಪೂರ್ಣಿಮಾ ಆದೇಶ ಹೊರಡಿಸಿದ್ದಾಋಎ. ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ದೂರು ನೀಡಿದ್ದ ಸದಸ್ಯರು ಕಾರ್ಯನಿರ್ವಾಹಕ ಅಧಿಕಾರಿಯಿಂದ ವರದಿ ಪಡೆದು ಅಮಾನತ್ತು ಮಾಡಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಹೆಚ್ ಡಿ ಕೋಟೆ ತಾಲೂಕು ಆಲನಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಪಿಡಿಓ, ಗ್ರಾಪಂ ಸದಸ್ಯರ ನಡುವೆ ಕಿತ್ತಾಟ ನಡೆದಿತ್ತು.

ಸಿಲಿಂಡರ್ ಸ್ಫೋಟ; ತಪ್ಪಿದ ಭಾರಿ ಅನಾಹುತ: ಬಾಗಲಕೋಟೆ: ಸಿಲಿಂಡರ್ ಸ್ಫೋಟವಾಗಿ ಮೂವರಿಗೆ ಗಾಯವಾಗಿದೆ. ನವನಗರದ ಸೆಕ್ಟರದ ನಂಬರ್ 40ರಲ್ಲಿ ಈ ಘಟನೆ ಸಂಭವಿಸಿದೆ. ಬಂಡಿವಡ್ಡರ್ ಎನ್ನುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ  ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಅಡುಗೆ ಮನೆಯಲ್ಲಿ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿವೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ

ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ -ತಿಳಿದುಕೊಳ್ಳಿ

ಉಕ್ರೇನ್​ ನೆರೆಯ ದೇಶಗಳಿಂದ ಭಾರತೀಯರ ಏರ್​ಲಿಫ್ಟ್; ಎಲ್ಲಾ ಭಾರತೀಯರು ಖಾರ್ಕಿವ್ ನಗರ ತೊರೆದಿದ್ದಾರೆ ಎಂದ ಭಾರತೀಯ ವಿದೇಶಾಂಗ ಸಚಿವಾಲಯ

Published On - 10:32 am, Sun, 6 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್