ಸೆನ್ಸೇಷನಲ್ ಕ್ರೈಮ್ ಕತೆಗಳು: ತಣಿಯದ ಲೈಂಗಿಕ ವಾಂಛೆ ಮತ್ತು ಪ್ರೇಮಿಯೊಂದಿಗೆ ಬದುಕಲು ಅವಳು ತನ್ನ ಮೂರು ಮಕ್ಕಳ ಮೇಲೆ ಗುಂಡು ಹಾರಿಸಿದಳು!
ಸ್ಟೀವನ್ ಡೌನ್ಸ್ ನನ್ನು ಡಯಾನಾ ಪ್ರೀತಿಸಿ ಮದುವೆಯಾಗಿದ್ದರೂ, ಸ್ವಭಾವತಃ ಚಂಚಲೆಯಾಗಿದ್ದಳು. ಎರಡನೇ ಮಗು ಹುಟ್ಟಿದ ಬಳಿಕ ದಾಂಪತ್ಯದಲ್ಲಿ ವಿರಸ ಹುಟ್ಟಿಕೊಳ್ಳಲಾರಂಭಿಸಿತ್ತು. ಕ್ರಮೇಣ ಅದು ಹೆಚ್ಚುತ್ತಾ ಹೋಗಿ ಮೂರನೇ ಮಗು ಡ್ಯಾನಿ ತನಗೆ ಹುಟ್ಟಿದಲ್ಲ ಅಂತ ಸ್ಟೀವನ್ ತನ್ನ ಹೆಂಡತಿಗೆ ಡಿವೋರ್ಸ್ ನೀಡಿ ಬೇರೆಯಾಗಿಬಿಟ್ಟ!
ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿವಿತ್ತು ನಿಮಗೆ ಡಯಾನಾ ಡೌನ್ಸ್ (Diane Downs) ಹೆಸರಿನ ರಾಕ್ಷಸೀ ಅಮೆರಿಕದ ಒರೆಗಾನ್ ನ ಮಹಿಳೆಯ ಕತೆಯನ್ನು ಹೇಳುತ್ತಿದ್ದೇವೆ. ಇವಳನ್ನು ರಾಕ್ಷಸಿ ಅನ್ನೋದಕ್ಕೆ ಕಾರಣವಿದೆ. ಏನು ಗೊತ್ತಾ? ಈ ಹೆಂಗಸು ತನ್ನ ಪ್ರಿಯಕರಿನಿಗಾಗಿ ಅವಳು ತನ್ನ ಹೊತ್ತು ಹೆತ್ತ ಮೂರು ಮಕ್ಕಳ ಮೇಲೆ ಗುಂಡು ಹಾರಿಸಿದ್ದಳು. ಅವಳ ಒಬ್ಬ ಮಗಳು (ಚೆರಿಲ್) (Cheryl) ಆಸ್ಪತ್ರೆಗೆ ಹೋಗುವಾಗಲೇ ಕೊನೆಯುಸಿರೆಳೆದಳು, ಮತ್ತೊಬ್ಬ ಮಗಳು (ಕ್ರಿಸ್ಟೀ) (Christie) ಪಾರ್ಶವಾಯು ಪೀಡಿತರಾದವರ ಹಾಗೆ ದೇಹದ ಎಡಭಾಗದ ಮೇಲೆ ಸ್ವಾಧೀನ ಕಳೆದುಕೊಂಡಳು ಮತ್ತು ಕೊನೆಯ ಮಗನ (ಡ್ಯಾನಿ) (Danny) ಸೊಂಟದಿಂದ ಕೆಳಗಿನ ಭಾಗ ನಿಷ್ಕ್ರಿಯಗೊಂಡಿತ್ತು.
ಹಾಗೆ ನೋಡಿದರೆ ಅವಳ ಬದುಕು ಮತ್ತು ವೈವಾಹಿಕ ಜೀವನ ಚೆನ್ನಾಗೇ ಇತ್ತು. ಹೈಸ್ಕೂಲ್ ನಿಂದಲೇ ಪರಸ್ಪರ ಪ್ರೀತಿಸುತ್ತಿದ್ದ ತನ್ನ ಸಹಪಾಠಿಯನ್ನೇ ಅವಳು ಮದುವೆಯಾಗಿದ್ದಳು. ಅವಳ ಗಂಡನಿಗೆ ಉತ್ತಮ ಸಂಪಾದನೆಯ ನೌಕರಿಯಿತ್ತು ಮತ್ತು ಡಯನಾ ಸಹ ಹಣಕಾಸು ಸಂಸ್ಥೆಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಳು. ದಂಪತಿಗೆ ಮೂರು ಮಕ್ಕಳು ಹುಟ್ಟಿದವು-ಕ್ರಿಸ್ಟೀ ಌನ್, ಚೆರಿಲ್ ಲಿನ್ ಮತ್ತು ಸ್ಟೀಫನ್ ಡೇನಿಯಲ್. ಅವಳ ಕುಟಂಬವನ್ನು ನೋಡಿದವರು ಆದರ್ಶ ದಾಂಪತ್ಯ, ಸುಖೀ ಸಂಸಾರ ಎಂದು ಹೇಳುತ್ತಿದ್ದರು.
ಆದರೆ, ಪತಿ ಸ್ಟೀವನ್ ಡೌನ್ಸ್ ನನ್ನು ಡಯಾನಾ ಪ್ರೀತಿಸಿ ಮದುವೆಯಾಗಿದ್ದರೂ, ಸ್ವಭಾವತಃ ಚಂಚಲೆಯಾಗಿದ್ದಳು. ಎರಡನೇ ಮಗು ಹುಟ್ಟಿದ ಬಳಿಕ ದಾಂಪತ್ಯದಲ್ಲಿ ವಿರಸ ಹುಟ್ಟಿಕೊಳ್ಳಲಾರಂಭಿಸಿತ್ತು. ಕ್ರಮೇಣ ಅದು ಹೆಚ್ಚುತ್ತಾ ಹೋಗಿ ಮೂರನೇ ಮಗು ಡ್ಯಾನಿ ತನಗೆ ಹುಟ್ಟಿದಲ್ಲ ಅಂತ ಸ್ಟೀವನ್ ತನ್ನ ಹೆಂಡತಿಗೆ ಡಿವೋರ್ಸ್ ನೀಡಿ ಬೇರೆಯಾಗಿಬಿಟ್ಟ!
ನಿಮಗೆ ಗೊತ್ತಿರಲಿ, 1973ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಸ್ಟೀವನ್ ಮತ್ತು ಡಯಾನಾ 1980ರಲ್ಲಿ ಬೇರ್ಪಟ್ಟರು. ಡಯಾನಾ ಬಾಡಿಗೆ ತಾಯಿಯಾಗಿ (surrogacy) ದುಡ್ಡು ಸಂಪಾದನೆ ಮಾಡುವ ಯೋಚನೆ ಮಾಡಿದಳಾದರೂ ಡಯಾನಾಳನ್ನು ಪರೀಕ್ಷಿಸಿದ ವೈದ್ಯರು ಅವಳು ಮನೋವ್ಯಾಧಿಯಿಂದ ಬಳಲುತ್ತಿರುವುದರಿಂದ ಅದು ಸಾಧ್ಯವಿಲ್ಲ ಅಂತ ಹೇಳಿದರು.
ಆಗಿನ್ನೂ ಅವಳಿಗೆ 25 ರ ಪ್ರಾಯ. ಮಕ್ಕಳನ್ನು ತನ್ನ ತಂದೆ-ತಾಯಿಳ ಇಲ್ಲವೇ ಮಾಜಿ ಪತಿಯ ಮನೆಯಲ್ಲಿ ಬಿಟ್ಟು ಅವಳು ಪುರುಷರ ಜೊತೆ ಸುತ್ತಲು ಹೋಗುತ್ತಿದ್ದಳು. ಅವಳಲ್ಲಿ ಪುರುಷರ ಮೇಲೆ ಅದೆಷ್ಟು ವ್ಯಾಮೋಹ ಹುಟ್ಟಿಕೊಂಡಿತ್ತೆಂದರೆ ಮಕ್ಕಳನ್ನು ಸಂಪೂರ್ಣವಾಗಿ ಕಡೆಗಣಿಸಿಬಿಟ್ಟಳು. ಅವರ ಊಟ-ಬಟ್ಟೆ, ಶಾಲೆ ಯಾವುದರ ಮೇಲೂ ಅವಳಿಗೆ ಗಮನವಿರುತ್ತಿರಲಿಲ್ಲ. ಹಲವಾರು ಬಾರಿ ಅವಳು ತನ್ನ ಹಿರಿ ಮಗಳು- ಕೇವಲ 6 ವರ್ಷದವಳಾಗಿದ್ದ ಕ್ರಿಸ್ಟಿಗೆ ಉಳಿದಿಬ್ಬರು ಮಕ್ಕಳ ಜವಾಬ್ದಾರಿ ವಹಿಸಿ ಗಂಡಸರೊಂದಿಗೆ ಲಲ್ಲೆ ಹೊಡೆಯಲು ಹೋಗುತ್ತಿದ್ದಳು.
ಅದೇ ಸಮಯದಲ್ಲಿ ಅಂದರೆ 1981ರಲ್ಲಿ ಅವಳಿಗೆ ರಾಬರ್ಟ್ ‘ನಿಕ್’ ಕಿಕ್ಕರ್ ಬಾಕರ್ ಹೆಸರಿನ ಗೆಳೆಯ ಸಿಕ್ಕಿದ್ದು. ಆದರೆ ಅವನು ವಿವಾಹಿತನಾಗಿದ್ದ. ಅವನಿಗೆ ಡಯಾನಾಳ ಸಾಂಗತ್ಯ ಬೇಕಿತ್ತು ಅದರೆ ಅವಳ ಮಕ್ಕಳು ಕಿರಿಕಿರಿ ಅನಿಸತೊಡಗಿದ್ದರು. ಹಾಗಾಗೇ, ಅವಳು ಮಕ್ಕಳನ್ನು ಬಿಟ್ಟು ಬರುವುದಾದರೆ ಖಾಯಂ ಆಗಿ ಅವಳೊಂದಿಗೆ ಇರುವುದಾಗಿ ಹೇಳಿದ.
ಅವರ ಪ್ರೇಮ ವ್ಯವಹಾರ ಎರಡು ವರ್ಷಗಳವರೆಗೆ ಮುಂದುವರೆದಿತ್ತು. ಮದುವೆಯಾಗು ಅಂತ ಡಯನಾ ಹೇಳಿದಾಗೆಲ್ಲ ನಿಕ್ ಮಕ್ಕಳನ್ನು ಬಿಟ್ಟು ಬಾ ಎನ್ನುತ್ತ್ತಿದ್ದ. ಅವನಿಗಾಗಿ ಅವಳು ಒಂದು ಕ್ರೂರ ಮತ್ತು ಯಾರೂ ಊಹಿಸಲಾಗದ ನಿರ್ಧಾರ ತೆಗೆದುಕೊಂಡಳು. ತನ್ನ ಪ್ರಣಯದಾಟಕ್ಕೆ ಅಡ್ಡಿಯಾಗಿರುವ ಮಕ್ಕಳನ್ನು ತೊಲಗಿಸುವುದು!
ಅವತ್ತು ಮೇ 19, 1983. ಅವಳ ಪುಟ್ಟ ಮಕ್ಕಳ ಪಾಲಿಗೆ ಅದು ಕರಾಳದಿನ, ಒರೆಗಾನ್ ನ ಸ್ಪ್ರಿಂಗ್ ಫೀಲ್ಡ್ ಕಡೆ ಕಚ್ಚಾ ರಸ್ತೆಯಲ್ಲಿ ಮಕ್ಕಳನ್ನು ಕಾರಲ್ಲಿ ಕರೆದೊಯ್ದ ಡಯಾನಾ .22 ಕ್ಯಾಲಿಬರ್ ಪಿಸ್ಟಲ್ ನಿಂದ ಹಿಂದಿನ ಸೀಟಿನಲ್ಲಿ ಕೂತಿದ್ದ ತನ್ನ ಮಕ್ಕಳ ಮೇಲೆ ಅವೇಶಕ್ಕೊಳಗಾದವರಂತೆ ಗುಂಡು ಹಾರಿಸಿದಳು. ನಂತರ ಅವಳು ತನ್ನ ಎಡಗೈ ಮೇಲೆ ಗುಂಡು ಹಾರಿಸಿಕೊಂಡು ಕಾರನ್ನು ಆಸ್ಪತ್ರೆಯೊಂದಕ್ಕೆ ಓಡಿಸಿಕೊಂಡು ಬಂದಳು.
ಯಾವನೋ ಒಬ್ಬ ತನ್ನ ಕಾರನ್ನು ಕಳುವು ಮಾಡಲು ಬಂದು ತನ್ನ ಹಾಗೂ ಮಕ್ಕಳ ಮೇಲೆ ಮನಬಂದಂತೆ ಗುಂಡು ಹಾರಿಸಿದ ಅಂತ ಕಟ್ಟುಕತೆ ಕಟ್ಟಿದಳು. ಅಲ್ಲಿನ ವೈದ್ಯರು ಇಬ್ಬರು ಮಕ್ಕಳನ್ನು ಉಳಿಸಿದರಾದರೂ ಊನತೆಯೊಂದಿಗೆ ಅವರು ಬದುಕು ನಡೆಸುತ್ತಿದ್ದಾರೆ. ಡಯಾನಾಗೂ ವೈದ್ಯರು ಚಿಕಿತ್ಸೆ ನೀಡಿದರು.
ಅವಳ ಕಟ್ಟುಕತೆಯನ್ನು ನಂಬದ ಪೊಲೀಸರು ತನಿಖೆ ಆರಂಭಿಸಿದರು. ಅವರಿಗೆ ಡಯಾನಾಳ ಒಂದು ಡೈರಿ ಸಿಕ್ಕಿತು. ಅದರಲ್ಲಿ ಅವಳು ಕಿಕ್ಕರ್ ಬಾಕರ್ ಜೊತೆಗಿನ ತನ್ನ ಪ್ರಣಯ, ಮಕ್ಕಳನ್ನು ಬಿಟ್ಟು ಬಂದರೆ ಮದುವೆಯಾಗುವುದಾಗಿ ಹೇಳಿದ್ದು ಮೊದಲಾದ ವಿಚಾರಗಳನ್ನು ಬರೆದಿದ್ದಳು. ಮಕ್ಕಳು ತೀವ್ರ ಸ್ವರೂಪವಾಗಿ ಗುಂಡಿನ ದಾಳಿಗೊಳಗಾಗಿದ್ದರೂ ಅವಳು ಆಮೆವೇಗದಲ್ಲಿ ಕಾರನ್ನು ಆಸ್ಪತ್ರೆಗೆ ಓಡಿಸಿಕೊಂಡು ಹೋಗುತ್ತಿದ್ದಳು ಅಂತ ಒಬ್ಬ ಟ್ರಕ್ ಚಾಲಕ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ.
ಅಸ್ಪತ್ರೆ ತಲುಪುವುದರೊಳಗೆ ಮಕ್ಕಳೆಲ್ಲ ಸಾಯಲಿ ಅನ್ನೋದು ಅವಳ ಉದ್ದೇಶವಾಗಿತ್ತು.
ಕೊನೆಗೆ ಪೆಬ್ರುವರಿ 28, 1984 ರಲ್ಲಿ ಅವಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಡಯಾನಾ ನಡೆಸಿದ ಕೃತ್ಯವನ್ನು ಕೇಳಿಸಿಕೊಂಡು ದಿಗ್ಭ್ರಾಂತರಾದ ನ್ಯಾಯಾಧೀಶರು 50-ವರ್ಷ ಸೆರೆವಾಸದ ಶಿಕ್ಷೆ ವಿಧಿಸಿದರು.