ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ: ಅನುಮಾನದ ಭೂತಕ್ಕೆ ಎರಡು ಜೀವ ಬಲಿ

ಪತ್ನಿ ಮೇಲೆ ಸಂಶಯ ಕೊಲೆಯಲ್ಲಿ ಅಂತ್ಯವಾಗಿದೆ. ಸಂಶಯ ಪಿಶಾಚಿ ಗಂಡನೊಬ್ಬ ತನ್ನ ಮಡದಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ: ಅನುಮಾನದ ಭೂತಕ್ಕೆ ಎರಡು ಜೀವ ಬಲಿ
Wife And husband death
Edited By:

Updated on: Oct 27, 2022 | 7:24 PM

ಮಂಗಳೂರು: ದಾಂಪತ್ಯ ಎಂಬುದು ಎಷ್ಟು ಸುಂದರವಾದ ಸಂಬಂಧವೋ ಅದರಲ್ಲಿ ಕೊಂಚ ವ್ಯತ್ಯಾಸ ಉಂಟಾಯ್ತು ಅಂದ್ರೂ ಸಹ ಸಂಪೂರ್ಣ ಜೀವನವೇ ತಲೆ ಕೆಳಗಾಗುತ್ತೆ. ಒಂದಾಗಿ ಬಾಳಬೇಕಾದ ಜೀವಗಳ ನಡುವೆ ವಿರಸ ಮೂಡಿದ್ರೆ ಅದು ಎಂತಹ ವಿಕೋಪಕ್ಕೂ ದಾರಿ ಮಾಡಬಹುದು. ಇಂತಹದ್ದೇ ಒಂದು ದುರಂತ ಘಟನೆ ಕಡಲ ನಗರಿಯಲ್ಲಿ ನಡೆದು ಹೋಗಿದೆ.

ಹೌದು..ಬರೋಬ್ಬರಿ 26 ವರ್ಷಗಳ ದಾಂಪತ್ಯವೊಂದು ಕೊಲೆ ಹಾಗೂ ಆತ್ಮಹತ್ಯೆಯಲ್ಲಿ ದಾರುಣ ಅಂತ್ಯ ಕಂಡಿದೆ. ಇಬ್ಬರು ಮಕ್ಕಳು ಜೀವನದಲ್ಲಿ ಸೆಟಲ್​ ಆಗೋದನ್ನ ನೋಡುತ್ತ ವೃದ್ಧಾಪ್ಯವನ್ನು ಕಳೆಯಬೇಕಿದ್ದ ಜೋಡಿ ಶವವಾಗಿ ಮಲಗಿದ ದಾರುಣ ಘಟನೆಯೊಂದು ಮಂಗಳೂರು ನಗರ ಹೊರವಲಯದ ಉಳ್ಳಾಲ ಪೊಲೀಸ್​ ಠಾಣಾ ವ್ಯಾಪ್ತಿಯ ಸೋಮೇಶ್ವರ ಪಿಲಾರ್​ ಎಂಬಲ್ಲಿ ಸಂಭವಿಸಿದೆ. ಹೆಂಡತಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನ ಹೊಂದಿದ್ದ ಪತಿಯು ಆಕೆಯನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.

ನೇಣು ಹಾಕಿಕೊಂಡ ಹೆಂಡತಿಯನ್ನು ಕಾಪಾಡುವ ಬದಲು ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಾ ಕುಳಿತ ಗಂಡ!

ಮೃತ ಪತ್ನಿಯನ್ನು 46 ವರ್ಷದ ಶೋಭಾ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ಪೋಷಕರಾದ ಶೋಭಾ ಹಾಗೂ 55 ವರ್ಷದ ಶಿವಾನಂದ ದಾಪಂತ್ಯದಲ್ಲಿ ಮದುವೆಯಾದ ದಿನದಿಂದಲೂ ವಿರಸವಿತ್ತಂತೆ. ಪತ್ನಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಭೂತ ಶಿವಾನಂದನನ್ನೂ ಎಂದಿಗೂ ಕಾಡುತ್ತಿತ್ತು. ಪುತ್ರಿಯನ್ನು ವಿವಾಹ ಮಾಡಿಕೊಟ್ಟಿದ್ದ ಶೋಭಾ ಹಾಗೂ ಶಿವನಾಂದ ಪುತ್ರನ ಜೊತೆಯಲ್ಲಿ ಮನೆಯಲ್ಲಿ ವಾಸವಿದ್ದು. ಇಂದು(ಅ.27) ಬೆಳಗ್ಗೆ ಪುತ್ರ ಕಾರ್ತಿಕ್​ ಕೆಲಸಕ್ಕೆ ತೆರಳಿದ ಬಳಿಕ ಘನಘೋರ ದುರಂತವೊಂದು ಸಂಭವಿಸಿದೆ.

ಪತ್ನಿಯ ಜೊತೆ ಬೆಳ್ಳಂ ಬೆಳಗ್ಗೆ ಜಗಳ ಶುರುವಿಟ್ಟುಕೊಂಡಿದ್ದ ಶಿವಾನಂದ ಈ ಜಗಳ ವಿಕೋಪಕ್ಕೆ ತಿರುಗಿದ್ದೇ ತಡ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಪತ್ನಿಯ ಸಂಬಂಧಿಗಳಿಗೆ ಕರೆ ಮಾಡಿ ನಾನು ಸಾಯುತ್ತೇನೆ. ನನ್ನ ಶವಕ್ಕೆ ಮುಡಿಸಲು ಹೂವು ತನ್ನಿ ಎಂದು ಹೇಳಿ ಕಾಲ್​ ಇಟ್ಟವನೇ ಅಲ್ಲೇ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಒಟ್ಟಿನಲ್ಲಿ ಮಕ್ಕಳ ಪ್ರಗತಿಯನ್ನು ನೋಡ್ತಾ ಜೊತೆಯಾಗಿ ಬಾಳಬೇಕಿದ್ದ ಈ ಜೋಡಿ ಈ ರೀತಿ ದಾರುಣ ಅಂತ್ಯ ಕಂಡಿದ್ದು ದುರಂತವೇ ಸರಿ.

ಅಶೋಕ್​ ಟಿವಿ 9 ಮಂಗಳೂರು

Published On - 7:21 pm, Thu, 27 October 22