ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ವಿವಾಹಿತ ಪುರುಷನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾನೆ (Extramarital Affair) ಎಂಬ ಶಂಕೆಯಿಂದ ಆತನ ಪತ್ನಿ ಮತ್ತು ಅತ್ತೆ ಸೇರಿ ದೊಡ್ಡ ಗಲಾಟೆ ಮಾಡಿದ್ದಾರೆ. ನಂತರ ಅವರಿಬ್ಬರ ತಲೆಯನ್ನು ಅರ್ಧ ಬೋಳಿಸಿ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತಿ 30 ವರ್ಷದ ಹುಸೇನ್ ಹಸ್ನಾಬಾದ್‌ನ 32 ವರ್ಷದ ಮಹಿಳೆ ಶಬಾನಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹುಸೇನ್ನ ಹೆಂಡತಿ ನಾಜಿಯಾ ಆರೋಪಿಸಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ನಾಜಿಯಾ ಮತ್ತು ಆಕೆಯ ಕುಟುಂಬಸ್ಥರು ಹುಸೇನ್ ಮತ್ತು ಶಬಾನಾಳ ಕೈ ಕಟ್ಟಿ, ಅವರ ತಲೆಯನ್ನು ಸ್ವಲ್ಪ ಬೋಳಿಸಿ, ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
ಇದನ್ನೂ ಓದಿ: Bengaluru News: ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನ ಕೊಂದು ಅತ್ತೆಗೆ ಕರೆ ಮಾಡಿದ
ಅವರನ್ನು ಕೈಗಳನ್ನು ಕಟ್ಟಿಹಾಕಿ ಆಟೋ ರಿಕ್ಷಾದಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಾಗ ಹುಸೇನ್ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.
ಹುಸೇನ್ ಶಬಾನಾ ಜೊತೆ ವಿವಾಹೇತರ ಸಂಬಂಧ ಹೊಂದಿದ್ದು, ಈ ಕಾರಣಕ್ಕಾಗಿ ಹುಸೇನ್ನ ಪತ್ನಿ ತನ್ನ ಗಂಡನ ಜೊತೆ ಸಂಬಂಧ ಹೊಂದಿದ್ದ ಶಬಾನಾಳ ಮನೆಗೆ ತೆರಳಿ ಅವರಿಬ್ಬರನ್ನೂ ಥಳಿಸಿ ಮೆರವಣಿಗೆ ನಡೆಸಿದ್ದಾಳೆ ಎಂದು ಹಿಂದೂಪುರ ಉಪವಿಭಾಗದ ಪೊಲೀಸ್ ಅಧಿಕಾರಿ ಪಿ. ಕಾಂಜಾಕ್ಷನ್ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಮನೆಯೊಳಗೇ ಕರು ಸಾಕುತ್ತಿರುವ ಫಾರಿನ್ ಪುಟ್ಟಿಯ ವಿಡಿಯೋ ವೈರಲ್
ಹುಸೇನ್ ಮತ್ತು ಶಬಾನಾ ಅವರನ್ನು ಥಳಿಸುತ್ತಿರುವ ವೀಡಿಯೊವನ್ನು ನಾಜಿಯಾ ಅವರ ಕುಟುಂಬ ಸದಸ್ಯರು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಬಾನಾಗೆ ಕೂಡ ಈ ಹಿಂದೆ ಮದುವೆಯಾಗಿದ್ದು, 2 ವರ್ಷಗಳಿಂದ ಗಂಡನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.