ಜೆಮ್‌ಶೆಡ್‌ಪುರ: ವಿದ್ಯಾರ್ಥಿನಿಯೊಬ್ಬಳು (student) ಪರೀಕ್ಷೆಯಲ್ಲಿ ನಕಲು ಮಾಡಿದ್ದಾಳೆ ಎಂದು ಶಿಕ್ಷಕಿಯೊಬ್ಬರು ಶಂಕಿಸಿ ಬಟ್ಟೆ ತೆಗೆಯುವಂತೆ ಒತ್ತಾಯಿಸಿದ್ದಾರೆ. ಇದರಿಂದ ಮನನೊಂದು 9 ನೇ ತರಗತಿ ವಿದ್ಯಾರ್ಥಿನಿ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಇದೀಗ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸ್ ಅಧಿಕಾರಿಯ ಪ್ರಕಾರ, ವಿದ್ಯಾರ್ಥಿನಿಯು ತನ್ನ ಸಮವಸ್ತ್ರದಲ್ಲಿ ಪೇಪರ್ ಚಿಟ್‌ಗಳನ್ನು ಇಟ್ಟಿದ್ದಾಳೆ ಎಂದು ಶಿಕ್ಷಕಿ ಶಂಕಿಸಿದ್ದಾರೆ.
ಇದನ್ನು ಓದಿ: ದೆಹಲಿ, ಉತ್ತರ ಪ್ರದೇಶ, ಬಿಹಾರದಲ್ಲಿ ಮತ್ತೆ ಡೆಂಗ್ಯೂ ಕಾಟ; ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಿವು
ಆಕೆ ಇಲ್ಲ ನನ್ನ ಬಟ್ಟೆಯಲ್ಲಿ ಏನು ಇಲ್ಲ ಎಂದರು ಕೂಡ ಬಲವಂತವಾಗಿ ಸಮವಸ್ತ್ರ ತೆಗೆಯುವಂತೆ ಹೇಳಿ ಪರೀಕ್ಷಿಸಿದ್ದಾರೆ ಇದು ಈ ವಿಚಾರಚಾಗಿ ನನ್ನನ್ನೂ ಶಿಕ್ಷಕಿ ಅವಮಾನಿಸಿದ್ದರೆ ಎಂದು ಮನನೊಂದು ತರಗತಿಯ ಪಕ್ಕದ ಕೊಠಡಿಯಲ್ಲಿ ಬಟ್ಟೆ ತೆಗೆಯುವಂತೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶಿಕ್ಷಕನ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅವಮಾನ ತಾಳಲಾರದೆ ಶಾಲೆಯಿಂದ ಬಂದ ಸ್ವಲ್ಪ ಹೊತ್ತಿನಲ್ಲಿಯೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ವಿದ್ಯಾರ್ಥಿನಿಯ ತಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Published On - 11:03 am, Sat, 15 October 22