‘ಅವಳ ಜೊತೆ ನಾನೂ ಸತ್ತು ಹೋದೆ’; ಮಗಳ ಆತ್ಮಹತ್ಯೆ ಬಗ್ಗೆ ನಟ ವಿಜಯ್ ಪ್ರತಿಕ್ರಿಯೆ
ಮೀರಾ ಅವರು ಮಂಗಳವಾರ ಮುಂಜಾನೆ ನೇಣುಬಿಗಿದುಕೊಂಡು ಮೃತಪಟ್ಟರು. ಅವಳು ಬಹಳ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಈಗ ಸಾವಿನ ಬಗ್ಗೆ ಅವರು ಮೊದಲ ಬಾರಿಗೆ ವಿಜಯ್ ಮೌನ ಮುರಿದಿದ್ದಾರೆ.
ತಮಿಳು ನಟ, ಸಂಗೀತ ಸಂಯೋಜಕ ವಿಜಯ್ ಆ್ಯಂಟನಿ (Vijay Antony) ಅವರ ಮಗಳು ಮೀರಾ ಮಂಗಳವಾರ (ಸೆಪ್ಟೆಂಬರ್ 19) ಆತ್ಮಹತ್ಯೆ ಮಾಡಿಕೊಂಡರು. ಬುಧವಾರ (ಸೆಪ್ಟೆಂಬರ್ 20) ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಮಗಳ ಸಾವಿನ ಬಗ್ಗೆ ವಿಜಯ್ ಇಷ್ಟು ದಿನ ಮೌನವಾಗಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ. ‘ಮಗಳು ಸತ್ತಾಗಲೇ ನಾನೂ ಒಳಗಿನಿಂದ ಸತ್ತು ಹೋದೆ’ ಎಂದು ಅವರು ಹೇಳಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಫ್ಯಾನ್ಸ್ ಮಾಡುತ್ತಿದ್ದಾರೆ.
‘ನನ್ನ ಮಗಳು ಮೀರಾ ಕರುಣಾಮಯಿ ಮತ್ತು ಧೈರ್ಯಶಾಲಿ ಆಗಿದ್ದಳು. ಅವಳು ಇಹಲೋಕ ತ್ಯಜಿಸಿ ಮತ, ಜಾತಿ, ಧರ್ಮ, ಹಣ, ಬಡತನ, ಅಸೂಯೆ, ನೋವು, ದುಶ್ಚಟಗಳು ಇಲ್ಲದ ಕಡೆಗೆ ಹೋಗಿದ್ದಾಳೆ. ಅವಳು ಹೋಗಿರುವ ಸ್ಥಳ ಶಾಂತವಾಗಿದೆ. ಅವಳು ಇನ್ನೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅನಿಸುತ್ತದೆ’ ಎಂದು ವಿಜಯ್ ಪತ್ರ ಆರಂಭಿಸಿದ್ದಾರೆ.
‘ಅವಳು ಮೃತಪಟ್ಟಾಗ ನಾನು ಒಳಗಿನಿಂದ ಸತ್ತುಹೋದೆ. ಈಗ ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ನಾನು ಪ್ರಾರಂಭಿಸುವ ಎಲ್ಲಾ ಒಳ್ಳೆಯ ಕಾರ್ಯವು ಅವಳ ಹೆಸರಿನಲ್ಲಿ ಇರುತ್ತದೆ. ಇವೆಲ್ಲವೂ ಅವಳಿಂದ ಪ್ರಾರಂಭ ಆಗಿದೆ ಎಂದು ನಾನು ನಂಬಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
‘I also died with my daughter’ – Vijay Antony pens an emotional note.
||#VijayAntony|#RIPMeera|| pic.twitter.com/lyP5jVpzeh
— Manobala Vijayabalan (@ManobalaV) September 21, 2023
ಇದನ್ನೂ ಓದಿ: ವಿಜಯ್ ಆ್ಯಂಟನಿ ಪುತ್ರಿ ಮೀರಾ ಮೃತದೇಹ ಪತ್ತೆ ಆದಾಗಿಂದ ಡೆತ್ ನೋಟ್ ಸಿಗುವವರೆಗೆ ಏನೆಲ್ಲ ಆಯ್ತು? ಇಲ್ಲಿದೆ ವಿವರ..
ಮೀರಾ ಅವರು ಮಂಗಳವಾರ ಮುಂಜಾನೆ ನೇಣುಬಿಗಿದುಕೊಂಡು ಮೃತಪಟ್ಟರು. ಅವಳು ಬಹಳ ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಅವರು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅಂತ್ಯ ಸಂಸ್ಕಾರದ ವೇಳೆ ಮೀರಾ ತಾಯಿ ಫಾತಿಮಾ ಕಣ್ಣೀರು ಹಾಕಿದ್ದಾರೆ. ‘ನಾನು ನಿನ್ನನ್ನು ಗರ್ಭದಲ್ಲಿ ಹೊತ್ತುಕೊಂಡಿದ್ದೆ. ನೀನು ನನಗೆ ಒಂದು ಮಾತು ಹೇಳಬಹುದಿತ್ತು’ ಎಂದು ಹೇಳಿದ್ದಾರೆಂದು ವರದಿ ಆಗಿದೆ. ಮೀರಾ ಅವರಿಗೆ ವೈದ್ಯೆ ಆಗಬೇಕು ಎನ್ನುವ ಕನಸಿತ್ತು. ಕೇವಲ 16ನೇ ವಯಸ್ಸಿಗೆ ಅವರು ಜೀವನವನ್ನು ಅಂತ್ಯ ಮಾಡಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ