ಪತಿಯನ್ನು ಕೊಂದು ಮೃತದೇಹವನ್ನ ತುಂಡು-ತುಂಡು ಮಾಡಿ ಮನೆಯಲ್ಲಿ ಹೂತಿಟ್ಟಿದ್ದ ಪತ್ನಿಯ ರಹಸ್ಯ ಬಯಲು

| Updated By: ರಮೇಶ್ ಬಿ. ಜವಳಗೇರಾ

Updated on: Oct 20, 2022 | 11:12 PM

ಕುಡುಕ ಗಂಡನನ್ನ ತಾನೇ ಕೊಂದು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಮನೆಯ ಹಿಂಬಾಗ ಗುಂಡಿ ತೆಗೆದು ಹೂತಿದ್ದ ಪಾತಕಿ ಪತ್ನಿಯ ಸ್ಫೋಟಕ ರಹಸ್ಯ ಬಯಲಾಗಿದೆ.

ಪತಿಯನ್ನು ಕೊಂದು ಮೃತದೇಹವನ್ನ ತುಂಡು-ತುಂಡು ಮಾಡಿ ಮನೆಯಲ್ಲಿ ಹೂತಿಟ್ಟಿದ್ದ ಪತ್ನಿಯ ರಹಸ್ಯ ಬಯಲು
Wife Murdered Husband
Follow us on

ಹಾಸನ: ಗಂಡ ಮೃತಪಟ್ಟಾಗ ಮಾನವೀಯತೆ ಮರೆತು ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿದ್ದಾಳೆ. ಬಳಿಕ ಗುಂಡಿ ತೆಗೆದು ಮನೆಯಿಂದ ಹೂತಿದ್ದಾಳೆ. ಈ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಖಿನ ನೇರಲಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ತನಿಖೆ ವೇಳೆ ಮಹಿಳೆ ಬಾಯ್ಬಿಟ್ಟಿದ್ದಾಳೆ.

ಪತ್ನಿಯೇ ಪತಿಯನ್ನ ಬರ್ಬರವಾಗಿ ಕೊಂದಿದ್ದಾಳೆ. ಅಲ್ಲದೇ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಡಿ-ಬಿಡಿಯಾಗಿ ಮಾಡಿ ಮನೆಯ ಹಿಂದೆ ಗುಂಡಿಯನ್ನೊಂದನ್ನ ತೆಗೆದು ಹೂತಿದ್ದಾಳೆ. ನಂತರ ಏನು ಗೊತ್ತಿಲ್ಲದಂತೆ ನಾಟಕ ಮಾಡುತ್ತ ತನ್ನಪಾಡಿಗೆ ತಾನಿದ್ದ ಪತ್ನಿಯನ್ನ ಪೊಲೀಸರು ವಿಚಾರಣೆಗೊಳಪಡಿಸಿದಾಗ ಹತ್ಯೆ ರಹಸ್ಯ ಬಯಲಾಗಿದೆ.

ಗ್ರಾಮದ ಕೃಷ್ಣೇಗೌಡ ಲೀಲಾವತಿ 25 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರೆ. ಮಗ ಬೆಂಗಳೂರಿನಲ್ಲಿ ಚಾಲಕನಾಗಿದ್ದಾನೆ. ಮನೆಯಲ್ಲಿ ಇಬ್ಬರೇ ಇರ್ತಿದ್ದ ಈ ದಂಪತಿ ನಿತ್ಯ ಜಗಳಮಾಡಿಕೊಳ್ತಿದ್ದರಂತೆ, ಕೃಷ್ಣೆಗೌಡ ಮೊದಲಿನಿಂದಲೂ ಕುಡಿದು ಬಂದು ಗಲಾಟೆ ಮಾಡುವುದು. ಪತ್ನಿಯನ್ನ ಹಿಡಿದು ಹಲ್ಲೆ ಮಾಡುತ್ತಿದ್ದ. ಇದ್ರಿಂದ ರೋಸಿ ಹೋಗಿದ್ದ ಲೀಲಾವತಿ ಕೂಡ ಹಲವು ಬಾರಿ ತವರು ಮನೆಯವರಿಗೆ ಹೇಳಿದ್ದಳು. ಬಳಿಕ ಇಬ್ಬರ ಮಧ್ಯೆ ರಾಜಿ ಪಂಚಾಯಿತಿ ಮಾಡಿದ್ದರು.

ಆದ್ರೆ, ತನ್ನ ನಡವಳಿಕೆಯಲ್ಲಿ ಕೃಷ್ಣೆಗೌಡ ಮಾತ್ರ ಬದಲಾವಣೆ ಕೊಂಡಿರಲಿಲ್ಲ, ಅಕ್ಟೋಬರ್ 17ರ ಸೋಮವಾರ ಕೂಡ ರಾತ್ರಿ ಕೃಷ್ಣೆಗೌಡ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ತನ್ನ ಮೇಲೆ ಹಲ್ಲೆ ಮಾಡಲು ಬಂದ ಪತಿಗೆ ಲೀಲಾವತಿ ಹೊಡೆದಿದ್ದಾಳೆ. ಏಟು ಬೀಳುತ್ತಿದ್ದಂತೆಯೇ ಕೃಷ್ಣೆಗೌಡ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಗಂಡ ಮೃತಪಟ್ಟ ಬಳಿಕ ವಿಚಾರವನ್ನೇ ಮುಚ್ಚಿ ಹಾಕಬೇಕು ಎನ್ನೋ ಉದ್ದೇಶದಿಂದ ಮೃತದೇಹದ ಕೈ ಕಾಲುಗಳನ್ನು ಕಡಿದ ಈ ಕಿರಾತಕ ಪತ್ನಿ, ಮೃತ ದೇಹವನ್ನು ಮನೆಯ ಹಿಂಬಾಗ ಗುಂಡಿ ತೆಗೆದು ಹೂತಿದ್ದಾಳೆ. ಮರು ದಿನ ಏನೂ ಆಗೇ ಇಲ್ಲಾ ಎನ್ನೋ ರೀತಿಯಲ್ಲಿ ಸುಮ್ಮನಿದ್ದಾಳೆ. ಆದ್ರೆ ಊರ ಜನರು ರಾತ್ರಿ ಮನೆಯಲ್ಲಿ ಜಗಳ ಮಾಡ್ತಿದ್ದ ಕೃಷ್ಣೇಗೌಡ ಮರುದಿನ ಕಾಣ್ತಿಲ್ಲವಲ್ಲ, ಎರಡು ದಿನವಾದ್ರು ಎಲ್ಲಿ ಹೋದ ಎಂದು ಅವರ ಸಹೋದರ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದ್ದಾರೆ.

ಮೃತನ ಸಹೋದರ ಸ್ವಾಮಿಗೌಡ ಅರಕಲಗೂಡು ಪೊಲೀಸರಿಗೆ ನೀಡಿದ ದೂರಿನ ಮೇಲೆ ಲೀಲಾವತಿಯನ್ನ ಕರೆತಂದು ವಿಚಾರ ಮಾಡಿದಾಗ ನಡೆದಿರೋ ಹತ್ಯೆ ಪ್ರಕರಣ ಬಯಲಾಗಿದೆ. ಪೊಲೀಸರು ಲೀಲಾವತಿಯನ್ನ ಕರೆತಂದು ವಿಚಾರಣೆ ಮಾಡಿದಾಗ ನಡೆದಿರೋ ಹತ್ಯೆ ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನ ವಶಕ್ಕೆ ಪಡೆದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ನಡುವೆ ಮನೆಗೆ ಮತ್ಯಾರೋ ಒಬ್ಬ ಬಂದು ಹೋಗ್ತಿದ್ದ ಎನ್ನೋ ವಿಚಾರದಲ್ಲಿ ಗಂಡ ಹೆಂಡರ ನಡುವೆ ನಡೆಯುತ್ತಿದ್ದ ಕಲಹ ಇದೀಗ ಒಂದು ಕೊಲೆಯಲ್ಲಿ ಅಂತ್ಯವಾಗಿದೆ, ತಾಯಿ ಮಾಡಿರೋ ಕೃತ್ಯದಿಂದ ಕಂಗಾಲಾಗಿರೋ ಮಕ್ಕಳು ಕಣ್ಣೀರಿಡುತ್ತಿದ್ದಾರೆ. ನಾವೆಲ್ಲಾ ನಮ್ಮಪಾಡಿಗೆ ಬದುಕು ಕಟ್ಟಿಕೊಂಡಿರುವಾಗ ಮನೆಯಲ್ಲಿದ್ದ ಅಪ್ಪ ಅಪ್ಪ ಹೀಗೆಲ್ಲಾ ಅನಾಹುತ ಮಾಡಿಕೊಂಡಿದ್ದಾರೆ ಎಂದು ರೋದಿಸುತ್ತಿದ್ದಾರೆ.

Published On - 11:10 pm, Thu, 20 October 22