ಹೆತ್ತ ಕರುಳು ಬಳ್ಳಿ ನೋಡಲು ಪರದಾಟ: ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ತಾಯಿ ಆತ್ಮಹತ್ಯೆಗೆ ಯತ್ನ

ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ಲೈವ್ ವಿಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ದೇವನಹಳ್ಳಿ ಹೊರವಲಯದ ಒಜೋನ್ ಅರ್ಬನಾ ಅಪಾರ್ಟ್ಮೆಂಟ್ ಬಳಿ ನಡೆದಿದೆ.

ಹೆತ್ತ ಕರುಳು ಬಳ್ಳಿ ನೋಡಲು ಪರದಾಟ: ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ತಾಯಿ ಆತ್ಮಹತ್ಯೆಗೆ ಯತ್ನ
ಆತ್ಮಹತ್ಯೆಗೆ ಯತ್ನಿಸಿದ ತಾಯಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 06, 2023 | 1:15 PM

ಬೆಂಗಳೂರು ಗ್ರಾಮಾಂತರ: ಮಗುವನ್ನು ನೋಡಲು ಮೊದಲ ಗಂಡ ಬಿಡುತ್ತಿಲ್ಲ ಎಂದು ಲೈವ್ ವಿಡಿಯೋ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ದೇವನಹಳ್ಳಿ ಹೊರವಲಯದ ಒಜೋನ್ ಅರ್ಬನಾ ಅಪಾರ್ಟ್ಮೆಂಟ್ ಬಳಿ ನಡೆದಿದೆ. ತುಮಕೂರು ಮೂಲದ ಮಹಿಳೆ ಸುಮಯಾ ಬಾನು ಎಂಬ ಮಹಿಳೆಯೇ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ‌ ಎರಡು ವರ್ಷಗಳ ಹಿಂದೆ ಪತಿ ಜೊತೆ ಈ ಮಹಿಳೆ ಡೈವರ್ಸ್ ಪಡೆದುಕೊಂಡಿದ್ದಳು. ಈ ವೇಳೆ ಮಗುವನ್ನ ತಾಯಿಯ ಸುಪರ್ದಿಗೆ ನೀಡಿಬೇಕು ಎಂದು ಕೋರ್ಟ್‌ ಆದೇಶವಿದ್ದು, ಹೀಗಾಗಿ ಪತಿ ಮೊದಲ ಪತಿ ಮೊಹಮದ್ ಅಸಿಮ್ ನಿಕ್ಬಾಲ್ ಆಗಾಗ ಮಗುವನ್ನ ನೋಡಲು ಹೋಗುತ್ತಿದ್ದ. ಅದೇ ರೀತಿ ಕಳೆದ ತಿಂಗಳು ಮಗುವನ್ನ ನೋಡಲು ಹೋಗಿದ್ದ ಸಂದರ್ಭದಲ್ಲಿ. ಮಗುವನ್ನ ತಾಯಿ ಬಳಿಯಿಂದ ಎತ್ತಿಕೊಂಡು ಬಂದಿದ್ದಾನೆ ಎಂದು ಮಹಿಳೆಯಿಂದ ಆರೋಪ.

ಒಂದು ತಿಂಗಳಿಂದ ಮಗುವಿಗಾಗಿ ಹುಡುಕಾಡುತ್ತಿದ್ದ ಮಹಿಳೆ. ಈ‌ ವೇಳೆ‌ ದೇವನಹಳ್ಳಿ ಬಳಿ ಮಗು ಇರುವ ಬಗ್ಗೆ ಮಾಹಿತಿ ಬಂದಿದೆ. ಅದಕ್ಕೊಸ್ಕರ ಮಗುವನ್ನ ಕರೆದುಕೊಂಡು ಹೋಗಲು ಬಂದಿದ್ದಾಳೆ. ಈ ವೇಳೆ ಮೊದಲ ಪತಿ ಮತ್ತು ಮಹಿಳೆ ನಡುವೆ ಗಲಾಟೆ ಶುರುವಾಗಿದೆ. ಗಲಾಟೆಯಿಂದ ಮನನೊಂದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೆ ಆಸ್ವತ್ರೆಗೆ ದಾಖಲಿಸಿದ ಪರಿಣಾಮ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರಿಂದ ದೂರು ದಾಖಲಾಗಿದೆ.

ಇದನ್ನೂ ಓದಿ:ಕೊಲೆಯನ್ನೂ ಮೀರಿಸೋ ರೀತಿಯಲ್ಲಿ ವ್ಯಕ್ತಿ ಸೂಸೈಡ್; ಚಾಕುವಿನಿಂದ ಎರ್ರಾಬಿರ್ರಿ ಇರಿದುಕೊಂಡು ಆತ್ಮಹತ್ಯೆ

ಮೊದಲ ಪತ್ನಿ ವಿರುದ್ದ ಮಾಜಿ ಗಂಡ ಮೊಹಮದ್ ಅಸಿಮ್​ನಿಂದ ಪೊಲೀಸ್​ಗೆ ದೂರು

ಆತ್ಮಹತ್ಯೆಗೆ ಯತ್ನ ಮಾಡಿದ ಮೊದಲ ಪತ್ನಿ ವಿರುದ್ದ ಮಾಜಿ ಗಂಡ ಮೊಹಮದ್ ಅಸಿಮ್ ನಿಂದ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು. ತಾಯಿ ಮನೆಯಲ್ಲಿರುವಾಗ ಏಕಾಏಕಿ ಮನೆಗೆ ನುಗ್ಗಿ ಮೊದಲ ಮೊದಲ ಪತ್ನಿ ಸುಮಯಾ ಭಾನು, ಲಕ್ಷ್ಮೀಕಾಂತ್ ಸೇರಿದಂತೆ ಹಲವರಿಂದ ಹಲ್ಲೆ ಮಾಡಿದ್ದು, ಅಕ್ರಮವಾಗಿ ಮನೆಗೆ ನುಗ್ಗಿ ಮಗು ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ ಎಂದು ಐದು ಜನರ ವಿರುದ್ದ ದೂರು ನೀಡಿದ್ದಾರೆ. ಜೊತೆಗೆ ಮಗುವನ್ನ ಒಪ್ಪಂದದ ಮೂಲಕ ಮೊದಲೇ ನೀಡಿ ಇದೀಗ ಡ್ರಾಮ ಮಾಡ್ತಿರುವುದಾಗಿ ಆರೋಪಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ