ಕಲಬುರಗಿ: ಡಿಪೋ ಮ್ಯಾನೇಜರ್ ಬಳಿ ಲಂಚ ಸ್ವೀಕರಿಸುತ್ತಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NEKRTC)ಯ ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಆಳಂದ ಡಿಪೋ ಮ್ಯಾನೇಜರ್ ಈಶ್ವರ್ ಮೇಲಿನ ಕೇಸ್ಗಳನ್ನ ಕ್ಯಾನ್ಸಲ್ ಮಾಡೋಕೆ 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಇಂದು ನಗರದ ಕೇಂದ್ರ ಬಸ್ ನಿಲ್ದಾಣದ ಕಚೇರಿಯಲ್ಲಿ ಈಶ್ವರ್ ಬಳಿ 50 ಸಾವಿರ ಹಣ ಪಡೆಯಲು ಆರೋಪಿಗಳು ಮುಂದಾಗಿದ್ದರು. ಈ ವೇಳೆ ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಗ NEKRTC ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಡಿ.ಬಾವಿಕಟ್ಟಿ ಮತ್ತು ಸಂಚಾರಿ ನಿಯಂತ್ರಣಾಧಿಕಾರಿ ಜಯವಂತ್ ಎಂಬುವರು ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪೆಟ್ಟಿ ಕೇಸ್ ಕ್ಲಿಯರ್ಗೆ 1 ಲಕ್ಷ ಡಿಮ್ಯಾಂಡ್:
ಈಶ್ವರ್ ಮೇಲೆ ಸುಮಾರು 22 ಪೆಟ್ಟಿ ಕೇಸ್ಗಳಿದ್ದವು. ಈ ಕೇಸ್ಗಳು ಕ್ಲಿಯರ್ ಆದ್ರೆ ಡಿಪೋ ಮ್ಯಾನೇಜರ್ ಈಶ್ವರ್ಗೆ ಪ್ರಮೋಷನ್ ಸಿಗುತ್ತಿತ್ತು. ಹೀಗಾಗಿ ಸಂಚಾರಿ ನಿಯಂತ್ರಣಾಧಿಕಾರಿ ಜಯವಂತ್ ಮುಖಾಂತರ ಎಸ್.ಡಿ.ಬಾವಿಕಟ್ಟಿ ಒಂದು ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದಾರೆ. ಈ ಸಂಬಂಧ ಎಸಿಬಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published On - 9:02 pm, Mon, 4 November 19