ಮೂರು-ವರ್ಷದ ಮಗಳನ್ನು ನೋಡಿಕೊಳ್ಳಲು ಆಕೆ ಒಬ್ಬ ಬೇಬಿಸಿಟ್ಟರ್​ಳನ್ನು ಗೊತ್ತುಮಾಡಿಕೊಂಡಳು, ಆದರೆ ಮನೆಯಲ್ಲಿ ನಡೆದಿದ್ದೇ ಬೇರೆ!

ಮೊದಮೊದಲು ಎಲ್ಲ ಸುಸೂತ್ರವಾಗಿ ನಡೆದಿತ್ತು. ಆದರೆ ದಿನಗಳದಂತೆ ಬೇಬಿಸಿಟ್ಟರ್ ಳ ವರ್ತನೆ ನರ್ಸ್ ಳಲ್ಲಿ ಶಂಕೆ ಮೂಡುವಂತೆ ಮಾಡಿತು.

ಮೂರು-ವರ್ಷದ ಮಗಳನ್ನು ನೋಡಿಕೊಳ್ಳಲು ಆಕೆ ಒಬ್ಬ ಬೇಬಿಸಿಟ್ಟರ್​ಳನ್ನು ಗೊತ್ತುಮಾಡಿಕೊಂಡಳು, ಆದರೆ ಮನೆಯಲ್ಲಿ ನಡೆದಿದ್ದೇ ಬೇರೆ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 01, 2023 | 8:10 AM

ಆಸ್ಪತ್ರೆಯೊಂದರಲ್ಲಿ ಪೂರ್ಣಾವಧಿ ನರ್ಸ್ (nurse) ಅಗಿ ಕೆಲಸ ಮಾಡುವ ಯುಕೆ (UK) ಮಹಿಳೆಯೊಬ್ಬಳು ತನ್ನ ಮೂರು-ವರ್ಷ-ವಯಸ್ಸಿನ ಮಗಳನ್ನು ನೋಡಿಕೊಳ್ಳಲು ಒಬ್ಬ ಹದಿಹರೆಯದ ಬೇಬಿಸಿಟ್ಟರ್ (ಮಕ್ಕಳನ್ನು ನೋಡಿಕೊಳ್ಳುವಾಕೆ) (babysitter) ಗೊತ್ತುಮಾಡಿಕೊಂಡು ಪಶ್ಚಾತ್ತಾಪಪಡುತ್ತಿದ್ದಾಳೆ (repenting). ಅವಳು ಅಂದುಕೊಂಡಿದ್ದೇ ಒಂದು ಆದರೆ ಆಗಿದ್ದು ಮಾತ್ರ ಮತ್ತೊಂದು. ಅವಳು ಡ್ಯೂಟಿಗೆ ತೆರಳಿದಾಗ ಮತ್ತು ಬೇಬಿಸಿಟ್ಟರ್ ಮಗುವನ್ನು ಮಲಗಿಸಿದ ಬಳಿಕ ನರ್ಸ್ ಳ ಗಂಡ 17-ವರ್ಷ-ವಯಸ್ಸಿನ ಬೇಬಿಸಿಟ್ಟರ್ ಳನ್ನು ತಮ್ಮ ಬೆಡ್ ರೂಮಿಗೆ ಕರೆದೊಯ್ದು ಅವಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ! ತನ್ನಂತೆ ಗಂಡ ಸಹ ಕೆಲಸಕ್ಕೆ ಹೋಗುತ್ತಿದ್ದುದರಿಂದ ತಮ್ಮಿಬ್ಬರ ಅನುಪಸ್ಥಿತಿಯಲ್ಲಿ ಮಗುವನ್ನು ನೋಡಿಕೊಳ್ಳಲು ಅನಿವಾರ್ಯವಾಗಿ ಬೇಬಿಸಿಟ್ಟರ್ ಳನ್ನು ನರ್ಸ್ ನೇಮಕ ಮಾಡಿಕೊಂಡಿದ್ದಳು.

ಬೇಬಿಸಿಟ್ಟರ್ ವರ್ತನೆ ಬದಲಾಯಿತು

ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ ಹಿಂತಿರುಗಿದ ಬಳಿಕ ತನ್ನ ಪತಿ ನಿದ್ರಿಸುವುದರ ಹೊರತು ಬೇರೆ ಕೆಲಸಲದಲ್ಲೂ ತೊಡಗಿದ್ದನ್ನು ಕಂಡುಕೊಳ್ಳಲು ನರ್ಸ್ ಗೆ ಜಾಸ್ತಿ ಸಮಯ ಹಿಡಿಯಲಿಲ್ಲ. ರೆಡ್ಡಿಟ್ ಪೋಸ್ಟೊಂದನ್ನು ಶೇರ್ ಮಾಡಿರುವ 31-ವರ್ಷ-ವಯಸ್ಸಿನ ನರ್ಸ್, ‘ನನ್ನ ಮಗಳ ನಿಗ್ರಾಣಿಗಾಗಿ ನಾನು ಈ 17-ವರ್ಷ-ವಯಸ್ಸಿನ ಬೇಬಿಸಿಟ್ಟರ್ ಳನ್ನು ಹೈರ್ ಮಾಡಿದೆ. ವೃತ್ತಿಯಲ್ಲಿ ನಾನು ಫುಲ್ ಟೈಮ್ ನರ್ಸ್ ಆಗಿದ್ದು, ನನ್ನ ಪತಿ ವಾರದಲ್ಲಿ 3 ದಿನನ ನೈಟ್ ಶಿಫ್ಟ್ ಮಾಡಿ ಹಗಲ್ಲೆಲ್ಲ ನಿದ್ರಿಸುತ್ತಾನೆ,’ ಎಂದು ಹೇಳಿದ್ದಾಳೆ.

ಮೊದಮೊದಲು ಎಲ್ಲ ಸುಸೂತ್ರವಾಗಿ ನಡೆದಿತ್ತು. ಆದರೆ ದಿನಗಳದಂತೆ ಬೇಬಿಸಿಟ್ಟರ್ ಳ ವರ್ತನೆ ನರ್ಸ್ ಳಲ್ಲಿ ಶಂಕೆ ಮೂಡುವಂತೆ ಮಾಡಿತು.

ಗಂಡನಿಂದ ಹಾರಿಕೆ ಉತ್ತರಗಳು

‘ಆ ಅನುಮಾನದಲ್ಲೇ ನಾನು ನಾಲ್ಕು ತಿಂಗಳು ದೂಡಿದೆ. ಆದರೆ ಮನೆಯಲ್ಲಿ ಎಲ್ಲವೂ ಸರಿಯಾಗಿಲ್ಲವೆಂಬ ಯೋಚನೆ ಹುಚ್ಚು ಹಿಡಿದಂತೆ ಭಾಸವಾಗತೊಡಗಿತ್ತು. ನನ್ನ ಗಂಡ ನನ್ನ ಆತಂಕ ದೂರವಾಗಲು ಸಹಕರಿಸಲಿಲ್ಲ ಮತ್ತು ನಾನು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಹಾಗಾಗೇ, ನಾನು ಲಿವಿಂಗ್ ರೂಮಲ್ಲಿ ಗೌಪ್ಯವಾಗಿ ಒಂದು ಕೆಮೆರಾ ಅಳವಡಿಸಿದೆ,’ ಎಂದು ನರ್ಸ್ ತನ್ನ ರೆಡ್ಡಿಟ್ ಪೋಸ್ಟ್ ನಲ್ಲಿ ಹೇಳಿದ್ದಾಳೆ.

Stock Image

ಸಾಂದರ್ಭಿಕ ಚಿತ್ರ

‘ಮೊದಲ ಮೂರು ದಿನ ನನಗೆ ಯಾವುದೇ ದೃಶ್ಯ ಗೋಚರಿಸಲಿಲ್ಲ. ಆದರೆ ನಾಲ್ಕನೇ ದಿನ ನನ್ನ ಮಗಳು ಟಿವಿ ನೋಡುತ್ತಾ ಕುಳಿತಿದ್ದಾಗ ಅವಳ ಹಿಂದಿದ್ದ ಕೌಚ್ ವೊಂದರಲ್ಲಿ ನನ್ನ ಗಂಡ ಮತ್ತು ಬೇಬಿ ಸಿಟ್ಟರ್ ಪರಸ್ಪರ ಚುಂಬಿಸತೊಡಗಿದ್ದರು. ಆ ದೃಶ್ಯ ನೋಡಿ ಆಕಾಶವೇ ಕಳಚಿ ನನ್ನ ಮೇಲೆ ಬಿದ್ದಂತಾಯಿತು.’

‘ನನ್ನ ಮನಸ್ಸಿನಲ್ಲಿ ನೂರೆಂಟು ನೆಗೆಟಿವ್ ಅಲೋಚನೆಗಳು ಹುಟ್ಟಿಕೊಂಡಿದ್ದವು ಮತ್ತು ಒಂದು ಬಗೆಯ ಪಾಪಪ್ರಜ್ಞೆ ನನ್ನಲ್ಲಿ ಹುಟ್ಟಿಕೊಂಡಿತ್ತು,’ ಎಂದು ನರ್ಸ್ ಹೇಳಿದ್ದಾಳೆ.

ಅವನು ಅಳಲಾರಂಭಿಸಿದ

ಆಕೆ ತನ್ನ 34-ವರ್ಷ-ವಯಸ್ಸಿನ ಪತಿಗೆ ಏನಿದೆಲ್ಲ ಅಂತ ಕೇಳಿದಾಗ ಅವನು ಅಳಲಾರಂಭಿಸಿ, ದೋಷವನ್ನೆಲ್ಲ ಬೇಬಿಸಿಟ್ಟರ್ ಮೇಲೆ ಜಾರಿಸಲು ಪ್ರಯತ್ನಿಸಿದ. ಅವಳೇ ಕಿಸ್ ಮಾಡುವಂತೆ ಒತ್ತಾಯಿಸಿದಳು ಎಂದು ಅಮಾಯಕನಂತೆ ಹೇಳಿದ.

‘ನಾನು ಪ್ರಶ್ನಿಸಿದಾಗ ಅವನು ಅಳಲಾರಂಭಿಸಿದ. ಅವನು ಏನನ್ನೋ ಹೇಳಲು ಪ್ರಯತ್ನಿಸಿದ, ಆದರೆ ನಾನು ಮಗಳನ್ನು ಎತ್ತಿಕೊಂಡು ನನ್ನಮ್ಮನ ಮನೆಗೆ ಹೋದೆ. ಇದೆಲ್ಲ ನಡೆದು ಒಂದು ತಿಂಗಳಾಯ್ತು,’ ಎಂದು ಆಕೆ ಹೇಳಿದ್ದಾಳೆ.

‘ಬೇಬಿಸಿಟ್ಟರ್ ಈಗ ಹೋಗಿಬಿಟ್ಟಿದ್ದಾಳೆ ಮತ್ತು ಅವನು ತನ್ನಿಂದಾಗಿರುವ ಪ್ರಮಾದಕ್ಕಾಗಿ ಪರಿತಪಿಸುತ್ತಿದ್ದಾನೆ. ಖುದ್ದು ಬೇಬಿಸಿಟ್ಟರ್ ಇದನ್ನೆಲ್ಲ ಶುರುಮಾಡಿದ್ದು ಅಂತ ಅವಳನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುವುದನ್ನು ಮುಂದುವರಿಸಿದ್ದಾನೆ. ಇದನ್ನೆಲ್ಲ ನೋಡಿದ ಬಳಿಕ ಅವನೊಂದಿಗೆ ಜೀವಿಸುವುದು ನನಗೆ ಸಾಧ್ಯವಾಗಲಾರದು.’

ಅಪರಾಧೀ ಭಾವ ಕಾಡುತ್ತಿದೆ

‘ನಾನು ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವುದಿಲ್ಲ, ಅವನಿಗೆ ಹೆಚ್ಚು ಗಮನ ನೀಡುವುದಿಲ್ಲ ಅಂತ ಪದೇಪದೆ ಅರೋಪಿಸುತ್ತಾ ಅವನು ತನ್ನ ಪಾಪದಲ್ಲಿ ನನ್ನನ್ನೂ ಪಾಲುದಾರಳನ್ನಾಗಿ ಮಾಡಿದ್ದಾನೆ. ಅವನ ಮಾತುಗಳನ್ನು ಕೇಳಿಸಿಕೊಂಡು ಅಪರಾಧೀ ಭಾವ ನನ್ನಲ್ಲಿ ಮನೆಮಾಡತೊಡಗಿದೆ.’

‘ನಾನು ದಿಗ್ಭ್ರಾಂತ ಸ್ಥಿತಿಯಲ್ಲಿದ್ದೇನೆ ಮತ್ತು ಈ ಸ್ಥಿತಿಯನ್ನ ಹೇಗೆ ನಿಭಾಯಿಸಬೇಕೆಂದು ನನ್ನ ಮನಸ್ಸು ಮತ್ತು ಹೃದಯ ಎರಡಕ್ಕೂ ಗೊತ್ತಾಗುತ್ತಿಲ್ಲ. ಅವನು ಎರಡನೇ ಅವಕಾಶ ನೀಡುವಂತೆ ಗೋಗರೆಯುತ್ತಿದ್ದಾನೆ. ಅವನ ಕುಟುಂಬದ ಸದಸ್ಯರು ಅವನನ್ನು ವಹಿಸಿಕೊಂಡು ಮಾತಾಡುತ್ತಿದ್ದಾರೆ,’ ಎಂದು ನರ್ಸ್ ರೆಡ್ಡಿಟ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ.

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ