AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತೆಯ ಹೊಸ ಪತಿಯ ಸ್ತ್ರೀದ್ವೇಷಿ ಸ್ವಭಾವದಿಂದ ಬೇಸತ್ತಿರುವ ಮಹಿಳೆ ಪೋಸ್ಟೊಂದರ ಮೂಲಕ ತನ್ನ ನೋವು ತೋಡಿಕೊಂಡಿದ್ದಾಳೆ!

ಬಗ್ಗೆ ಮಾತಾಡುತ್ತಾನೆ’ ಎಂದು ಮಹಿಳೆ ಹೇಳಿದ್ದಾಳೆ. ಕ್ರಿಸ್‌ಮಸ್‌ಗಾಗಿ ಅತ್ತೆ ಮತ್ತು ಆಕೆಯ ಪತಿಯನ್ನು ಹೋಸ್ಟ್ ಮಾಡಿದಾಗ, ಊಟದ ನಂತರ ಆತನ ಕೆಲವು ಅಸಭ್ಯ ಕಾಮೆಂಟ್‌ಗಳನ್ನು ಕೇಳಿ ಆಶ್ಚರ್ಯವಾಯಿತು ಎಂದು ಮಹಿಳೆ ವಿವರಿಸಿದ್ದಾರೆ.

ಅತ್ತೆಯ ಹೊಸ ಪತಿಯ ಸ್ತ್ರೀದ್ವೇಷಿ ಸ್ವಭಾವದಿಂದ ಬೇಸತ್ತಿರುವ ಮಹಿಳೆ ಪೋಸ್ಟೊಂದರ ಮೂಲಕ ತನ್ನ ನೋವು ತೋಡಿಕೊಂಡಿದ್ದಾಳೆ!
ಸಾಂದರ್ಭಿಕ ಚಿತ್ರ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jan 01, 2023 | 7:43 AM

Share

ಯುಕೆಯ ಈ ಮಹಿಳೆಯ ಕತೆ ವಿಚಿತ್ರವಾಗಿದೆ ಮಾರಾಯ್ರೇ. ಅವಳ ಅತ್ತೆಯ (ಪತಿಯ ತಾಯಿ) ಹೊಸಗಂಡ ಒಬ್ಬ ಸ್ತ್ರೀದ್ವೇಷಿಯಾಗಿದ್ದು (sexist) ಅವನಾಡುವ ಕುಹುಕದ ಮಾತುಗಳು ಅವಳಲ್ಲಿ ಹೇವರಿಕೆ ಹುಟ್ಟಿಸುತ್ತಿದೆ. ಅವನ ವರ್ತನೆ ಮನೆಯ ಶಾಂತಿಯನ್ನು ಕದಡಿದೆ ಎಂದು ಆಕೆ ಹೇಳಿದ್ದಾಳೆ. ಈ ವರ್ಷ ಕ್ರಿಸ್ಮಸ್ (Christmas) ಹಬ್ಬದಂದು ಆಕೆ ತನ್ನ ಅತ್ತೆ-ಮಾವನನ್ನು ಡಿನ್ನರ್ ಗೆ (dinner) ಆಹ್ವಾನಿಸಿದ್ದಾಳೆ. ಊಟದ ನಂತರ ಆಕೆಯ ಮಾವ ಟಿವಿ ಮುಂದೆ ಹೋಗಿ ಕುಳಿತಿದ್ದಾನೆ. ತನ್ನ ಪಾಡಿಗೆ ತಾನು ಆತ ಟಿವಿ ವೀಕ್ಷಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಅದರೆ ಆತ, ಡಿನ್ನರ್ ನಂತರ ಸ್ವಚ್ಛಗೊಳಿಸುವ, ಪಾತ್ರೆಗಳನ್ನು ತೊಳೆಯುವ ಕೆಲಸವನ್ನೆಲ್ಲ ಹೆಂಗಸರೇ ಮಾಡಬೇಕು ಅಂತ ಹೇಳತೊಡಗಿದ್ದಾನೆ.

ಮಮ್ಸ್ ನೆಟ್ ನ ‘ಌಮ್ ಐ ಬೀಯಿಂಗ್ ಅನ್ ರೀಸನೇಬಲ್’ ವೇದಿಕೆಯಲ್ಲಿ ಪೋಸ್ಟ್ ಮೂಲಕ ತನ್ನ ನೋವು ಹಂಚಿಕೊಂಡಿರುವ ಮತ್ತು ತನ್ನ ಹೆಸರು ಹೇಳಿಕೊಳ್ಳಲು ಇಚ್ಛಿಸದ ಈ ಮಹಿಳೆ, ತನ್ನ 11-ವರ್ಷ-ವಯಸ್ಸಿನ ಮಗಳು ಸಹ ಆ ವ್ಯಕ್ತಿ ಮಹಿಳೆಯರನ್ನು ಕುರಿತು ಕೇವಲವಾಗಿ ಮಾತಾಡುವ ವರಸೆ ಕಂಡು ದಂಗಾಗಿದ್ದಾಳೆ ಅಂತ ಹೇಳಿದ್ದಾಳೆ.

ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ತಣಿಯದ ಲೈಂಗಿಕ ವಾಂಛೆ ಮತ್ತು ಪ್ರೇಮಿಯೊಂದಿಗೆ ಬದುಕಲು ಅವಳು ತನ್ನ ಮೂರು ಮಕ್ಕಳ ಮೇಲೆ ಗುಂಡು ಹಾರಿಸಿದಳು!

ತನ್ನ ಪೋಸ್ಟ್ ನಲ್ಲಿ ಅವಳು ಹೀಗೆ ವಿವರಣೆ ನೀಡಿದ್ದಾಳೆ: ‘ಇತ್ತೀಚಿಗೆ ನಾವು ನನ್ನ ಅತ್ತೆ ಮತ್ತು ಆಕೆಯ ಹೊಸ ಗಂಡನ ಜೊತೆ ಹೆಚ್ಚು ಸಮಯವನನ್ನು ಕಳೆಯುತ್ತಿದ್ದೇವೆ. ಆದರೆ ಅತ್ತೆಯ ಗಂಡ ಸೆಕ್ಸಿಸ್ಟ್ ಅಗಿರುವುದನ್ನು ನಾನು ಮತ್ತು ನನ್ನ ಗಂಡ ಗಮನಿಸಿದ್ದೇವೆ.

‘ಆತ (ಮಹಿಳಾ ಕ್ರೀಡಾ ನಿರೂಪಕರನ್ನು ಉಲ್ಲೇಖಿಸಿ) ಕ್ರೀಡೆಯ ಬಗ್ಗೆ ಅವಳಿಗೇನು ಗೊತ್ತು? ಅವಳನ್ನು ದೂರವಿಡಬೇಕು! ಯಾವುದೇ ಮಹಿಳೆಯರು ಈ ಕ್ರೀಡೆಯ (ನಿರ್ದಿಷ್ಟ) ಪ್ರದೇಶದಲ್ಲಿ ಎಂದಿಗೂ ಇರಬಾರದು, ಅಂತ ಟಿವಿ ನೋಡುವಾಗ ನಿರೂಪಕಿ ಬಗ್ಗೆ ಮಾತಾಡುತ್ತಾನೆ’ ಎಂದು ಮಹಿಳೆ ಹೇಳಿದ್ದಾಳೆ.

ಕ್ರಿಸ್‌ಮಸ್‌ಗಾಗಿ ಅತ್ತೆ ಮತ್ತು ಆಕೆಯ ಪತಿಯನ್ನು ಹೋಸ್ಟ್ ಮಾಡಿದಾಗ, ಊಟದ ನಂತರ ಆತನ ಕೆಲವು ಅಸಭ್ಯ ಕಾಮೆಂಟ್‌ಗಳನ್ನು ಕೇಳಿ ಆಶ್ಚರ್ಯವಾಯಿತು ಎಂದು ಮಹಿಳೆ ವಿವರಿಸಿದ್ದಾರೆ.

‘ಊಟದ ಕೊನೆಯಲ್ಲಿ, ಕಿಚನ್ ಅಡುಗೆ ಮಾಡಲು ಮತ್ತು ಪಾತ್ರೆ ತೊಳೆಯಲು ಮಹಿಳೆಯರಿಗೆ ಮಾತ್ರ ಮೀಸಲಾದ ಸ್ಥಳವಾಗಿದೆ, ನಾನು ಹೋಗಿ ಟಿವಿ ವೀಕ್ಷಿಸುತ್ತೇನೆ ಎಂದು ಹೇಳಿದ‘ ಅಂತ ಮಹಿಳೆ ಹೇಳಿದ್ದಾಳೆ.

‘ಮತ್ತಷ್ಟು ಹೇವರಿಕೆ ಹುಟ್ಟಿಸುವ ಸಂಗತಿ ಏನು ಗೊತ್ತಾ? ನನ್ನ 11-ವರ್ಷ-ವಯಸ್ಸಿನ ಮಗಳು ತನ್ನ ತಂದೆಯೊಂದಿಗೆ ಮಾತಾಡುತ್ತಾ, ಈ ವ್ಯಕ್ತಿ ಯಾಕೆ ಮಹಿಳೆಯರನ್ನು ಅಷ್ಟೊಂದು ದ್ವೇಷಿಸುತ್ತಾರೆ? ಯಾಕೆ ಅವರ ಬಗ್ಗೆ ಕೇವಲ ಕೆಟ್ಟ ಮಾತುಗಳನ್ನಾಡುತ್ತಾರೆ? ಅಂತ ಕೇಳಿದ್ದಾಳೆ,’ ಎಂದು ಆಕೆ ಹೇಳಿದ್ದಾರೆ.

ಇದನ್ನೂ ಓದಿ:  Omicron BF.7: ವಿದೇಶದಿಂದ ಬಂದಿದ್ದ ನಾಲ್ವರಿಗೆ ಕೊವಿಡ್ ದೃಢ, ಬೆಂಗಳೂರು ಆಸ್ಪತ್ರೆಗಳಲ್ಲಿ ಇಂದಿನಿಂದ ಮಾಕ್ ಡ್ರಿಲ್

ಆ ವ್ಯಕ್ತಿಯ ನಡವಳಿಕೆಯಿಂದ ಬೇಸತ್ತಿರುವ ಆಕೆ ಮತ್ತು ಆಕೆಯ ಪತಿ ಅತನನ್ನು ಮತ್ತೊಮ್ಮೆ ಮನೆಗೆ ಕರೆತರಬೇಡ, ತಮ್ಮ ಮಗಳು ಇದನ್ನೆಲ್ಲ ನೋಡುವುದು ಸರಿಯಿರಲ್ಲ ಅಂತ ಆಕೆಯ ಅತ್ತೆಗೆ ಹೇಳಿದ್ದಾರೆ.

ಆದರೆ ಆಕೆ ಹೇಳಿದ್ದು ಅತ್ತೆಗೆ ರುಚಿಸಿಲ್ಲ. ಆಕೆ ತನ್ನ ಮಗ ಹಾಗೂ ಸೊಸೆಗೆ ಮೆಸೇಜೊಂದನ್ನು ಕಳಿಸಿ ನನ್ನ ಗಂಡನ ಬಗ್ಗೆ ಇಷ್ಟು ಅಸಹ್ಯಕರವಾಗಿ ಮಾತಾಡಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಆತ ಹೇಳಿದ್ದರಲ್ಲಿ ತಪ್ಪೇನಿದೆ, ಆತ ಹುಟ್ಟಿ ಬೆಳೆದ ದೇಶದಲ್ಲಿ ರೀತಿ ರಿವಾಜುಗಳು ಹಾಗೆಯೇ ಇರೋದು,’ ಅಂತ ಹೇಳಿದ್ದಾಳೆ.

‘ನಮ್ಮ ಮಾತಿನಿಂದ ತುಂಬಾ ನೋವಾಗಿದೆ ಎಂದು ಅತ್ತೆ ಹೇಳುತ್ತಾಳೆ ಮತ್ತು ನಾವು ಆ ರೀತಿ ಮಾತಾಡಿರುವುದು ಆಕೆಗೆ ನಂಬಲು ಸಾಧ್ಯವಾಗುತ್ತಿಲ್ಲವಂತೆ,’ ಎಂದು ಮಹಿಳೆ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್