Chikkaballapur News: ವೈದ್ಯನಾಗಬೇಕೆಂಬ ಕನಸು ಕಂಡಿದ್ದ ವಿದ್ಯಾರ್ಥಿ, ಕನಸು ನನಸಾಗದೇ ಆತ್ಮಹತ್ಯೆಗೆ ಶರಣು
ವೈದ್ಯನಾಗಬೇಕೆಂಬ ಕನಸು ಕಂಡಿದ್ದ ವಿದ್ಯಾರ್ಥಿಯೊರ್ವ, ಕನಸು ನನಸಾಗದೆ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ನಯಾಜ್ ಪಾಷ ಆತ್ಮಹತ್ಯಗೆ ಶರಣಾದ ವಿದ್ಯಾರ್ಥಿ.
ಚಿಕ್ಕಬಳ್ಳಾಪುರ: ವೈದ್ಯನಾಗಬೇಕೆಂಬ ಕನಸು ಕಂಡಿದ್ದ ವಿದ್ಯಾರ್ಥಿ(Student)ಯೊರ್ವ, ಕನಸು ನನಸಾಗದೆ ಜಿಗುಪ್ಸೆಗೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಶಿಡ್ಲಘಟ್ಟ ನಗರದ ನಿವಾಸಿ ನಯಾಜ್ ಪಾಷ ಆತ್ಮಹತ್ಯಗೆ ಶರಣಾದ ವಿದ್ಯಾರ್ಥಿ. ಇತ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದ. ಈ ಹಿನ್ನಲೆ ಮೆಡಿಕಲ್ಗೆ ಸೇರಲು ಸಾಧ್ಯವಾಗದೆ ಖಾಸಗಿ ಖೋಟಾದಡಿ ಮೆಡಿಕಲ್ಗೆ ಸೇರಿಸುವಂತೆ ಮನೆಯಲ್ಲಿ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಇದೇ ವಿಚಾರದಲ್ಲಿ ನಯಾಜ್ ಪಾಷಾ ನಿನ್ನೆ(ಜು.11) ರಾತ್ರಿ ಕುಟುಂಬಸ್ಥರೊಂದಿಗೆ ಬೇಸರ ಮಾಡಿಕೊಂಡಿದ್ದನಂತೆ. ಇಂದು(ಜು.12) ಬೆಳಿಗ್ಗೆ ಶಿಡ್ಲಘಟ್ಟ ನಗರದ ಹೊರವಲಯದ ಅಮ್ಮನ ಕರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಶಿಡ್ಲಘಟ್ಟ ನಗರ ಠಾಣೆ ಪೊಲೀಸರು ಅನುಮಾನಸ್ಫದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾದ ವೈದ್ಯ
ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ವೈದ್ಯರೊಬ್ವರು ನಿನ್ನೆ(ಜು.11) ಸಂಜೆ ವಿದ್ಯಾನಗರ ಬಡಾವಣೆಯ ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್.ಪಿ.ಸಿಂಗ್ (62) ಆತ್ಮಹತ್ಯೆಗೆ ಶರಣಾದ ಮೃತ ರ್ದುದೈವಿ. ಇವರು ಕಳೆದ ವರ್ಷವಷ್ಟೇ ಜಿಂದಾಲ್ ಆಸ್ಪತ್ರೆಯ ಸೇವೆಗೆ ಸೇರಿದ್ದರು. ವೈದ್ಯಕೀಯ ವಿಭಾಗದ ನಿರ್ವಹಣೆಯನ್ನು ಮಾಡುತ್ತಿದ್ದ ಇವರು ಮನೆಯಲ್ಲಿ ಪತ್ನಿ ಇರದ ಸಮಯದಲ್ಲಿ ಪ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಪತ್ನಿ ಸಂಜೆ ಬಂದು ನೋಡಿದ ಮೇಲೆ ಈ ವಿಷಯ ಗೊತ್ತಾಗಿದೆ.
ಇದನ್ನೂ ಓದಿ:Uttar Pradesh: ಹೆದ್ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗಲೇ ತಲೆಗೆ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಮೂರು ಅಂಗಡಿಗಳ ಶಟರ್ ಬೀಗ ಮುರಿದು ಕಳ್ಳತನ
ತುಮಕೂರು: ಮೂರು ಅಂಗಡಿಗಳ ಶಟರ್ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ತುಮಕೂರು ತಾಲೂಕಿನ ಬೆಳ್ಳಾವಿ ಕ್ರಾಸ್ನಲ್ಲಿ ನಡೆದಿದೆ. ಕಳ್ಳ ಬೀಗ ಮುರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಒಂದು ಪೇಂಟ್ ಹಾಗೂ ಎರಡು ಚಿಲ್ಲರೆ ಅಂಗಡಿಯಲ್ಲಿ ಕಳ್ಳತನ ಮಾಡಿದ್ದು, ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಘಟನೆ ಮಧ್ಯರಾತ್ರಿ 1 ಗಂಟೆಯಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಕಳ್ಳನ ಗುರುತು ಪತ್ತೆಯಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ