AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಹೊರವಲಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ಹೊರವಲಯದ ಶಿವಳ್ಳಿ ರೇಲ್ವೆ ಬ್ರಿಜ್ ಬಳಿ ನಡೆದಿದೆ. 30 ವರ್ಷದ ಯುವಕ ಕೊಲೆಯಾಗಿದ್ದು, ಗುರುತು ಪತ್ತೆಯಾಗಿಲ್ಲ. ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ಹೊರವಲಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಸಾಂದರ್ಭಿಕ ಚಿತ್ರ
ಶಿವಕುಮಾರ್ ಪತ್ತಾರ್
| Edited By: |

Updated on: Oct 24, 2023 | 1:28 PM

Share

ಹುಬ್ಬಳ್ಳಿ ಅ.24: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ (Hubballi) ಹೊರವಲಯದ ಶಿವಳ್ಳಿ ರೇಲ್ವೆ ಬ್ರಿಜ್ ಬಳಿ ನಡೆದಿದೆ. 30 ವರ್ಷದ ಯುವಕ ಕೊಲೆಯಾಗಿದ್ದು, ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು (Police) ಕೊಲೆಯಾದ ಯುವಕನ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಪತ್ನಿಯೊಂದಿಗೆ ಅಕ್ರಮ‌ ಸಂಬಂಧ ಹೊಂದಿದ್ದ ಅಣ್ಣನನ್ನು ಕೊಲೆಗೈದ ತಮ್ಮ

ದೇವನಹಳ್ಳಿ: ತನ್ನ ಪತ್ನಿಯೊಂದಿಗೆ ಅಕ್ರಮ‌ ಸಂಬಂಧ ಹೊಂದಿದ್ದ ಅಣ್ಣನನ್ನು ತಮ್ಮ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಮಂಕಲಾಳ‌ ಗ್ರಾಮದಲ್ಲಿ ನಡೆದಿದೆ. ಅಣ್ಣ ಗಂಗರಾಜು (34) ಕೊಲೆಯಾದ ವ್ಯಕ್ತಿ. ತಮ್ಮ ರವಿ ಕೊಲೆ ಮಾಡಿದ ಆರೋಪಿ.

ಇದನ್ನೂ ಓದಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರ ನಿದ್ರೆಯಲ್ಲಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಯುವತಿ

ಗಂಗರಾಜು, ತಮ್ಮ ರವಿಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ. ಇನ್ನು ರವಿ ಪತ್ನಿ ಕಳೆದೊಂದು ವರ್ಷದಿಂದ ಗಂಡನನ್ನ ಬಿಟ್ಟು ಗಂಗರಾಜು ಜೊತೆ ಬೇರೆ ಊರಲ್ಲಿ ವಾಸವಾಗಿದ್ದಳು. ರವಿ ಪತ್ನಿ, ಕಳೆದ ತಿ‌ಂಗಳು ಗಂಗರಾಜುವನ್ನು ಬಿಟ್ಟು ವಾಪಸ್ ಗಂಡನ ಬಳಿಗೆ ಬಂದಿದ್ದಳು. ಹೀಗಾಗಿ ಗಂಗರಾಜು ಸಹ ಊರಿಗೆ ಬಂದಿದ್ದು, ಇಬ್ಬರ ನಡುವೆ ಗಲಾಟೆ ನಡೆದಿದೆ.

ಜಗಳ ತಾರಕಕ್ಕೇರಿ ರವಿ ಅಣ್ಣ ಗಂಗರಾಜುನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ದೊಡ್ಡಬೆಳವಂಗಲ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ