ಸೊಸೆಯನ್ನ ಮಂಚಕ್ಕೆ ಕರೆದ ಮಾವ : ಬರಲೊಪ್ಪದಕ್ಕೆ ಆಕೆಯ ಜೀವವನ್ನೇ ತೆಗೆದ!

| Updated By: ರಮೇಶ್ ಬಿ. ಜವಳಗೇರಾ

Updated on: Dec 15, 2024 | 6:37 PM

ಮಾವನೇ ಸೊಸೆ ಮೇಲೆ ಕಣ್ಣಾಕಿದ್ದ. ಎರಡ್ಮೂರು ಬಾರಿ ಸೊಸೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದ. ಆದ್ರೆ, ಸೊಸೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಚಾವ್ ಆಗಿದ್ದಳು. ಈ ವಿಚಾರ ಗೊತ್ತಾಗಿ ಊರಿನವರು, ಕುಟುಂಬಸ್ಥರು ಬುದ್ಧಿ ಹೇಳಿದ್ದರು. ಆದರೂ ಬುದ್ಧಿ ಕಲಿಯದ ಮಾವ ಮತ್ತೊಮ್ಮೆ ಸೊಸೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಇದಕ್ಕೆ ವಿರೋಧಿಸಿದ್ದಾಗ ಈ ಬಾರಿ ಆಕೆಯನ್ನು ಕೊಂದು ಬಿಟ್ಟಿದ್ದಾನೆ.

ಸೊಸೆಯನ್ನ ಮಂಚಕ್ಕೆ ಕರೆದ ಮಾವ : ಬರಲೊಪ್ಪದಕ್ಕೆ ಆಕೆಯ ಜೀವವನ್ನೇ ತೆಗೆದ!
ದುಳ್ಳಮ್ಮ(ಸೊಸೆ), ರಾಮಲಿಂಗಯ್ಯ (ಮಾವ)
Follow us on

ರಾಯಚೂರು, (ಡಿಸೆಂಬರ್ 15) : ಅತ್ಯಾಚಾರಕ್ಕೆ ಯತ್ನಸಿದ ವೇಳೆ ನಿರಾಕರಿಸಿದ್ದಕ್ಕೆ ಮಾವನೇ ತನ್ನ ಸೊಸೆಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ರಾಯಚೂರಿನ (Raichuru) ಜುಲಮಗೇರಾ ಗ್ರಾಮದಲ್ಲಿ ನಡೆದಿದೆ. ದುಳ್ಳಮ್ಮ (27) ಮೃತ ಮಹಿಳೆ. ರಾಮಲಿಂಗಯ್ಯ ಎನ್ನುವಾತ ಇದಕ್ಕೂ ಮುಂಚೆ ಎರಡ್ಮೂರು ಬಾರಿ ಸೊಸೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಬಳಿಕ ಗ್ರಾಮದ ಹಿರಿಯರು, ಕುಟುಂಬಸ್ಥರು ರಾಮಲಿಂಗಯ್ಯಗೆ ಬೈದು ಬುದ್ಧಿ ಹೇಳಿದ್ದರು. ಆದರೂ ಬುದ್ಧಿ ಕಲಿಯದ ಕಾಮುಕ ಮಾವ ರಾಮಲಿಂಗಯ್ಯ, ಮನೆಯಲ್ಲಿ ಯಾರು ಇಲ್ಲದ ವೇಳೆ ಮತ್ತೆ ಸೊಸೆ ದುಳ್ಳಮ್ಮನ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಆದ್ರೆ, ಇದಕ್ಕೆ ಸೊಸೆ ನಿರಾಕರಿಸಿದ್ದಕ್ಕೆ ಆಕೆಯನ್ನು ಸಲಾಕೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಈಗಾಗಲೇ ಎರಡ್ಮೂರು ಬಾರಿ ಸೊಸೆ ಧೂಳಮ್ಮನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದ್ರೆ, ಇದಕ್ಕೆ ಧೂಳಮ್ಮ ವಿರೋಧಿಸಿದ್ದಾಳೆ. ಆದ್ರೆ. ನಿನ್ನೆ(ಡಿಸೆಂಬರ್ 14) ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ ವೇಳೆ ಧೂಳಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೊಸೆ ಮಾವನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಹೋಗಿ ಸಲಿಕೆಯಿಂದ ತಲೆಗೆ ಒಡೆದು ಪರಾರಿಯಾಗಿದ್ದಾನೆ. ಪರಿಣಾಮ ಸೊಸೆ ಧೂಳಮ್ಮ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾಳೆ.

ಇದನ್ನೂ ಓದಿ: ರಾತ್ರಿಯಾದರೆ ಸಾಕು ವಿಡಿಯೋ ಕಾಲ್: ಇನ್ಸ್​ಪೆಕ್ಟರ್​​ ವಿರುದ್ಧ ಮಹಿಳಾ ಸಿಬ್ಬಂದಿ ದೂರು

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯರಗೇರಾ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು,ಇದೀಗ ನಾಪತ್ತೆಯಾಗಿರುವ ಆರೋಪಿ ರಾಮಲಿಂಗಯ್ಯ ಪತ್ತೆಗೆ ಬಲೆ ಬೀಸಿದ್ದಾರೆ.

ಎರಡ್ಮೂರು ಬಾರಿ ಕೆಟ್ಟ ಕೆಲಸಕ್ಕೆ ಕೈಹಾಕಿದಾಗ ಎಲ್ಲರೂ ಸೇರಿ  ರಾಮಲಿಂಗಯ್ಯನಿಗೆ ಬೈದು ಬುದ್ಧಿ ಹೇಳಿದ್ದರು. ಆದರೂ ಬುದ್ಧಿ ಕಲಿಯದ ರಾಮಲಿಂಗಯ್ಯ ತನ್ನ ಕಾಮದ ದಾಹಕ್ಕೆ ಓರ್ವ ಹೆಣ್ಣು ಮಗಳನ್ನು ಬಲಿಪಡೆದಿದ್ದು ದುರಂತವೇ ಸರಿ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:20 pm, Sun, 15 December 24