ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಬಾಲಕನ ಮೇಲೆ ನಾಯಿ ದಾಳಿ; ಚಿಕಿತ್ಸೆ ಫಲಿಸದೇ ಬಾಲಕ ಸಾವು
ಕುಟುಂಬಸ್ಥರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಧಾರವಾಡ; ನಾಯಿ (Dog) ದಾಳಿಯಿಂದ ಬಾಲಕ ಸಾವನ್ನಪ್ಪಿರುವಂತಹ ಘಟನೆ ನಗರದ ನವಲೂರ ರೈಲು ನಿಲ್ದಾಣದ ಬಳಿ ನಡೆದಿದೆ. ಧಾರವಾಡ ತಾಲೂಕಿನ ದುಮ್ಮವಾಡ ಗ್ರಾಮದ ನಿವಾಸಿ ಪ್ರಥಮ ನೀರಲಕಟ್ಟಿ (11) ಸಾವನ್ನಪ್ಪಿದ ಬಾಲಕ. ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಬಾಲಕ ತೋಟಕ್ಕೆ ಹೋಗುವಾಗ ನಾಯಿ ದಾಳಿ ಮಾಡಿದೆ. ಕುಟುಂಬಸ್ಥರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳ ಬಂಧನ ಯಾದಗಿರಿ: ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಇದೇ ಏಪ್ರಿಲ್ 26 ರಂದು ಘಟನೆ ನಡೆದಿದ್ದು ನಿನ್ನೆ ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟಂಟಂ ಚಾಲಕ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಟಂಟಂ ವಾಹನದಲ್ಲಿ ಬರುವಾಗ ಚಾಲಕನಿಂದ ಅತ್ಯಾಚಾರ ನಡೆದಿತ್ತು. ಕಾಮುಕ ಹನುಮಂತ, ಕೃತ್ಯಕ್ಕೆ ಸಹಕರಿಸಿದ ನರಸಪ್ಪನನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕ್ಯಾಂಟರ್ ಡಿಕ್ಕಿ, ಇನೋವಾ ಕಾರು ಚಾಲಕ ಸೇರಿ ಇಬ್ಬರ ಸಾವು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದೊಡ್ಡಶೆಟ್ಟಿಕೆರೆ ಗ್ರಾಮದ ಬಳಿ ಕ್ಯಾಂಟರ್ ಡಿಕ್ಕಿಯಾಗಿ ಇನೋವಾ ಕಾರು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟವರು ಬೆಂಗಳೂರು ನಗರ ಜಿಲ್ಲೆ ಆನೇಕಲ್ ಮೂಲದವರು. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳ್ಳರ ಕೊಲೆ ಪ್ರಕರಣ; ಆರೋಪಿ ಅರೆಸ್ಟ್: ತುಮಕೂರು: ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ಕಳ್ಳರ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ನಂದೀಶ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗುಬ್ಬಿ ಸಿಪಿಐ ನಧಾಪ್ ನೇತೃತ್ವದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಕಳೆದ 21 ರಂದು ಪಂಪ್ ಸೆಟ್ ಕಳವು ಮಾಡಲು ಹೋಗಿದ್ದ ಇಬ್ಬರು ಕಳ್ಳರನ್ನ ಹಿಗ್ಗಾಮುಗ್ಗಾ ಥಳಿಸಿ ಗ್ರಾಮಸ್ಥರು ಕೊಲೆ ಮಾಡಿದ್ದರು. ಇಬ್ಬರನ್ನು ದೊಣ್ಣೆಗಳಿಂದ ಹೊಡೆದು ದಾರುಣವಾಗಿ ಕೊಲೆ ಮಾಡಲಾಗಿತ್ತು. ನೀರಿನ ಕಟ್ಟೆ ಹಾಗೂ ತೋಟದ ರಸ್ತೆಯಲ್ಲಿ ಶವ ಪತ್ತೆಯಾಗಿತ್ತು. ಸದ್ಯ ಇದುವರೆಗರ ಒಟ್ಟು 20 ಜನ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ;
ರಷ್ಯಾದ ಕುಡುಕ ಸೈನಿಕನಿಂದ ಗರ್ಭಿಣಿಯ ಮೇಲೆ ಅತ್ಯಾಚಾರ; ಇನ್ನೂ 20 ಜನರನ್ನು ಕರೆದುಕೊಂಡು ಬರುವುದಾಗಿ ಬೆದರಿಕೆ
Published On - 3:21 pm, Thu, 28 April 22