ಬೇರೆಯವರ ಪತ್ನಿ ಮೇಲೆ ಕಣ್ಣು ಹಾಕಿದ್ದೂ ಅಲ್ಲದೆ, ಪತಿಗೆ ಪೋಟೋ ಕಳುಹಿಸಿ ತನ್ನ ಸಾವನ್ನು ತಾನೇ ತಂದುಕೊಂಡ ಯುವಕ!
ಏನೇ ಇರಲಿ ಕೊಲೆಯಾದ ಮಹೇಶ್ ಬೇರೆಯವರ ಪತ್ನಿ ಮೇಲೆ ಕಣ್ಣು ಹಾಕಿದ್ದೂ ಅಲ್ಲದೆ, ಆಕೆಯ ಪತಿಗೆ ಪೋಟೋ ಕಳುಹಿಸಿ ತನ್ನ ಸಾವನ್ನು ತಾನೇ ತಂದುಕೊಂಡ ಅಂದರೂ ತಪ್ಪಾಗಲಾರದು.
ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತೇ. ಇದಕ್ಕೆ ಸಾಕ್ಷಿ ಮೈಸೂರಿನಲ್ಲಿ (Mysore) ನಡೆದಿರುವ ಘೋರ ಕೃತ್ಯ. ಪತ್ನಿಯ ಜೊತೆ ಲವ್ವಿ ಡವ್ವಿ ಆಡುತ್ತಿದ್ದವನನ್ನು ಪತಿ ಕೊಚ್ಚಿ ಕೊಂದು ಹಾಕಿದ್ದಾನೆ. ಒಂದು ಕಡೆ ಕಣ್ಣೀರು. ಮತ್ತೊಂದು ಕಡೆ ಆತಂಕ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹೆಡಿಯಾಲ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ ವ್ಯಕ್ತಿಯೊಬ್ಬನ ಬರ್ಬರ ಕೊಲೆ. ಹೌದು ನಂಜನಗೂಡು ತಾಲ್ಲೂಕು ಮಳೆಯೂರು ಗ್ರಾಮದ ಮಹೇಶ್ (youth) ಎಂಬಾತ ಬರ್ಬರವಾಗಿ ಕೊಲೆಯಾಗಿದ್ದಾನೆ. ಅದೇ ಗ್ರಾಮದ ಗಿರೀಶ್, ಮಹೇಶ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಕೊಲೆ ಮಾಡಿದ ನಂತರ ಗಿರೀಶ್ (husband) ತಾನೇ ಹೋಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಗಿರೀಶ್ ಕೊಲೆಗೆ ಕಾರಣ ಗಿರೀಶ್ ಪತ್ನಿ ಜೊತೆಗೆ ಮಹೇಶ್ ಹೊಂದಿದ್ದ ಸಂಬಂಧ (illicit relation).
ಹೌದು ಮಹೇಶ್ ಗಿರೀಶ್ ಪತ್ನಿ ಜೊತೆ ಸಲುಗೆಯಿಂದ ಇದ್ದ. ಮಹೇಶ್ ಗಿರೀಶ್ ಪತ್ನಿಗೆ ಮೆಸೇಜ್ ಮಾಡೋದು ಕಾಲ್ ಮಾಡೋದು ಮಾಡ್ತಾ ಇದ್ದ. ಈ ವಿಚಾರ ಗಿರೀಶ್‌ಗೆ ಗೊತ್ತಾಗಿ ಜಗಳ ಸಹ ಆಗಿತ್ತು. ಜಗಳ ವಿಚ್ಛೇದನದ ಹಂತ ತಲುಪಿತ್ತು. ಹಲವು ತಿಂಗಳಿನಿಂದ ಗಿರೀಶ್ ಹಾಗೂ ಪತ್ನಿ ಬೇರೆಯಾಗಿದ್ರು. ಆದ್ರೆ ಗಿರೀಶ್ ಪತ್ನಿ, ಮಹೇಶ್ ಜೊತೆಗಿನ ಸಂಬಂಧ ಮುಂದುವರಿಸಿದ್ದಳು. ಈ ಮಧ್ಯೆ ಸ್ವತಃ ಮಹೇಶ, ಗಿರೀಶ್ ಪತ್ನಿ ಜೊತೆಗಿದ್ದ ಪೋಟೋವನ್ನು ಗಿರೀಶ್‌ಗೆ ಕಳುಹಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಗಿರೀಶ, ಮಹೇಶ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿ ಗಿರೀಶ್ ನೇರವಾಗಿ ಹುಲ್ಲಹಳ್ಳಿ ಪೊಲೀಶ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆರೋಪಿ ಗಿರೀಶ್‌ನನ್ನು ಬಂಧಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಇದೆಲ್ಲಾ ಏನೇ ಇರಲಿ ಕೊಲೆಯಾದ ಮಹೇಶ್ ಬೇರೆಯವರ ಪತ್ನಿ ಮೇಲೆ ಕಣ್ಣು ಹಾಕಿದ್ದೂ ಅಲ್ಲದೆ, ಆಕೆಯ ಪತಿಗೆ ಪೋಟೋ ಕಳುಹಿಸಿ ತನ್ನ ಸಾವನ್ನು ತಾನೇ ತಂದುಕೊಂಡ ಅಂದರೂ ತಪ್ಪಾಗಲಾರದು.
ವರದಿ: ರಾಮ್, ಟಿವಿ9, ಮೈಸೂರು