ರಾತ್ರಿಯಾದರೆ ಸಾಕು ವಿಡಿಯೋ ಕಾಲ್: ಇನ್ಸ್ಪೆಕ್ಟರ್ ವಿರುದ್ಧ ಮಹಿಳಾ ಸಿಬ್ಬಂದಿ ದೂರು
ಕಾನೂನು ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೇ ತಮ್ಮ ಠಾಣೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಬೆಳಕಿಗೆ ಬಂದಿದೆ. ಈ ಇನ್ಸ್ಪೆಕ್ಟರ್ಗೆ ರಾತ್ರಿಯಾದ್ರೆ ಸಾಕು ಮಹಿಳಾ ಪೇದೆಗಳಿಗೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಆಡಬಾರದ ಮಾತುಗಳನ್ನು ಆಡುತ್ತಾನೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ, ಯಾರು ಆ ಇನ್ಸ್ಪೆಕ್ಟರ್? ರಕ್ಷಕರೇ ಭಕ್ಷಕರಾದ ಸ್ಟೋರಿ ಇದು..
ಹುಬ್ಬಳ್ಳಿ, (ಡಿಸೆಂಬರ್ 15) : ಕಾನೂನು ಕಾಪಾಡಬೇಕಾದ ಇನ್ಸ್ಪೆಕ್ಟರ್ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರು ಎನ್ನುವರು ಠಾಣೆಯ ಮಹಿಳಾ ಕಾನ್ಸ್ಟೇಬಲ್ಸ್ಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸುರೇಶ್ ರಾತ್ರಿಯಾದರೆ ಮಹಿಳಾ ಸಿಬ್ಬಂದಿಗಳಿಗೆ ವಿಡಿಯೋ ಕರೆ ಮಾಡಿ ಕಾಮ ಪ್ರಚೋದಕ ಮತುಗಳನ್ನು ಆಡುತ್ತಾರೆ. ಕೆಟ್ಟದಾಗಿ ಅಸಹ್ಯ ಪದಗಳನ್ನು ಬಳಸಿಕೊಂಡು ಮಾತನಾಡುತ್ತಾರೆ. ಠಾಣೆಯಲ್ಲಿ ರಜೆ ಕೇಳಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.
ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ಮೇಲೆ ಗಂಭೀರ ಆರೋಪ ಬಂದಿದ್ದು. ಸುರೇಶ್ ರಾತ್ರಿಯಾದರೆ ಮಹಿಳಾ ಸಿಬ್ಬಂದಿಗಳಿಗೆ ವಿಡಿಯೋ ಕರೆ ಮಾಡಿ ಕಾಮ ಪ್ರಚೋದಕ ಮತುಗಳನ್ನು ಆಡುತ್ತಾರೆ. ಕೆಟ್ಟದಾಗಿ ಅಸಹ್ಯ ಪದಗಳನ್ನು ಬಳಸಿಕೊಂಡು ಮಾತನಾಡುತ್ತಾರೆ. ಇನ್ನು ರಜೆ ಕೇಲಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿ ಸುಮಾರು 3 ಪುಟಗಳ ಪತ್ರವನ್ನು ಬರೆದಿದ್ದಾರೆ.
ಇದನ್ನೂ ಓದಿ: ಸೊಸೆಯನ್ನ ಮಂಚಕ್ಕೆ ಕರೆದ ಮಾವ : ಬರಲೊಪ್ಪದಕ್ಕೆ ಆಕೆಯ ಜೀವವನ್ನೇ ತೆಗೆದ!
ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರು ವಿರುದ್ಧ ಮೂರು ಪುಟಗಳಷ್ಟು ದೂರು ಬರೆದಿದ್ದು. ರಾತ್ರಿ ಆದ್ರೆ ವಿಡಿಯೋ ಕಾಲ್ ಮಾಡಿ ನಮ್ಮ ಜೊತೆಗೆ ಕೆಟ್ಟದಾಗಿ ಮಾತನಾಡುತ್ತಾರೆ. ವಿಡಿಯೋ ಕಾಲ್‌ನಲ್ಲಿ ಸರಿಯಾಗಿ ಮಾತನಾಡದೆ ಹೋದ್ರೆ ನಿರಂತರವಾಗಿ ಕಿರುಕುಳ ಕೊಡುತ್ತಾರೆ. ರಜೆ ಕೇಳಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ. ಈ ಇನ್ಸ್ಪೆಕ್ಟರ್‌ನಿಂದ ನಮ್ಮ ಕುಟುಂಬದಲ್ಲಿ ಬಿರುಕು ಮೂಡಿವೆ. ಹೀಗಾಗಿ ಇನ್ಸ್ಪೆಕ್ಟರ್‌ನಿಂದ ನಮಗೆ ಮುಕ್ತಿ ಕೊಡಿಸಿ ಎಂದು ಪತ್ರದ ಮೂಲಕ ಕೇವಲ ಮಹಿಳಾ ಆಯೋಗಕ್ಕೆ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಡಿಜಿ&ಐಜಿಪಿಗೆ ಅಂಗಲಾಚಿ ಬೇಡಿಕೊಂಡಿದ್ದಾರೆ.
ಹುಬ್ಬಳ್ಳಿ ಪೊಲೀಸ್ ಕಮಿಷನರ್ ಹೇಳಿದ್ದೇನು?
ಇನ್ನು ಈ ಬಗ್ಗೆ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಪ್ರತಿಕ್ರಿಯಿಸಿ, ಹಳೇ ಹುಬ್ಬಳ್ಳಿ ಪಿಐ ಸುರೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪರಿಶೀಲನೆ ಮಾಡಿ ತನಿಖೆ ಮಾಡಿಸುತ್ತೇನೆ. ನನಗೆ ಯಾವ ಪತ್ರವೂ ಬಂದಿಲ್ಲ. ಆದ್ರೆ ಈ ವಿಚಾರ ಗಮನಕ್ಕೆ ಬಂದಿದೆ. ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಸತ್ಯಾಸತ್ಯತೆ ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:08 pm, Sun, 15 December 24