ಬೆಂಗಳೂರು, (ನವೆಂಬರ್ 26): ಪ್ರಿಯಕನೋರ್ವ ತನ್ನ ಪ್ರೇಯಸಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಇಂದಿರಾ ನಗರದ ಸರ್ವಿಸ್ ಅಪಾರ್ಟ್ ಮೆಂಟ್ನಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಅಸ್ಸಾಂ ಮೂಲದ ಮಾಯಾ ಗೊಗೋಯಿ ಎಂದು ಗುರುತಿಸಲಾಗಿದ್ದು, ಮಾಯಾಳನ್ನು ಕೊಂದು ಆರವ್ ಹಾರ್ನಿ ಎನ್ನುವಾತ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಈಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಿದ್ದ ಮಾಯಾ ಗೊಗೋಯಿ, ನವೆಂಬರ್ 23ರಂದು ಮಾಯಾ ಹಾಗೂ ಆಕೆಯ ಪ್ರಿಯಕರ ಆರವ್ ಹಾರ್ನಿ ಇಂದಿರಾನಗರದ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ರೂಮ್ ಬುಕ್ ಮಾಡಿಕೊಂಡು ತಂಗಿದ್ದರು. ಆದ್ರೆ, ಅದೇನಾಯ್ತೋ ಏನೋ ನಿನ್ನೆ (ನವೆಂಬರ್ 25) ಸಂಜೆ ಪ್ರಿಯಕರ ಆರವ್ ಹಾರ್ನಿ, ತನ್ನ ಪ್ರೇಯಸಿ ಮಾಯಾಳನ್ನು ಕೊಂದು ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಸಂಬಂಧಿ ಮನೆಯಲ್ಲಿ ಸ್ನಾನಕ್ಕೆಂದು ಹೋಗಿದ್ದ ಮಹಿಳೆ ಬಾತ್ರೂಮ್ನಲ್ಲಿ ನಿಗೂಢ ಸಾವು
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂದಿರಾನಗರ ಪೊಲೀಸರು ದೌಡಾಯಿಸಿ ಪರಿಶೀನಲೆ ನಡೆಸಿದ್ದು ಕೊಲೆಗೆ ನಿಖರ ಕಾರಣ ಏನು ಎನ್ನುವುದನ್ನು ತನಿಖೆ ನಡೆಸಿದ್ದಾರೆ. ಆದ್ರೆ, ಹೋಟೆಲ್ ರೂಮ್ ಒಳಗ್ಗೆ ಇಬ್ಬರೇ ಹೋಗಿರುವುದರಿಂದ ಪ್ರಿಯಕರನಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಪ್ರಾಥಮಿಕ ಮಾಹಿತಿ ಸಂಗ್ರಹ ಮಾಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ನವೆಂಬರ್ 23ರಂದು ಮಧ್ಯಾಹ್ನ ಮಾಯಾ ಗೊಗೋಯ್ ಹಾಗೂ ಆರವ್ ಹಾರ್ನಿ ಇಬ್ಬರು ಒಟ್ಟಿಗೆ ತಂಗಲು ಅಪಾರ್ಟ್ ಮೆಂಟ್ ಗೆ ಆಗಮಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 24 ರಂದೇ ಮಾಯಾ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೊಲೆ ಬಳಿಕ ಅದೇ ರೂಮ್ ನಲ್ಲಿಯೇ ಉಳಿದುಕೊಂಡಿದ್ದಾನೆ. ಅಲ್ಲಿಯೇ ಕೂತು ಸಿಗರೇಟ್ ಸೇದಿದ್ದಾನೆ. ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದು, ಇಂದು(ನವೆಂಬರ್ 26) ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಸರ್ವಿಸ್ ಅಪಾರ್ಟ್ ಮೆಂಟ್ನಿಂದ ಕಾಲ್ಕಿತ್ತಿದ್ದಾನೆ.
ಹೌದು..ಪ್ರೇಯಸಿಯ ಮೃತದೇಹವನ್ನು ಪೀಸ್ ಪೀಸ್ ಮಾಡುವ ಏನಾದರೂ ಪ್ಲಾನ್ ಮಾಡಿದ್ದ ಎನ್ನುವ ಅನುಮಾನ ಇಂದಿರಾನಗರ ಪೊಲೀಸರಿಗೆ ಬಂದಿದೆ. ಯಾಕಂದ್ರೆ, ಒಂದು ದಿನ ಮೃತದೇಹದ ಜೊತೆಗೆ ಕಾಲ ಕಳೆದಿದ್ದಾನೆ. ಹಾಗಾಗಿ ಮೃತದೇಹ ಪೀಸ್ ಪೀಸ್ ಮಾಡಿರುವ ಪ್ಲಾನ್ ಮಾಡಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಕೊನೆಗೆ ಪ್ಲಾನ್ ಫೇಲ್ ಆಗಿ ಮೃತದೇಹ ಬಿಟ್ಟು ಪಾರಾರಿಯಾಗಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.