ಅಪ್ಪನೊಂದಿಗೆ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯ ಇರ್ವಿನ್​ನಲ್ಲಿ ವಾಸವಾಗಿದ್ದ ಯುವಕ ಜನ್ಮ ನೀಡಿದಾತನನ್ನೇ ಇರಿದು ಕೊಂದನೇ?

ಟೈಲರ್ ದೇಹದ ಮೇಲೆ ಗಾಯಗಳು ನಮಗೆ ಕಂಡಿಲ್ಲ. ಹತ್ಯೆಯ ಉದ್ದೇಶವೇನಾಗಿತ್ತು ಅನ್ನೋದು ತನಿಖೆಯ ಬಳಿಕವೇ ಗೊತ್ತಾಗಬೇಕು, ಎಂದು ಇರ್ವಿನ್ ಪೊಲೀಸ್ ಇಲಾಖೆಯ ಸಾರ್ಜೆಂಟ್ ಕೇರೀ ಡೇವಿಸ್ ಹೇಳಿದ್ದಾರೆ.

ಅಪ್ಪನೊಂದಿಗೆ ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿಯ ಇರ್ವಿನ್​ನಲ್ಲಿ ವಾಸವಾಗಿದ್ದ ಯುವಕ ಜನ್ಮ ನೀಡಿದಾತನನ್ನೇ ಇರಿದು ಕೊಂದನೇ?
ಶಂಕಿತ ಟೈಲರ್ ಶಿಪ್ಪರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2023 | 8:07 AM

ಮಕ್ಕಳು ತಮಗೆ ಜನ್ಮ ನೀಡಿದ ತಂದೆತಾಯಿಗಳ ಮೇಲೆಲ ಹಲ್ಲೆ ನಡೆಸುವುದು ಅದ್ಯಾವ ಸಂಸ್ಕೃತಿಯ ಭಾಗವೋ? ಈ ಬಗೆಯ ಘಟನೆಗಳು ಎಲ್ಲ ದೇಶಗಳಲ್ಲಿ ನಡೆಯುತ್ತವೆ. ಆಸ್ತಿಗಾಗಿ, ಹೆಂಡ ಮತ್ತು ಡ್ರಗ್ಸ್ ಅಮಲಿನಲ್ಲಿ ಅಥವಾ ಇನ್ಯಾವುದೋ ಹತಾಷೆಯಲ್ಲಿ ಬೆಳೆದ ಮಕ್ಕಳು ತಮ್ಮನ್ನು ಬೆಳೆಸಿದ ತಂದೆ ಇಲ್ಲವೇ ತಾಯಿ ಮೇಲೆ ಹಲ್ಲೆ ಮಾಡುತ್ತಾರೆ, ಕೆಲವು ಸಲ ಮಾರಣಾಂತಿಕವಾಗಿ. ಕುಡಿಯಲ್ಲಿ ಹಣ ನೀಡಲಿಲ್ಲ ಅಂತ ಅಮ್ಮನ ಮೇಲೆ ಹಲ್ಲೆ ನಡೆಸಿ ಪರಾಕ್ರಮಿ ಮಕ್ಕಳ ಕತೆಗಳು ನಮ್ಮ ದೇಶದಲ್ಲೇ ಸಾಕಷ್ಟು ಸಿಗುತ್ತವೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಕ್ಯಾಲಿಫೋರ್ನಿಯ (California) ಅರೇಂಜ್ ಕೌಂಟಿಯ (Orange County) ಇರ್ವಿನ್ (Irvine) ಎಂಬಲ್ಲಿ ಅಪ್ಪನೊಂದಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಕೊಂದ ಆರೋಪದಲ್ಲಿ ಅರೆಸ್ಟ್ ಆಗಿದ್ದಾನೆ.

ಸ್ನೇಹಿತ ಮನೆಗ ಹೋದಾಗ ಮಗ ಮನೆಯೊಳಗೆ ಬರಲು ಬಿಡಲಿಲ್ಲ

69-ವರ್ಷ-ವಯಸ್ಸಿನವಾರಾಗಿದ್ದ ಬ್ರೂಸ್ ಶಿಪ್ಪರ್ ಅವರನ್ನು ಕೊಲೆ ಮಾಡಿದ ಅರೋಪದಲ್ಲಿ ಇರ್ವಿನ್ ಪೊಲೀಸ್ ಅವರ ಮಗ 24-ವರ್ಷ-ವಯಸ್ಸಿನ ಟೈಲರ್ ಶಿಪ್ಪರ್ ನನ್ನು ವಶಕ್ಕೆ ಪಡೆದಿದ್ದಾರೆ. ಪೋಲಿಸರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ ಆ ಮನೆಯಲ್ಲಿ ಅವರಿಬ್ಬರೇ ವಾಸವಾಗಿದ್ದರು. ಕಳೆದ ಶನಿವಾರದಂದು ಬ್ರೂಸ್ ಕೆಲಸಕ್ಕೆ ಗೈರುಹಾಜರಾದ ಕಾರಣ ಅವರ ಸ್ನೇಹಿತ ಮತ್ತು ಸಹೋದ್ಯೋಗಿಯೊಬ್ಬರು ಅರೋಗ್ಯಾವಾಗಿದ್ದಾರಾ ಅಂತ ವಿಚಾರಿಸುವ ಉದ್ದೇಶದಿಂದ ಇರ್ವಿನ್ ವುಡ್ ಬ್ರಿಜ್ ಕಮ್ಯುನಿಟಿಯಲ ವಿಂಡ್ ವುಡ್ ಡ್ರೈವ್ ನಲ್ಲಿರುವ ಅವರ ಮನೆಗೆ ಹೋಗಿದ್ದಾರೆ.

ಇದನ್ನೂಓದಿ: China Covid Cases: ಚೀನಾದಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದರೂ ವಿದೇಶಿ ಪ್ರಯಾಣ ನಿರ್ಬಂಧ ತೆರವು, ಕ್ವಾರಂಟೈನ್ ಇಲ್ಲ

ಅವರು ಬಾಗಿಲು ತಟ್ಟಿದ ನಂತರ ಓಪನ್ ಮಾಡಿದ ಟೈಲರ್ ಗಾಬರಿಯಲ್ಲಿದ್ದಂತೆ ಕಂಡನಂತೆ ಮತ್ತು ಅವರಿಗೆ ಒಳಗೆ ಪ್ರವೇಶಿಸಲು ಬಿಡಲಿಲ್ಲವಂತೆ. ಅವರಿಗೆ ಸಂಶಯವುಂಟಾಗಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೂಡಲೇ ಇರ್ವಿನ್ ಪೊಲೀಸ್ ಅಧಿಕಾರಿಗಳು ಪ್ಯಾರಾ ಮೆಡಿಕ್ಸ್ ಜೊತೆ ಅಲ್ಲಿಗೆ ಧಾವಿಸಿದ್ದಾರೆ. ಮನೆಯೊಳಗೆ 69ರ ಇಳಿಪ್ರಾಯದ ಬ್ರೂಸ್ ದೇಹ ಪತ್ತೆಯಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೊಲೆ ನಡೆದ ಸ್ಥಳದಲ್ಲಿ ಚೂರಿ

ಅಪರಾಧ ಬಳಕೆಯಾಗಿರಬಹುದಾದ ಚೂರಿಯೊಂದು ಶವದ ಪಕ್ಕದಲ್ಲಿ ದೊರಕಿದ್ದು ಅದನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ, ಎಂದು ಇರ್ವಿನ್ ಪೊಲೀಸರು ಹೇಳಿದ್ದಾರೆ. ಟೈಲರ್ ದೇಹದ ಮೇಲೆ ಯಾವುದೇ ಗಾಯ ಕಂಡುಬಂದಿಲ್ಲ, ಪ್ರಕರಣದ ತನಿಖೆ ಜಾರಿಯಲ್ಲಿದೆ.

ಕೊಲೆ ನಡೆದ ಮನೆಯಲ್ಲಿ ಕೇವಲ ಟೈಲರ್ ಮತ್ತು ಮೃತ ವ್ಯಕ್ತಿ ಮಾತ್ರ ವಾಸವಾಗಿದ್ದರು ಅಂತ ಮೇಲ್ನೋಟಕ್ಕೆ ಕಾಣುತ್ತಿದೆ. ಟೈಲರ್ ದೇಹದ ಮೇಲೆ ಗಾಯಗಳು ನಮಗೆ ಕಂಡಿಲ್ಲ. ಹತ್ಯೆಯ ಉದ್ದೇಶವೇನಾಗಿತ್ತು ಅನ್ನೋದು ತನಿಖೆಯ ಬಳಿಕವೇ ಗೊತ್ತಾಗಬೇಕು, ಎಂದು ಇರ್ವಿನ್ ಪೊಲೀಸ್ ಇಲಾಖೆಯ ಸಾರ್ಜೆಂಟ್ ಕೇರೀ ಡೇವಿಸ್ ಹೇಳಿದ್ದಾರೆ.

ಇದನ್ನೂಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಪಾತಕಿ ಆಟೋ ಶಂಕರ್ ಗಲ್ಲಿಗೇರುವ ಮೊದಲು ಚೆನೈ ನಗರದ ಪೊಲೀಸ್ ವ್ಯವಸ್ಥೆಯನ್ನೇ ಅಲ್ಲಾಡಿಸಿಬಿಟ್ಟಿದ್ದ!

ಮಗ ಪೊಲೀಸರ ವಶಕ್ಕೆ

ಸ್ಥಳದಲ್ಲಿ ದೊರೆತ ಚೂರಿಯಿಂದಲೇ ಬ್ರೂಸ್ ಅವರನ್ನು ಇರಿದು ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದು ಅದರ ಮೇಲಿದ್ದ ರಕ್ತದ ಕಲೆಗಳನ್ನು ಒರೆಸುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ. ಕೊಲೆಯ ಆರೋಪದಲ್ಲಿ ಟೈಲರ್ ನನ್ನು ಅರೆಸ್ಟ್ ಮಾಡಲಾಗಿದೆ ಎಂದು ಡೇವಿಸ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂರೆ ಇರ್ವಿನ್ ನಿವಾಸಿಗಳ ಪೈಕಿ ಯಾರಲ್ಲಾದರೂ ಮಾಹಿತಿಯಿದ್ದರೆ ತಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಪೊಲೀಸರು ಹೇಳಿದ್ದಾರೆ.

ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್