ದೊಣ್ಣೆಯಿಂದ ಹೊಡೆದು ಮಗನಿಂದಲೇ ತಂದೆಯ ಹತ್ಯೆ, ಕಾಣೆಯಾಗಿದ್ದ ವಕೀಲ ಶವವಾಗಿ ಪತ್ತೆ

ಎರಡು ಪ್ರತ್ಯೇಕ ಘಟನೆ: ಬೀಳಗಿ ತಾಲೂಕು ನ್ಯಾಯಾಲಯದಲ್ಲಿ ವಕೀಲಿ ವೃತ್ತಿ‌ ಮಾಡುತ್ತಿದ್ದ ಗಿರೀಶ್​ ಕಾಡಣ್ಣವರ ಅವರ ಶವ ಕೊಲೆಯಾದ ಸ್ಥಿತಿಯಲ್ಲಿ ತುಮ್ಮರಮಟ್ಟಿ ಗ್ರಾಮದಲ್ಲಿ ಪತ್ತೆಯಾಗಿದೆ. ತಂದೆಗೆ ದೊಣ್ಣೆಯಿಂದ ಹೊಡೆದು, ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲದಲ್ಲಿ ನಡೆದಿದೆ.

ದೊಣ್ಣೆಯಿಂದ ಹೊಡೆದು ಮಗನಿಂದಲೇ ತಂದೆಯ ಹತ್ಯೆ, ಕಾಣೆಯಾಗಿದ್ದ ವಕೀಲ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Oct 19, 2023 | 7:44 AM

ಬಾಗಲಕೋಟೆ ಅ.18: ಕಾಣೆಯಾಗಿದ್ದ ವಕೀಲರೊಬ್ಬರ (Lawyer) ಶವ ಕೊಲೆಯಾದ ಸ್ಥಿತಿಯಲ್ಲಿ ಬೀಳಗಿ (Bilagai) ತಾಲೂಕಿನ ತುಮ್ಮರಮಟ್ಟಿ ಗ್ರಾಮದಲ್ಲಿ ಪತ್ತೆಯಾಗಿದೆ. ಗಿರೀಶ್ ಕಾಡಣ್ಣವರ (38) ಕೊಲೆಯಾಗಿರುವ ವಕೀಲ. ದುಷ್ಕರ್ಮಿಗಳು ಕಲ್ಲಿನಿಂದ‌‌‌ ತಲೆ ಮತ್ತು ದೇಹವನ್ನು ಜಜ್ಜಿ‌ ಕೊಲೆ‌ ಮಾಡಿದ್ದಾರೆ. ಗ್ರಾಮದ ವಾರಿ ಮಲ್ಲಯ್ಯನ‌ ಗುಡಿ ಬೆಟ್ಟದ ಮೇಲೆ ಕೊಳೆತ‌ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಗಿರೀಶ್ ಕಾಡಣ್ಣವರ ಬೀಳಗಿ ತಾಲೂಕು ನ್ಯಾಯಾಲಯದಲ್ಲಿ ವಕೀಲಿ ವೃತ್ತಿ‌ ಮಾಡುತ್ತಿದ್ದರು. ಅಕ್ಟೋಬರ್ 15 ರಂದು ಮನೆಯಿಂದ‌ ನಾಪತ್ತೆಯಾಗಿದ್ದರು. ಸ್ಥಳಕ್ಕೆ ‌ಬೀಳಗಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೊಲೆ‌‌ ಮಾಡಿದ್ದು ಯಾರು, ಕೊಲೆ ಹಿಂದಿನ ಕಾರಣ ಏನು ಎಂಬುವುದರ ಕುರಿತು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಹಾರದ ವ್ಯಕ್ತಿಯ ಕೊಲೆ ಪ್ರಕರಣ: ಮೃತನ 2ನೇ ಪತ್ನಿ ಮತ್ತು ನಾದಿನಿ ಬಂಧನ

ದೊಣ್ಣೆಯಿಂದ ಹೊಡೆದು ಮಗನಿಂದಲೇ ತಂದೆಯ ಹತ್ಯೆ

ಕೊಡಗು: ದೊಣ್ಣೆಯಿಂದ ಹೊಡೆದು ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಂಗಲದಲ್ಲಿ ನಡೆದಿದೆ. ಚೇಂದ್ರಿಮಾಡರಾಜ (68) ಕೊಲೆಯಾದ ವ್ಯಕ್ತಿ. ಪುತ್ರ ದರ್ಶನ್ ಕೊಲೆ ಮಾಡಿದ ಆರೋಪಿ. ​ನಿನ್ನೆ (ಅ.18) ರಂದು ಪುತ್ರ ದರ್ಶನ್, ತಂದೆ ಚೇಂದ್ರಿಮಾಡರಾಜ ಅವರಿಗೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು.

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಚೇಂದ್ರಿಮಾಡರಾಜನನ್ನು ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿ ದರ್ಶನ್​ನನ್ನು ಬಂಧಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ