Ramanagara News: ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿ; ವಿದ್ಯಾರ್ಥಿ ಸಾವು
ಕೆಎಸ್ಆರ್ಟಿಸಿ ಬಸ್(KSRTC)ಗೆ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಮನಗರ (Ramanagara) ಜಿಲ್ಲೆಯ ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದ ಬಳಿ ನಡೆದಿದೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಮನಗರ: ಕೆಎಸ್ಆರ್ಟಿಸಿ ಬಸ್(KSRTC)ಗೆ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ರಾಮನಗರ(Ramanagara) ಜಿಲ್ಲೆಯ ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದ ಬಳಿ ನಡೆದಿದೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಈ ವಿದ್ಯಾರ್ಥಿಗಳು ಹಾರೋಹಳ್ಳಿಯಿಂದ ಐಟಿಐ ಪರೀಕ್ಷೆ ಬರೆಯಲು ಮಾಗಡಿಗೆ ಹೋಗುತ್ತಿದ್ದರು ಎನ್ನಲಾಗಿದೆ. ರಸ್ತೆ ತಿರುವಿನಲ್ಲಿ ಈ ಅವಘಡ ನಡೆದಿದೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಪತ್ತೆ ಆಗಿದ್ದ ಮಹಿಳೆ ಶವ ನದಿಯಲ್ಲಿ ಪತ್ತೆ
ದಾವಣಗೆರೆ: ನಾಪತ್ತೆಯಾಗಿದ್ದ ಹೊನ್ನಾಳಿ ತಾಲೂಕಿನ ರೇಬಾಸೂರು ಗ್ರಾಮದ ನಿವಾಸಿ ಶ್ವೇತಾ(28) ಅವರ ಶವ ಸಾಸ್ವಿಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿದೆ. ವರದಕ್ಷಿಣೆಗಾಗಿ ಪತಿ ವೆಂಕಟೇಶ್ ಕುಟುಂಬದವರೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಶ್ವೇತಾ ಸಂಬಂಧಿಕರು ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ಶ್ವೇತಾ ಅವರನ್ನ ಮೂರು ವರ್ಷದ ಹಿಂದೆ ಹಿರೇಬಾಸೂರ ಗ್ರಾಮದ ವೆಂಕಟೇಶ ಎಂಬುವರ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಇವರಿಗೆ ಮುದ್ದಾದ ಒಂದು ವರ್ಷದ ಗಂಡು ಮಗು ಕೂಡ ಇದೆ. ಹೀಗಿರುವಾಗ ಶನಿವಾರ (ಜು.8) ತಡ ರಾತ್ರಿ ನಾಪತ್ತೆಯಾಗಿದ್ದರು. ಇದೀಗ ಅವರ ಶವ ಪತ್ತೆಯಾಗಿದ್ದು, ವರದಕ್ಷಿಣೆ ಕಿರುಕಳ ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ಸದನದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತ ಸಂಬಂಧ ಚರ್ಚೆ; ಪರಿಸ್ಥಿತಿ ವಿವರಿಸಿದ ಗೃಹ ಸಚಿವ ಪರಮೇಶ್ವರ್
ಟೊಮೆಟೊಗೆ ಹೆಚ್ಚಿದ ಬೆಲೆ; ಕಳ್ಳರ ಕಾಟಕ್ಕೆ ಕಂಗಾಲಾದ ರೈತರು
ದಾವಣಗೆರೆ: ಟೊಮೆಟೊ ಬೆಲೆ ಶತಕ ದಾಟಿದ ಹಿನ್ನಲೆ ಕಳ್ಳರ ಕಣ್ಣು ಟೊಮೆಟೊ ಮೇಲೆ ಬಿದ್ದಿದೆ. ಈ ಹಿನ್ನಲೆ ಅನೇಕ ಕಡೆಗಳಲ್ಲಿ ಟೊಮೆಟೊ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದೆ. ಈ ಕಾರಣ ರೈತರು ಹಗಲು ರಾತ್ರಿ ಎನ್ನದೇ ದಾವಣಗೆರೆ ತಾಲೂಕಿನ ಕೊಡಗನೂರು ಸೇರಿದಂತೆ ಹತ್ತಾರು ಕಡೆ ಟೊಮೆಟೊ ತೋಟಗಳನ್ನ ರೈತರು ಕಾಯುತ್ತಿದ್ದಾರೆ. ಜೊತೆಗೆ ಮಾರುಕಟ್ಟೆಗೆ ಹೋಗುವಾಗಲು ಹೆಚ್ಚು ಜಾಗೃತವಾಗಿ ಟೊಮೆಟೊ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ