ಮನೆ ಮುಂದೆ ಆಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಹರಿದ ಕಾರು; ಬಾಲಕ ದುರ್ಮರಣ

ಮಗು ಮೇಲೆ ಕಾರು ಹರಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮನೆ ಮುಂದೆ ಆಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಹರಿದ ಕಾರು; ಬಾಲಕ ದುರ್ಮರಣ
ಗೀತಿಕ್
Follow us
TV9 Web
| Updated By: guruganesh bhat

Updated on: Sep 29, 2021 | 8:59 PM

ಚಿಕ್ಕಬಳ್ಳಾಪುರ: ಮನೆ ಮುಂದೆ ಆಟವಾಡುತ್ತಿದ್ದ 4 ವರ್ಷದ ಬಾಲಕನ ಮೇಲೆ ಕಾರು ಹರಿದು ಬಾಲಕ ಮೃತಪಟ್ಟ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಟ್ಯಾಂಕ್​ಬಂಡ್ ರಸ್ತೆ ಬಳಿ ಜರುಗಿದೆ. ಗೀತಿಕ್. ವೆಂಕಟೇಶ್ವರಲು, ಮೋನಿಕಾ ದಂಪತಿ ಪುತ್ರ ಗೀತಿಕ್ (4) ಮೃತಪಟ್ಟ ದುರ್ದೈವಿ ಬಾಲಕ. ಮಗು ಮೇಲೆ ಕಾರು ಹರಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಸೇರಿಸಿ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ. ಚಿಂತಾಮಣಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರು ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಕಲಬುರಗಿ: ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುಗುಳನಾಗಾಂವ ಗ್ರಾಮದ ಕೂಲಿಕಾರ್ಮಿಕ ದಂಪತಿಯ ಪುತ್ರ ಮೃತಪಟ್ಟಿದ್ದಾನೆ. ಸಿದ್ದು (7) ಸಾವನ್ನಪ್ಪಿದ ಬಾಲಕ. ಕಲಬುರಗಿಯ ಎನ್ಜಿಒ ಕಾಲೋನಿ ಗಾರ್ಡನ್ನಲ್ಲಿ ಘಟನೆ ನಡೆದಿದೆ. ದಂಪತಿ ಕೂಲಿ ಕೆಲಸಕ್ಕೆ ಬಂದು ಎನ್ಜಿಒ ಕಾಲೋನಿಯಲ್ಲಿ ನೆಲೆಸಿದ್ದರು. ಬಾಲಕನ ದುರಂತ ಸಾವನ್ನು ಕಣ್ಣಾರೆ ಕಂಡು ಜನರು ಮಮ್ಮಲ ಮರುಗಿದ್ದಾರೆ. ಎಂ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: 

Umesh Reddy Profile: ಯಾರೀತ ಉಮೇಶ್ ರೆಡ್ಡಿ? ಈತನ ಹೆಸರು ಕೇಳಿದರೆ ಜನರೇಕೆ ಭಯ ಪಡುತ್ತಿದ್ದರು?

ಕುಪ್ಪೂರು ಶ್ರೀಗಳು ಕೊವಿಡ್​ನಿಂದ ಮೃತಪಟ್ಟ ವಿಚಾರ: ತಮ್ಮ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ ವೈದ್ಯರು