ರಸ್ತೆ ಗುಂಡಿಯಲ್ಲಿ ಬಿದ್ದು ಬೈಕ್ ಓಡಿಸುತ್ತಿದ್ದ ಬಿಜೆಪಿ ಮುಖಂಡ ಸಾವು
ಈ ರಸ್ತೆಯಲ್ಲಿ ಕಾಮಗಾರಿ ಪ್ರಾರಂಭ ಆದಾಗಿಂದ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಮಾಹಿತಿ ಲಭ್ಯವಾಗಿದೆ.
ಆನೇಕಲ್: ಬೈಕ್ ಓಡಿಸುವಾಗ ರಸ್ತೆ ಕಾಮಗಾರಿಗೆಂದು ತೋಡಿದ್ದ ಗುಂಡಿಯಲ್ಲಿ ಬಿದ್ದು ಬಿಜೆಪಿ ಮುಖಂಡ ಸಬ್‌ಮಂಗಲ ನಿವಾಸಿ ಮಾದೇಶ್(50) ಸಾವನ್ನಪ್ಪಿದ್ದಾರೆ. ಆನೇಕಲ್‌ನ ಹೊಸೂರು ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದ್ದು, ಗುತ್ತಿಗೆದಾರ ರಸ್ತೆ ಕಾಮಗಾರಿಗೆ ಹೊಂಡ ತೋಡಿದ್ದರು. ಆದರೆ ಕೆಲಸ ಪೂರ್ಣಗೊಳಿಸದೆ ಗುಂಡಿಯನ್ನು ಹಾಗೆಯೇ ಬಿಟ್ಟುಹೋಗಿದ್ದರು ಎನ್ನಲಾಗಿದೆ. ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಧರಣಿ ನಡೆಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ದಿನೇಶ್ ಭೇಟಿ ನೀಡಿ ಧರಣಿ ನಡೆಸುತ್ತಿದ್ದವರ ಮನವೊಲಿಕೆಗೆ ಯತ್ನಿಸಿದ್ದಾರೆ.
ಈ ರಸ್ತೆಯಲ್ಲಿ ಕಾಮಗಾರಿ ಪ್ರಾರಂಭ ಆದಾಗಿಂದ 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಮಾಹಿತಿ ಲಭ್ಯವಾಗಿದೆ. ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗುತ್ತಿಗೆದಾರರು ಸ್ಥಳಕ್ಕೆ ಆಗಮಿಸಬೇಕೆಂದು ಸಹ ಧರಣಿ ನಿರತರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ಸರ್ಕಾರದ ಮತ್ತೊಂದು ಕಂಪನಿ ಷೇರುಪೇಟೆಗೆ: ಐಪಿಒ ಬಿಡುಗಡೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಮೈಲಿಗಲ್ಲು ಸಾಧನೆ ಸನಿಹದಲ್ಲಿ ಭಾರತ: ದೇಶದಲ್ಲಿ ಕೊವಿಡ್ ವಿರುದ್ಧ ಸಂಪೂರ್ಣ ಲಸಿಕೆ ಪಡೆದವರು ಸುಮಾರು ಶೇ 25