AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ, ಮೂವರಿಗೆ ಚಾಕು ಇರಿತ

ಗದಗ ಜಿಲ್ಲೆ ಬೆಟಗೇರಿಯ ಮಂಜುನಾಥನಗರದಲ್ಲಿ ಘಟನೆ ನಡೆದಿದೆ.  2 ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡದ್ದಾರೆ.   ಶಿವರಾಜ್ ಪೂಜಾರ, ಮಲ್ಲೇಶ್ ಎಂಬುವರಿ​​ಗೆ ಗಂಭೀರ ಗಾಯವಾಗಿದ್ದು,  ಗಜೇಂದ್ರಸಿಂಗ್ ಸೊಲ್ಲಾಪುರ ಸ್ಥಿತಿ ಚಿಂತಾಜನಕವಾಗಿದೆ. 

ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ, ಮೂವರಿಗೆ ಚಾಕು ಇರಿತ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Apr 16, 2022 | 7:04 PM

Share

ಗದಗ :  ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತ ನಡುವೆ ಮಾರಾಮಾರಿ ನಡೆದಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಂದೊಂದು ರಾಜಕೀಯ ಸಂಘರ್ಷಗಳು ನಡೆಯುತ್ತಿದೆ. ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಇಂದು ನಡೆದಿದೆ.  ಮೂವರಿಗೆ ಚಾಕು ಇರಿತ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.  ಗದಗ ಜಿಲ್ಲೆ ಬೆಟಗೇರಿಯ ಮಂಜುನಾಥನಗರದಲ್ಲಿ ಘಟನೆ ನಡೆದಿದೆ.  2 ಗುಂಪುಗಳು ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡದ್ದಾರೆ.   ಶಿವರಾಜ್ ಪೂಜಾರ, ಮಲ್ಲೇಶ್ ಎಂಬುವರಿ​​ಗೆ ಗಂಭೀರ ಗಾಯವಾಗಿದ್ದು,  ಗಜೇಂದ್ರಸಿಂಗ್ ಸೊಲ್ಲಾಪುರ ಸ್ಥಿತಿ ಚಿಂತಾಜನಕವಾಗಿದೆ.  ಬೆಟಗೇರಿ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನೂರಾರು ಜನರು  ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದು,   ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರನ್ನ ಕಾರ್ಖಾನೆ ಕಾರ್ಮಿಕರ ಧರಣಿ 

ಬಾಗಲಕೋಟೆ ಜಿಲ್ಲೆ ಮುಧೋಳ ಸಿಪಿಐ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.  ಕಾರ್ಮಿಕರು, ರೈತರು, ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ ಹಾಕಿದ್ದು,  ಪ್ರತಿಭಟನಾಕಾರರು, ಪೊಲೀಸರ ನಡುವೆ ಮಾತಿಕ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರು  ಮಾಜಿ ಸಚಿವ R.B.ತಿಮ್ಮಾಪುರರನ್ನು ತಳ್ಳಾಡಿದ್ದಾರೆ.  ಸಿಪಿಐ ಪ್ರತಿಭಟನಾಕಾರರ ಬಗ್ಗೆ ಅಸಾಂವಿಧಾನಿಕ ಪದ ಬಳಿಸಿದ್ದಾರೆ.  ಸಿಪಿಐ ನಿನ್ನೆ ಬೆಂಕಿ ಹಚ್ಚುವ ವೇಳೆ ತಡೆಯುವಲ್ಲಿ ವಿಫಲರಾಗಿದ್ದಾರ.  ಪೊಲೀಸರೆದುರೇ ಟೆಂಟ್​ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ಹೀಗಾಗಿ ಸಿಪಿಐ H.R.ಪಾಟೀಲ್​ ವಿರುದ್ಧ ರೊಚ್ಚಿಗೆದ್ದಿದ್ದು ಜನರು ಈ ವೇಳೆ ಪ್ರತಿಭಟನಾಕಾರರಿಗೆ ಅಶ್ಲೀಲ ಪದವನ್ನು ಸಿಪಿಐ  ಬಳಸಿದ್ದಾರೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಪಾಳ ಗ್ರಾಮದಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ ಘಟನೆ ನಡೆಸಿದೆ . ಗುಡುಗು, ಸಿಡಿಲಿನೊಂದಿಗೆ ಮಳೆರಾಯ ಆರ್ಭಟಿಸ್ತಿದ್ದ ವೇಳೆ ತೆಂಗಿನಮರಕ್ಕೆ ಸಿಡಿಲು ಬಡಿದಿದೆ.  ಸಿಡಿಲು ಬಡಿದು ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಆತಂಕಕ್ಕೆ ಒಳಗಾಗಿದ್ದ ಜನರು. ಕೆಲಕಾಲ ಹೊತ್ತಿ ಉರಿದ ನಂತರ ತೆಂಗಿನಮರ ತಣ್ಣಗಾಗಿದೆ. ಜಿಲ್ಲೆಯ ಹಲವೆಡೆ  ಗುಡುಗು ಸಿಡಿಲಿನೊಂದಿಗೆ  ಆರ್ಭಟಿಸ್ತಿರೋ ಮಳೆರಾಯ. ಹಾವೇರಿ, ಹಾನಗಲ್ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಒಂದು ಗಂಟೆಯಿಂದ ಮಳೆ ಸುರಿಯುತ್ತಿದೆ.

Published On - 6:24 pm, Sat, 16 April 22