ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​ನಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 22, 2023 | 12:11 PM

ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದ ವಿಜಯಲಕ್ಷ್ಮಿ. ಸೆ.21ರಂದು ಸಾವನಪ್ಪಿದ್ದಾಳೆ. ಇನ್ನು ಅಲ್ಲಿಯವರೆಗೂ ಆಕೆ ಎಲ್ಲಿಗೆ ಹೋಗಿದ್ದಳು ಎಂಬ ಮಾಹಿತಿ ತಾಯಿಗೆ ಇರಲಿಲ್ಲ. ಸ್ನೇಹಿತರ ಜೊತೆ ಹೊಗಿರಬಹುದು ಎಂದು ಭಾವಿಸಿದ್ದ ತಾಯಿ. ಒಂದು ದಿನ ಕಳೆದ ಬಳಿಕ ಠಾಣೆಗೆ ತೆರಳಿ ದೂರು ನೀಡಲು ಮುಂದಾದಾಗ ವಿಷಯ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್​ನಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಸೆ.22: ಕಟ್ಟಡದ 9ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ(Student) ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ಯಾಟರಾಯನಪುರ (Byataryanapura)ದ ಖಾಸಗಿ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ. ವಿಜಯಲಕ್ಷ್ಮೀ(17) ಆತ್ಮಹತ್ಯೆಗೆ ಶರಣಾದ ಯುವತಿ. ಇನ್ನು ತನಿಖೆ ವೇಳೆ ಮೃತ ವಿದ್ಯಾರ್ಥಿನಿ ಖಾಸಗಿ ಕಾಲೇಜಿನಲ್ಲಿ ಕಾಮರ್ಸ್ ಓದುತಿದ್ದು, ತಂದೆ-ತಾಯಿಗೆ ವಿಚ್ಛೇದನವಾದ ಬಳಿಕ, ತನ್ನ ತಾಯಿ ಯಶೋಧ ಎಂಬುವವರ ಜೊತೆ ಜ್ಞಾನಭಾರತಿಯ ಜ್ಞಾನಜ್ಯೋತಿನಗರದಲ್ಲಿ ವಾಸವಿದ್ದಳು. ಕಳೆದ ಒಂದು ವಾರದಿಂದ ಡಿಪ್ರೇಷನ್​ಲ್ಲಿದ್ದ ವಿಜಯಲಕ್ಷ್ಮಿ. ಇದೇ 19ನೇ ತಾರೀಖು ಕಾಲೇಜಿಗೆ ಹೊಗೊದಾಗಿ ಮನೆಯಿಂದ ಹೋಗಿದ್ದಳಂತೆ.

ಮನೆಗೆ ಬಾರದೇ ಮಿಸ್ಸಿಂಗ್ ಆಗಿದ್ದ ವಿಜಯಲಕ್ಷ್ಮಿ

ಹೌದು, ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದ ವಿಜಯಲಕ್ಷ್ಮಿ. ಸೆ.21ರಂದು ಸಾವನಪ್ಪಿದ್ದಾಳೆ. ಇನ್ನು ಅಲ್ಲಿಯವರೆಗೂ ಆಕೆ ಎಲ್ಲಿಗೆ ಹೋಗಿದ್ದಳು ಎಂಬ ಮಾಹಿತಿ ತಾಯಿಗೆ ಇರಲಿಲ್ಲ. ಸ್ನೇಹಿತರ ಜೊತೆ ಹೊಗಿರಬಹುದು ಎಂದು ಭಾವಿಸಿದ್ದ ತಾಯಿ. ಒಂದು ದಿನ ಕಳೆದ ಬಳಿಕ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ಅದರಂತೆ ಜ್ಞಾನಭಾರತಿ ಠಾಣೆಗೆ ತೆರಳಿ ದೂರು ನೀಡಲು ಹೊದಾಗ ಸಾವಿನ ಸುದ್ದಿ ತಿಳಿದಿದೆ. ಘಟನೆ ಸಂಬಂಧ ತಾಯಿ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಚೆಂಗಲ್ಪಟ್ಟು: ಮದುವೆಯಾದ ಎರಡನೇ ದಿನವೇ ಪತ್ನಿಯ ಮದುವೆ ಸೀರೆಯೊಂದಿಗೆ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ

ಸಾಯುವ ಮುನ್ನ ಮಂಗಳೂರಿಗೆ ತೆರಳಿದ್ದ ವಿದ್ಯಾರ್ಥಿನಿ

ಇನ್ನು ಆಕೆ ಸಾಯುವ ಮುನ್ನ ಮಂಗಳೂರಿಗೆ ತೆರಳಿದ್ದಳು ಎಂಬ ಮಾಹಿತಿ ಸಿಕ್ಕಿದ್ದು, ಮಂಗಳೂರಿಗೆ ಏಕೆ ತೆರಳಿದ್ದಳು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತು ಸಾಯುವ ಮುನ್ನ ವಿದ್ಯಾರ್ಥಿನಿ ಒಬ್ಬರಿಗೆ ಕರೆ ಮಾಡಿದ್ದು, ಯಾರಿಗೆ ಕರೆ ಮಾಡಿದ್ದಳು. ಈ ವೇಳೆ ನಡೆದ ಸಂಭಾಷಣೆ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ ಆತ್ಮಹತ್ಯೆಯ ಕಾರಣ ಇನ್ನು ತಿಳಿದು ಬಂದಿಲ್ಲ. ಮೃತದೇಹವನ್ನ ಮರಣೊತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಸಿದ್ದಾರೆ.

ವ್ಯಾಪಾರಕ್ಕೆ ಮನೆ ಮಾಲಿಕ ಕಿರಿಕ್; ಬೀದಿ ಬದಿ ವ್ಯಾಪಾರಸ್ಥ ಆತ್ಮಹತ್ಯೆ

ರಾಮನಗರ: ವ್ಯಾಪಾರಕ್ಕೆ ಮನೆ ಮಾಲಿಕ ಕಿರಿಕ್ ಹಿನ್ನಲೆ ಬೀದಿ ಬದಿ ವ್ಯಾಪಾರಸ್ಥ ರವಿಚಂದ್ರ(33)‌ ಎಂಬಾತ ಆತ್ಮಹತ್ಯೆಗೆ ಶರಣಾದ ಘಟನೆ ಡಿಸಿಎಂ ಹುಟ್ಟಿದೂರು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ವಿಚಾರಕ್ಕೆ ಗ್ರಾಮದಲ್ಲಿ ಗಲಾಟೆ ನಡೆದಿದ್ದು, ಅಲ್ಲಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಪೊಲೀಸರು ದೊಡ್ಡಾಲಹಳ್ಳಿಗೆ ದೌಡಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ