ಮೊಬೈಲ್ ಅಂಗಡಿಯೊಂದರಲ್ಲಿ ಆಕಸ್ಮಿಕ ಗುಂಡಿನ ದಾಳಿ, ಪೊಲೀಸ್ ಅಧಿಕಾರಿ ಅಮಾನತು, ಒಬ್ಬನಿಗೆ ಗಾಯ

ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಆಕಸ್ಮಿಕವಾಗಿ ಪೊಲೀಸ್ ಅಧಿಕಾರಿ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ

ಮೊಬೈಲ್ ಅಂಗಡಿಯೊಂದರಲ್ಲಿ ಆಕಸ್ಮಿಕ ಗುಂಡಿನ ದಾಳಿ, ಪೊಲೀಸ್ ಅಧಿಕಾರಿ ಅಮಾನತು, ಒಬ್ಬನಿಗೆ ಗಾಯ
Accidental firing at a mobile shop, police officer suspended, one injured
Edited By:

Updated on: Oct 20, 2022 | 10:53 AM

ಅಮೃತಸರ: ಮೊಬೈಲ್ ಅಂಗಡಿಯಲ್ಲಿ ( mobile shop) ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಆಕಸ್ಮಿಕವಾಗಿ ಪೊಲೀಸ್ ಅಧಿಕಾರಿ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ಪಂಜಾಬ್‌( Punjab) ಅಮೃತಸರದಲ್ಲಿ (Amritsar) ನಡೆದಿದೆ, ಇದೀಗ ಈ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಈ ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೊಲೀಸರು ಮೊಬೈಲ್ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ತನ್ನ ಬಂದೂಕನ್ನು ಹೊರತೆಗೆದು ತನ್ನ ಪಕ್ಕದಲ್ಲಿ ನಿಂತಿರುವ ವ್ಯಕ್ತಿಗೆ ಮತ್ತು ಮೊಬೈಲ್ ಅಂಗಡಿಯ ಕೌಂಟರ್‌ಗೆ ಅಡ್ಡಲಾಗಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿಗೆ ತೋರಿಸಿದ್ದಾರೆ.

ಪೊಲೀಸ್ ಪೇದೆಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ತನ್ನ ಕೈಯಲ್ಲಿದ್ದ ಬಂದೂಕನ್ನು ತೋರಿಸಿದಾಗ, ಪೊಲೀಸರು ತಕ್ಷಣ ಅದನ್ನು ತೆಗೆದುಕೊಂಡು ಆಕಸ್ಮಿಕವಾಗಿ ಟ್ರಿಗರ್ ಅನ್ನು ಎಳೆದಿದ್ದಾರೆ. ಇದರಿಂದ ಪಕ್ಕದಲ್ಲಿ ನಿಂತಿದ್ದ ಯುವಕ ಮೇಲೆ ಪೈರಿಂಗ್ ಆಗಿದೆ.

ಇದನ್ನು ಓದಿ: Crime News: ಹೈದರಾಬಾದ್ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಪ್ರಿನ್ಸಿಪಾಲ್ ಚಾಲಕನಿಂದ ಅತ್ಯಾಚಾರ!

ಘಟನೆಯಲ್ಲಿ ಗಾಯಗೊಂಡ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಮೃತಸರದ ಸಹಾಯಕ ಪೊಲೀಸ್ ಆಯುಕ್ತ ವರೀಂದರ್ ಸಿಂಗ್ ಹೇಳಿದ್ದಾರೆ. ಇದೀಗ ಈ ಘಟನೆಗೆ ಕಾರಣರಾದ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬದವರ ಹೇಳಿಕೆಗಳನ್ನು ಆಧರಿಸಿ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ವರೀಂದರ್ ಸಿಂಗ್ ಹೇಳಿದರು.

Published On - 10:53 am, Thu, 20 October 22