ಯುವತಿ ಮೇಲೆ ಅತ್ಯಾಚಾರವೆಸಗಿ, ಮದುವೆ ದಿನ ಆಕೆಯನ್ನು ಅಪಹರಿಸಲು ಯತ್ನಿಸಿದ ಯುವಕ
ಮಧ್ಯಪ್ರದೇಶದಲ್ಲಿ ಯುವಕನೊಬ್ಬ 22 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿ, ಆಕೆಯ ವಿಡಿಯೋ ಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಆಕೆಗೆ ಬೇರೆಯೊಬ್ಬ ಯುವತಿಯ ಜತೆಗೆ ಮದುವೆಯಾಗುತ್ತಿದ್ದಾಳೆ ಎಂಬ ವಿಷಯ ಕೇಳಿ ಆಕೆಯನ್ನು ಅಪಹರಿಸಲು ಯತ್ನಿಸಿದ್ದಾನೆ, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶ, ಮೇ.31: ಮಧ್ಯಪ್ರದೇಶದ ಅಶೋಕನಗರದಲ್ಲಿ ಒಂದು ಅಮಾನುಷ ಘಟನೆಯೊಂದು ನಡೆದಿದೆ. 22 ವರ್ಷದ ಯುವತಿಯನ್ನು ಮದುವೆಯ ವೇಳೆ ಅಪಹರಿಸುವ ಯತ್ನ ನಡೆದಿದೆ. ಆರೋಪಿ ಕಲು ಅಲಿಯಾಸ್ ಸಲೀಂ ಖಾನ್ ಈ ಹಿಂದೆ ಆಕೆಯನ್ನು ಅತ್ಯಾಚಾರ ಮಾಡಿ, ವಿಡಿಯೋ ಮಾಡಿ ಆಕೆಗೆ ಮಾನಸಿಕ ಹಿಂಸೆ ನೀಡಿದ್ದ, ಇದೀಗ ಆಕೆಗೆ ಬೇರೊಬ್ಬರನ್ನು ಮದುವೆ ಆಗುತ್ತಿದ್ದಾಳೆ ಎಂದು ಯುವತಿ ಮತ್ತು ಆಕೆಯ ಮನೆಯವರ ಮೇಲೆ ಹಲ್ಲೆ ಮಾಡಿದ್ದಾನೆ.
ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಆತ ತನ್ನ ಸಹಚರರಾದ ಜೋಧಾ, ಸಮೀರ್ ಮತ್ತು ಶಾರುಖ್ ಜೊತೆಗೆ ಆಕೆಯ ಮನೆಗೆ ನುಗ್ಗಿ, ಹಲ್ಲೆ ಮಾಡಿದ್ದಾರೆ. ಇದನ್ನು ಪ್ರತಿಭಟಿಸಿದ ಆಕೆಗೆ ಅಮಾನುಷವಾಗಿ ಹೊಡೆದಿದ್ದಾರೆ. ತಡೆಯಲು ಬಂದು ಆಕೆಯ ತಂದೆ ಮತ್ತು ತಮ್ಮನ ಕೈಯನ್ನು ಮುರಿದಿದ್ದಾರೆ. ಹಾಗೂ ಯುವತಿಯ ತಾಯಿಗೂ ಅಮಾನುಷವಾಗಿ ಥಳಿಸಿದ್ದಾರೆ. ಕತ್ತಿ ಮತ್ತು ಕಬ್ಬಿಣದ ಸರಳುಗಳನ್ನು ಬೀಸುತ್ತಾ ಯುವತಿಯನ್ನು ಆಕೆಯ ಮನೆಯಿಂದ ಹೊರಗೆ ಎಳೆದುಕೊಂಡು ಬಂದಿದ್ದಾರೆ.
Md Adib khan raped a Hindu girl, blackmailed her to marry with him and when her marriage is fixed somewhere else,he attacked her house,and assaulted her family.
This is the reality of “MusIims are being oppressed & Islamophobia in India” type propaganda. https://t.co/iU6yN5MI3z
— Mr Sinha (Modi’s family) (@MrSinha_) May 31, 2024
ಯುವತಿಯು ತನ್ನನ್ನೂ ಕಾಪಾಡುವಂತೆ ಕಿರುಚಿದ್ದಾಳೆ. ಈ ವೇಳೆ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದಾರೆ. ಸಲೀಂ ಖಾನ್ ಅವರಿಗೂ ಬೆದರಿಕೆ ಹಾಕಿದ್ದಾನೆ. ಹೆಚ್ಚು ಜನ ಸೇರುವುದನ್ನು ಕಂಡು ಅಲ್ಲಿಂದ ಸಲೀಂ ಖಾನ್ ಮತ್ತು ಆತನ ಸಹಚರರಾದ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳು ಯುವತಿಯ ಮನೆಯವರಿಗೆ ಹಾಗೂ ಆಕೆಯನ್ನು ಮದುವೆ ಆಗುವ ಹುಡುಗನ ಕಡೆಯವರಿಗೂ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಲವರ್ ಜೊತೆ ಸೇರಿ ತಂದೆ, ತಮ್ಮನನ್ನು ಕೊಚ್ಚಿ ಕೊಂದು ಫ್ರೀಜರ್‌ನಲ್ಲಿಟ್ಟಿದ್ದ 16 ರ ಬಾಲಕಿಯ ಬಂಧನ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂಯೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ, ಬುಧವಾರ ತಡರಾತ್ರಿ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ತಕ್ಷಣ ಅವರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ