ಅಧಿಕಾರಿಗಳಿಂದ ಕಿರುಕುಳ ಆರೋಪ: ಆತ್ಮಹತ್ಯೆಗೆ ಯತ್ನಿಸಿದ ಅಂಬೇಡ್ಕರ್ ಸೇವಾ ಸಮಿತಿ ಮುಖಂಡ
ಗಣ್ಯ ವ್ಯಕ್ತಿಗಳು ಹಾಗೂ ಕೆಲವು ಅಧಿಕಾರಿಗಳ ಕಿರುಕುಳದ ಆರೋಪ ಹಿನ್ನೆಲೆ ಅಂಬೇಡ್ಕರ್ ಸೇವಾ ಸಮಿತಿ ಸಂಘಟನೆಯ ಸಂಸ್ಥಾಪಕ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ (suicide) ಯತ್ನಿಸಿರುವಂತಹ ಘಟನೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ: ಗಣ್ಯ ವ್ಯಕ್ತಿಗಳು ಹಾಗೂ ಕೆಲವು ಅಧಿಕಾರಿಗಳ ಕಿರುಕುಳದ ಆರೋಪ ಹಿನ್ನೆಲೆ ಅಂಬೇಡ್ಕರ್ ಸೇವಾ ಸಮಿತಿ ಸಂಘಟನೆಯ ಸಂಸ್ಥಾಪಕ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ (suicide) ಯತ್ನಿಸಿರುವಂತಹ ಘಟನೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂದೇಶ್ (28) ಆತ್ಮಹತ್ಯೆಗೆ ಯತ್ನಿಸಿದ ಮುಖಂಡ. ಇತ್ತೀಚೆಗೆ ಕಿಡ್ನಾಪ್ ಪ್ರಕರಣವೊಂದರಲ್ಲಿ ಸಂದೇಶ್ ಜೈಲು ಸೇರಿದ್ದ. ಇದನ್ನೆ ಗುರಿಯಾಗಿಸಿಕೊಂಡು ಅನಗತ್ಯವಾಗಿ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ ಆರೋಪ ಮಾಡಲಾಗಿದೆ. ಸದ್ಯ ಸಂದೇಶ್ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಅನುಮಾನಸ್ಪದವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಚಿಕ್ಕಮಗಳೂರು: ಅನುಮಾನಸ್ಪದವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ನಗರದ AIT ಬಾಯ್ಸ್ ವಸತಿ ನಿಲಯದಲ್ಲಿ ನಡೆದಿದೆ. ಕಿಶೋರ್ ಮೃತ ಇಂಜಿನಿಯರಿಂಗ್ ವಿದ್ಯಾರ್ಥಿ. ಹಾಸ್ಟೆಲ್ ಕಿಟಕಿಗೆ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವಪತ್ತೆಯಾಗಿದೆ. ದ್ವಿತೀಯ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಮೃತ ಕಿಶೋರ್, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಿವಾಸಿ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಆತ್ಮಹತ್ಯೆ, ಶೀಲ ಶಂಕಿಸಿ ಪತ್ನಿಯನ್ನ ಕೊಂದು ನೇರವಾಗಿ ಪೊಲೀಸ್ ಠಾಣೆಗೆ ಹೋದ ಪತಿ
ಕ್ಲುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ಆನೇಕಲ್: ಕ್ಲುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ ನಡೆದಿದೆ. ಹಕ್ಕಿ ಪಿಕ್ಕಿ ಕಾಲೋನಿ ನಿವಾಸಿ ದೊಡ್ಡ ಮಾದಯ್ಯ(57) ಕೊಲೆಯಾದ ವ್ಯಕ್ತಿ. ಕಳೆದ ಶನಿವಾರ ರಾತ್ರಿ ತಲೆ ಮೇಲೆ ಸೈಜು ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಪಚ್ವಿ ಆಟ(ಹುಣಸೆ ಬೀಜ) ಆಡುವ ವೇಳೆ ಗಲಾಟೆ ನಡೆದಿದೆ. ಕುಡಿದ ಅಮಲಿನಲ್ಲಿ ಜೊತೆಯಲ್ಲಿದ್ದವರನ್ನು ನಿಂದಿಸಿದ್ದು, ಈ ವೇಳೆ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಬನ್ನೇರುಘಟ್ಟ ಪೊಲೀಸರಿಂದ ಆರು ಮಂದಿ ಶಂಕಿತ ಆರೋಪಿಗಳ ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಹೆತ್ತ ಕರುಳು ಬಳ್ಳಿ ನೋಡಲು ಪರದಾಟ: ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ತಾಯಿ ಆತ್ಮಹತ್ಯೆಗೆ ಯತ್ನ
2 ಅಡಿ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ
ಚಿಕ್ಕಮಗಳೂರು: 2 ಅಡಿ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಇಂದು ತರೀಕೆರೆ ತಾಲೂಕಿನ ದೊಡ್ಡ ಲಿಂಗೇನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಿತ್ರಿ, ಅಮರ್ ನಾಯ್ಕ್, ರಾಮನಾಯ್ಕ್ ಎಂಬುವರಿಗೆ ಗಾಯಗಳಾಗಿವೆ. ಮಂಜುನಾಯ್ಕ್, ಉಮೇಶ್, ಅಣ್ಣಾನಾಯ್ಕ್, ತೇಜು ಎನ್ನುವವರು ಹಲ್ಲೆ ಮಾಡಿ ಪರಾರಿಯಾಗಿದ್ದು, ಕೇಸ್ ದಾಖಲಿಸಿಕೊಳ್ಳಲು ಲಿಂಗದಹಳ್ಳಿ ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಇದರಿಂದ ಹಲ್ಲೆಗೊಳಗಾದ ಕುಟುಂಬಸ್ಥರು ಎಸ್ಪಿಗೆ ದೂರು ನೀಡಲು ಮುಂದಾಗಿದ್ದಾರೆ.
ಶೀಲ ಶಂಕಿಸಿ ಪತ್ನಿಯನ್ನೇ ಹತ್ಯೆ ಮಾಡಿದ ಪತಿ
ಕೋಲಾರ: ಶೀಲ ಶಂಕಿಸಿ ಪತ್ನಿಯನ್ನೇ ಹತ್ಯೆ ಮಾಡಿದ ಪತಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯ ಅಮರಾವತಿ ಬಡಾವಣೆಯಲ್ಲಿ ನಡೆದಿದೆ. ಪತಿ ನಾಗರಾಜ್ ಎನ್ನುವಾತ ಪತ್ನಿ ನಂದಿನಿ(34) ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತಾನೇ ನೇರವಾಗಿ ಬಂಗಾರಪೇಟೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:43 pm, Mon, 6 March 23