ದೆಹಲಿಯ ಭಜನ್​ಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಮೆಜಾನ್ ಮ್ಯಾನೇಜರ್ ಹತ್ಯೆ, ಓರ್ವನಿಗೆ ಗಾಯ

|

Updated on: Aug 30, 2023 | 11:39 AM

ದೆಹಲಿಯ ಭಜನ್​ಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಮೆಜಾನ್ ಮ್ಯಾನೇಜರ್​ ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾರೆ. ಈಶಾನ್ಯ ದೆಹಲಿಯ ಭಜನ್​ಪುರದಲ್ಲಿ ಅಮೆಜಾನ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯನ್ನು ಶಸ್ತ್ರಸಜ್ಜಿತ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಮತ್ತು ಇನ್ನೊಬ್ಬರನ್ನು ಗಾಯಗೊಳಿಸಿದ್ದಾರೆ.

ದೆಹಲಿಯ ಭಜನ್​ಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಮೆಜಾನ್ ಮ್ಯಾನೇಜರ್ ಹತ್ಯೆ, ಓರ್ವನಿಗೆ ಗಾಯ
ಹರ್ಮನ್​ಪ್ರೀತ್ ಗಿಲ್
Image Credit source: News 9
Follow us on

ದೆಹಲಿಯ ಭಜನ್​ಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಮೆಜಾನ್ ಮ್ಯಾನೇಜರ್​ ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾರೆ.
ಈಶಾನ್ಯ ದೆಹಲಿಯ ಭಜನ್​ಪುರದಲ್ಲಿ ಅಮೆಜಾನ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿಯನ್ನು ಶಸ್ತ್ರಸಜ್ಜಿತ ದಾಳಿಕೋರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಮತ್ತು ಇನ್ನೊಬ್ಬರನ್ನು ಗಾಯಗೊಳಿಸಿದ್ದಾರೆ.

ಮಂಗಳವಾರ ರಾತ್ರಿ 11.30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಸುಭಾಷ್ ವಿಹಾರ್ ಪ್ರದೇಶದಲ್ಲಿ ಎರಡು ದ್ವಿಚಕ್ರ ವಾಹನಗಳಲ್ಲಿ ಹೋಗುತ್ತಿದ್ದಾಗ, ಐವರು ಶಸ್ತ್ರಸಜ್ಜಿತ ವ್ಯಕ್ತಿಗಳು ಹರ್‌ಪ್ರೀತ್ ಗಿಲ್ ಮತ್ತು ಅವರ 32 ವರ್ಷದ ಸ್ನೇಹಿತ ಗೋವಿಂದ್ ಸಿಂಗ್ ಅವರನ್ನು ಅಡ್ಡಗಟ್ಟಿದ್ದರು.

ಗಿಲ್ ಅವರ ತಲೆಗೆ ಗುಂಡೇಟು ತಗುಲಿತ್ತು ಮತ್ತು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರದೇಶದಲ್ಲಿ ಉಪಾಹಾರ ಗೃಹವನ್ನು ನಡೆಸುತ್ತಿರುವ ಗೋವಿಂದ್ ಅವರ ತಲೆಗೂ ಗುಂಡಿನ ಗಾಯಗಳಾಗಿವೆ ಸದ್ಯ ಲೋಕನಾಯಕ ಜೈ ಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ಗಿಲ್ ಮತ್ತು ಗೋವಿಂದ್ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿ ನಡೆದಿದೆ. ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ (ಈಶಾನ್ಯ) ಜಾಯ್ ಟಿರ್ಕಿ, ಗಿಲ್ ಅವರ ತಲೆಗೆ ಬಲಭಾಗದಿಂದ ಗುಂಡು ತಗುಲಿತು, ತಲೆಯ ಮುಂಬಾಗದಿಂದ ಬುಲೆಟ್​ ಹೊರಹೋಗಿತ್ತು.

ಗುಂಡಿನ ದಾಳಿ ದೃಶ್ಯಾವಳಿ

ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ದಾಳಿಕೋರರನ್ನು ಗುರುತಿಸಲು ಆ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನಷ್ಟೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ