ನೆಲಮಂಗಲ: ಗುರಾಯಿಸಿ ನಿಂದಿಸಿದ ಯುವಕನಿಗೆ ಚಾಕು ಇರಿತ

ತನ್ನನ್ನು ಗುರಾಯಿಸಿ ನಿಂದಿಸಿದ್ದಾಗಿ ವ್ಯಕ್ತಿಯೊಬ್ಬ ಯುವಕನಿಗೆ ಚಾಕು ಇರಿದ ಘಟನೆ ಬೆಂಗಳುರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ ಬೇಗೂರು ಗ್ರಾಮದಲ್ಲಿ ನಡೆದಿದೆ. ಘಟನೆ ಬಗ್ಗೆ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ಪಡೆದಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ಗುರಾಯಿಸಿ ನಿಂದಿಸಿದ ಯುವಕನಿಗೆ ಚಾಕು ಇರಿತ
ನೆಲಮಂಗಲದಲ್ಲಿ ಗುರಾಯಿಸಿ ನಿಂದಿಸಿದ ಯುವಕನಿಗೆ ಚಾಕು ಇರಿದ ವ್ಯಕ್ತಿ (ಫೋಟೋ: ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುತ್ತಿರುವುದು)
Edited By:

Updated on: Jan 30, 2024 | 7:16 AM

ನೆಲಮಂಗಲ, ಜ.30: ತನ್ನನ್ನು ಗುರಾಯಿಸಿ ನಿಂದಿಸಿದ್ದಾಗಿ ವ್ಯಕ್ತಿಯೊಬ್ಬ ಯುವಕನಿಗೆ ಚಾಕು ಇರಿದ ಘಟನೆ ಬೆಂಗಳುರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಟಿ ಬೇಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ಮಂಜುನಾಥ್ ಕೊಲೆ ಯತ್ನ ಮಾಡಿದ ಆರೋಪಿಯಾಗಿದ್ದು, ಅಶ್ವತ್ಥ್​ ಕುಮಾರ್ (30)​ ಚಾಕು ಇರಿತಕ್ಕೊಳಗಾದ ಯುವಕನಾಗಿದ್ದಾನೆ.

ಅಶ್ವತ್ಥ್ ಕುಮಾರ್ ಸೂರ್ಯ ಗ್ಯಾಸ್ ಎಂಬ​ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನನ್ನು ಗುರಾಯಿಸಿದ್ದಲ್ಲದೆ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಮಂಜುನಾಥ್ ತನ್ನ ಡಿಯೋ ಬೈಕ್​ನಲ್ಲಿ ಬಂದು ಅಶ್ವತ್ಥ್​ ಕುಮಾರ್​ಗೆ ಚಾಕು ಇರಿದು ಪರಾರಿಯಾಗಿದ್ದಾನೆ.

ಇದನ್ನೂ ಓದಿ: ಹಾವೇರಿ: ಬೇರೊಬ್ಬನೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂದು ಪ್ರೀತಿಸಿದ ಯುವತಿಗೆ ಚಾಕು ಇರಿದ ಪ್ರಿಯತಮ

ಗಾಯಾಳು ಅಶ್ವತ್ಥ್ ಕುಮಾರ್​ ಅವರನ್ನು ಕೂಡಲೇ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಅಸ್ಪತ್ರೆ ಬಳಿ ಆಗಮಿಸಿದ ಗಾಯಳು ಅಶ್ವಥ್ ಕುಮಾರ್ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಅಹಿತಕರ ಘಟನೆಗಳು ನಡಯದಂತೆ ಗ್ರಾಮದಲ್ಲಿ ಪೊಲೀಸನ್ನು ನಿಯೋಜಿಸಲಾಗಿದೆ. ಕೊಲೆ ಯತ್ನ ಪ್ರಕರಣದ ಕುರಿತು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ