ಪ್ರೀತಿಸಲು ನಿರಾಕರಿಸಿದ್ದಕ್ಕೆ ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ! ಆರೋಪಿ ಪರಾರಿ

ಪ್ರೀತಿಸಲು ನಿರಾಕರಿಸಿದ್ದಕ್ಕೆ ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ! ಆರೋಪಿ ಪರಾರಿ
ಆರೋಪಿ ನಾಗೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

TV9kannada Web Team

| Edited By: sandhya thejappa

Apr 28, 2022 | 12:17 PM

ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ (Acid) ದಾಳಿ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಸುಂಕದಕಟ್ಟೆ ಮುತ್ತೂಟ್ ಫಿನ್​​ಕಾರ್ಪ್​ ಬಳಿ ಸಂಭವಿಸಿದೆ. ಪ್ರೇಮಿ ನಾಗೇಶ್ ಎಂಬಾತ ಆ್ಯಸಿಡ್ ಹಾಕಿ ವಿಕೃತಿ ಮೆರೆದಿದ್ದಾನೆ. ಪ್ರೀತಿಸುವಂತೆ ಯುವತಿಯ ಹಿಂದೆ ನಾಗೇಶ್ ಬಿದ್ದಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ನಾಗೇಶ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಯುವತಿ ಹೆಗ್ಗನಹಳ್ಳಿ ನಿಯಾಸಿ. ನಾಗೇಶ್ ಹೆಗ್ಗನಹಳ್ಳಿಯಲ್ಲಿಯೇ ಬಾಡಿಗೆಗೆ ಇದ್ದ. ಯುವತಿ ಎಂ ಕಾಂ ವಿದ್ಯಾಭ್ಯಾಸ ಮಾಡಿದ್ದಾಳೆ. ಇತ್ತೀಚೆಗೆ ಮುತೂಟ್ ಫಿನ್​ಕಾರ್ಪ್​ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. 8 ರಿಂದ 9 ತಿಂಗಳಿಂದ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಳು. ನಾಗೇಶ್ ಪ್ರೀತಿ ಮಾಡುವಂತೆ ಯುವತಿ ಹಿಂದೆ ಬಿದ್ದಿದ್ದ. ಆದರೆ ಯುವತಿ ನೀನು ನನಗೆ ಅಣ್ಣನ‌ ರೀತಿ ಎಂದಿದ್ದಳಂತೆ. ಆದರೂ ಮಾತು ಕೇಳದೇ ಪೀಡಿಸುತ್ತಿದ್ದನಂತೆ. ಇಂದು‌ ಬೆಳಗ್ಗೆ ಕೆಲಸಕ್ಕೆ ಬಂದ ಯುವತಿಯನ್ನು ನಾಗೇಶ್ ಫಾಲೊ ಮಾಡಿಕೊಂಡು ಬಂದಿದ್ದ. ಮತ್ತೆ ಪ್ರೀತಿ ಮಾಡುವಂತೆ ಪೀಡಿಸಿದ್ದ.  ಒಪ್ಪದಿದ್ದಾಗ ಆ್ಯಸಿಡ್ ಎರಚಿದ್ದಾನೆ.

ಈ ಬಗ್ಗೆ ಹೇಳಿಕೆ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್, ಬೆಳಗ್ಗೆ 8.30ರಿಂದ 8.45ರ ಸುಮಾರಿಗೆ ಌಸಿಡ್​ ದಾಳಿ ನಡೆದಿದೆ. ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಆ್ಯಸಿಡ್ ದಾಳಿ ನಡೆದಿದೆ. ಯುವತಿಯ ಕತ್ತು, ಬೆನ್ನು, ತಲೆ ಭಾಗಕ್ಕೆ ಗಾಯವಾಗಿದೆ. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಸೂಚಿಸಿದರೆ ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡುತ್ತೇವೆ. ಆರೋಪಿ ನಾಗೇಶ್​ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಗಾಯಾಳು ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೇಂಟ್​​ ಜಾನ್ಸ್​ ಆಸ್ಪತ್ರೆಗೆ  ಶಿಫ್ಟ್‌ ಮಾಡಲಾಗಿದೆ.

ಕಳ್ಳರ ಕೊಲೆ ಪ್ರಕರಣ; ಆರೋಪಿ ಅರೆಸ್ಟ್: ತುಮಕೂರು: ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ಕಳ್ಳರ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ನಂದೀಶ್​ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುಬ್ಬಿ ಸಿಪಿಐ ನಧಾಪ್ ನೇತೃತ್ವದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಕಳೆದ 21 ರಂದು ಪಂಪ್ ಸೆಟ್ ಕಳವು ಮಾಡಲು ಹೋಗಿದ್ದ ಇಬ್ಬರು ಕಳ್ಳರನ್ನ ಹಿಗ್ಗಾಮುಗ್ಗಾ ಥಳಿಸಿ ಗ್ರಾಮಸ್ಥರು ಕೊಲೆ‌ ಮಾಡಿದ್ದರು. ಇಬ್ಬರನ್ನು ದೊಣ್ಣೆಗಳಿಂದ ಹೊಡೆದು ದಾರುಣವಾಗಿ ಕೊಲೆ ಮಾಡಲಾಗಿತ್ತು. ನೀರಿನ ಕಟ್ಟೆ ಹಾಗೂ ತೋಟದ ರಸ್ತೆಯಲ್ಲಿ ಶವ ಪತ್ತೆಯಾಗಿತ್ತು. ಸದ್ಯ ಇದುವರೆಗರ ಒಟ್ಟು 20 ಜನ ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಕನ್ನಡ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಯುವಕ ಸಾವು: ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ ಬಳಿ ಯುವಕನ ಬರ್ಬರ ಹತ್ಯೆ ನಡೆದಿದೆ. ಧನ್ಯ ಕುಮಾರ್ (31) ಬರ್ಬರ ಕೊಲೆಯಾದ ಯುವಕ. ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾದ ಧನ್ಯ ಕುಮಾರ್, ಕನ್ನಡ ಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಕಳೆದ ರಾತ್ರಿ ಸ್ನೇಹಿತರ ಜೊತೆ ಊಟಕ್ಕೆ ಹೋಗಿದ್ದ ಎನ್ನಲಾಗಿದೆ. ಬೆಳಗ್ಗೆ ಜಮೀನು ಒಂದರಲ್ಲಿ ಹತ್ಯೆಯಾಗಿ ಬಿದ್ದಿದ್ದ.

ಇದನ್ನೂ ಓದಿ

ನಾಳೆ ದೆಹಲಿಗೆ ಹಾರಲಿರುವ ಸಿಎಂ ಬಸವರಾಜ ಬೊಮ್ಮಾಯಿ; ಕಾರಣ ಇಲ್ಲಿದೆ

Srinidhi Shetty: ಸಿಂಪಲ್ ಗೆಟಪ್​ನಲ್ಲೇ ಮಿಂಚಿದ ‘ಕೆಜಿಎಫ್ ಚಾಪ್ಟರ್ 2’ ಬೆಡಗಿ ಶ್ರೀನಿಧಿ ಶೆಟ್ಟಿ

Follow us on

Related Stories

Most Read Stories

Click on your DTH Provider to Add TV9 Kannada