Dengue: ದೆಹಲಿ, ಉತ್ತರ ಪ್ರದೇಶ, ಬಿಹಾರದಲ್ಲಿ ಮತ್ತೆ ಡೆಂಗ್ಯೂ ಕಾಟ; ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಿವು

Dengue Symptoms: ಬಿಹಾರದಲ್ಲೂ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಬಿಹಾರದಲ್ಲಿ ಈ ವರ್ಷ 3,965 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಶೇ. 78ರಷ್ಟು ಡೆಂಗ್ಯೂ ಕೇಸುಗಳು ಪಾಟ್ನಾದಲ್ಲಿ ಪತ್ತೆಯಾಗಿವೆ.

Dengue: ದೆಹಲಿ, ಉತ್ತರ ಪ್ರದೇಶ, ಬಿಹಾರದಲ್ಲಿ ಮತ್ತೆ ಡೆಂಗ್ಯೂ ಕಾಟ; ನೀವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳಿವು
ಡೆಂಗ್ಯೂ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 15, 2022 | 9:10 AM

ನವದೆಹಲಿ: ದೆಹಲಿ (Delhi) ಮತ್ತು ಉತ್ತರ ಪ್ರದೇಶ (Uttar Pradesh) ಸೇರಿದಂತೆ ಭಾರತದ ಹಲವಾರು ಭಾಗಗಳಲ್ಲಿ ಡೆಂಗ್ಯೂಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ಉತ್ತರ ಪ್ರದೇಶದಲ್ಲಿ 2,200ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು (Dengue Cases) ದಾಖಲಾಗಿದ್ದು, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 380ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅಕ್ಟೋಬರ್ 1ರಿಂದ ಅಕ್ಟೋಬರ್ 5ರ ನಡುವೆ ದೆಹಲಿಯಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ನಿರಂತರ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಮತ್ತಷ್ಟು ಏರಿಕೆ ಕಂಡಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ಎಲ್ಲಾ ದೆಹಲಿ ಆಸ್ಪತ್ರೆಗಳಿಗೆ ಡೆಂಗ್ಯೂ ರೋಗಿಗಳಿಗೆ ಶೇ. 10-15 ಹಾಸಿಗೆಗಳನ್ನು ಕಾಯ್ದಿರಿಸುವಂತೆ ಆದೇಶಿಸಿದೆ. ಫಿರೋಜಾಬಾದ್, ಆಗ್ರಾ ಮತ್ತು ಇಟಾವಾ ಜಿಲ್ಲೆಗಳಲ್ಲಿ ಡೆಂಗ್ಯೂ ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಉತ್ತರ ಪ್ರದೇಶದ ಅಧಿಕಾರಿಗಳೊಂದಿಗೆ ಸಹಕರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಉನ್ನತ ಮಟ್ಟದ 6 ಸದಸ್ಯರ ತಂಡವನ್ನು ಕಳುಹಿಸಿದೆ.

ಬಿಹಾರದಲ್ಲೂ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಬಿಹಾರದಲ್ಲಿ ಈ ವರ್ಷ 3,965 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಶೇ. 78ರಷ್ಟು ಡೆಂಗ್ಯೂ ಕೇಸುಗಳು ಪಾಟ್ನಾದಲ್ಲಿ ಪತ್ತೆಯಾಗಿವೆ. ಇದು 2020 ಮತ್ತು 2021ರಲ್ಲಿ ಬಿಹಾರದಲ್ಲಿ ದಾಖಲಾದ ಪ್ರಕರಣಗಳಿಗಿಂತ 3.5 ಪಟ್ಟು ಜಾಸ್ತಿಯಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Dengue Symptoms: ಮಕ್ಕಳಲ್ಲಿ ವೇಗವಾಗಿ ಹರಡುತ್ತಿರುವ ಡೆಂಗ್ಯೂ, ನಿರ್ಲಕ್ಷ್ಯ ಮಾಡದೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿ

ಡೆಂಗ್ಯೂ ರೋಗಲಕ್ಷಣಗಳು ಯಾವುವು?: ವಿಪರೀತ ಜ್ವರ ತೀವ್ರ ಮೈಕೈ ನೋವು ವಾಂತಿ ಹಸಿವಾಗದಿರುವುದು ತುರಿಕೆ ಚರ್ಮದ ದದ್ದುಗಳು ಲೋ ಬಿಪಿ ಹೊಟ್ಟೆಯಲ್ಲಿ ನೋವು, ಕಣ್ಣುಗಳ ಹಿಂದೆ, ನಿಮ್ಮ ಮೂಳೆಗಳಲ್ಲಿ ನೋವು ರಕ್ತಸ್ರಾವ ಆಯಾಸ ಮತ್ತು ಚಡಪಡಿಕೆ

ಡೆಂಗ್ಯೂಗೆ ಕಾರಣವೇನು?: ಸೋಂಕಿತ ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಬರುತ್ತದೆ. ಈಡಿಸ್ ಅಲ್ಬೋಪಿಕ್ಟಸ್ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ರೋಗ ಬರಬಹುದು. ಈ ಸೊಳ್ಳೆ ಕಚ್ಚಿದ 3-14 ದಿನಗಳ ಒಳಗೆ ಡೆಂಗ್ಯೂ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಮೊದಲಿಗೆ ತೀವ್ರ ಜ್ವರದೊಂದಿಗೆ ಆರಂಭಗೊಳ್ಳುವ ಸಮಸ್ಯೆ ನಂತರ ಬೇರೆ ಬೇರೆ ಲಕ್ಷಣಗಳಿಂದ ರೋಗ ಉಲ್ಬಣಗೊಳ್ಳುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ ಹೆಚ್ಚು.

ಇದನ್ನೂ ಓದಿ: Dengue Variant DENV-2 | 11 ರಾಜ್ಯಗಳಲ್ಲಿ ಹೊಸ ರೂಪದ ಡೆಂಗ್ಯೂ ಜ್ವರ ಪತ್ತೆ; ಆತಂಕ ಹೆಚ್ಚಿಸಿರುವ ಈ ರೋಗದ ಲಕ್ಷಣಗಳೇನು?

ಕೂಲರ್​ಗಳು ಮತ್ತು ಇತರ ಸಣ್ಣ ಕಂಟೇನರ್​ಗಳಿಂದ (ಪ್ಲಾಸ್ಟಿಕ್ ಕಂಟೇನರ್​ಗಳು, ಬಕೆಟ್​ಗಳು, ಬಳಸಿದ ಆಟೋಮೊಬೈಲ್ ಟೈರ್​ಗಳು, ವಾಟರ್ ಕೂಲರ್​ಗಳು, ಪೆಟ್ ವಾಟರ್ ಕಂಟೇನರ್​ಗಳು ಮತ್ತು ಹೂವಿನ ಹೂದಾನಿಗಳು) ನೀರನ್ನು ವಾರಕ್ಕೊಮ್ಮೆಯಾದರೂ ಖಾಲಿ ಮಾಡಬೇಕು.

ನೀರು ಶೇಖರಿಸಿರುವ ಪಾತ್ರೆಗಳನ್ನು ಮುಚ್ಚಳದಿಂದ ಮುಚ್ಚಿಡಬೇಕು. ಸೊಳ್ಳೆಗಳ ಕಡಿತವನ್ನು ತಡೆಯಲು ಹಗಲಿನಲ್ಲಿ ಏರೋಸಾಲ್ ಅನ್ನು ಬಳಸಬಹುದು. ಮಳೆಗಾಲದಲ್ಲಿ ಜನರು ತಮ್ಮ ಕೈಕಾಲುಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸಬೇಕು. ಹಗಲಿನಲ್ಲಿ ಮಲಗುವಾಗ ಸೊಳ್ಳೆ ಪರದೆಗಳು ಅಥವಾ ಸೊಳ್ಳೆ ನಿವಾರಕಗಳನ್ನು ಬಳಸಿ.

ಡೆಂಗ್ಯೂ ರೋಗಕ್ಕೆ ಚಿಕಿತ್ಸೆಗಳು ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ಜನರು ವಿಶ್ರಾಂತಿ ಪಡೆಯುವುದು ಮೊದಲ ಆದ್ಯತೆ ಆಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹಾಗೂ ಜ್ಯೂಸ್ ಕುಡಿಯಬೇಕು. ಅವರು ಜ್ವರ ಮತ್ತು ದೇಹದ ನೋವಿಗೆ ಮಾತ್ರೆ ತೆಗೆದುಕೊಳ್ಳಬಹುದು. ಆದರೂ, ರೋಗಲಕ್ಷಣಗಳು ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್