ಕುಪ್ಪೂರು ಶ್ರೀಗಳು ಕೊವಿಡ್ನಿಂದ ಮೃತಪಟ್ಟ ವಿಚಾರ: ತಮ್ಮ ತಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ ವೈದ್ಯರು
ಕೊರೊನಾ ಲಕ್ಷಣವಿದ್ದರೂ ಪರೀಕ್ಷೆ ನಡೆಸದೆ ಚಿಕಿತ್ಸೆ ಹಿನ್ನೆಲೆ ತುಮಕೂರು ಡಿಹೆಚ್ಒ ಡಾ. ನಾಗೇಂದ್ರಪ್ಪ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ನೋಟಿಸ್ ನೀಡಿದ್ದರು. ಹೀಗಾಗಿ ಡಾ. ವಿಜಯ ರಾಘವೇಂದ್ರ ಪ್ರತಿಕ್ರಿಯೆ ನೀಡಿ, ಸ್ಪಷ್ಟನೆ ಕೊಟ್ಟಿದ್ದಾರೆ.
ತುಮಕೂರು: ಕುಪ್ಪೂರು ಶ್ರೀಗಳು ಕೊವಿಡ್ನಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಸ್ವಾಮೀಜಿ ಸಾವಿಗೆ ಸಾಯಿಗಂಗಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು, ವೈದ್ಯ ಡಾ. ವಿಜಯ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾಮೀಜಿ ಸಹೋದರ ವಾಗೀಶ್ಗೆ ನಾವು ಕೋವಿಡ್ ಬಗ್ಗೆ ಹೇಳಿದ್ದೀವಿ. ಸ್ವಾಮೀಜಿಗಳಿಗೆ ಕೊವಿಡ್ ಇದೆ ಆರ್ಟಿಪಿಸಿಆರ್ ಟೆಸ್ಟ್ ಮಾಡಲು ಹೇಳಿದ್ವಿ. ಆದರೆ ಸ್ವಾಮೀಜಿ ನನಗೆ ಏನೂ ಆಗುತ್ತಿಲ್ಲ, ಸುಸ್ತು ಕಡಿಮೆ ಆಗಿದೆ ಎಂದಿದ್ರು. ಬೇರೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ ಅಂದಿದ್ವಿ. ಆದರೂ ಸ್ವಾಮೀಜಿಗಳು ಹಾಗೂ ಅವರ ಸಂಬಂಧಿಕರು ಕೇಳಿಲ್ಲ. ಎಷ್ಟು ಹೇಳಿದರೂ ಅವರು ಕೇಳಿಲ್ಲ. ನಾವು ಬಲವಂತವಾಗಿ ಹೊರಗೆ ಹಾಕೋಕೆ ಆಗುತ್ತಾ? ಎಂದು ಡಾ. ವಿಜಯ ರಾಘವೇಂದ್ರ ಪ್ರಶ್ನಿಸಿದ್ದಾರೆ. ತಮ್ಮದೇನು ತಪ್ಪಿಲ್ಲ ಎಂದು ಡಾ. ವಿಜಯ ರಾಘವೇಂದ್ರ ಸಮರ್ಥಿಸಿಕೊಂಡಿದ್ದಾರೆ.
ಕುಪ್ಪೂರು ಸ್ವಾಮೀಜಿಗೆ ನಾನು ಯಾವುದೇ ಚಿಕಿತ್ಸೆ ಕೊಟ್ಟಿಲ್ಲ ಎಂದೂ ಟಿವಿ9ಗೆ ಡಾ. ವಿಜಯ ರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ. ಸ್ವಾಮೀಜಿ ನನಗೆ ಮಾತ್ರೆಗಳ ಬಗ್ಗೆ ವಾಟ್ಸಾಪ್ ಮಾಡಿದ್ದರು. ವಾಟ್ಸಪ್ ಮಾಡಿದ್ದ ಮಾತ್ರೆಗಳನ್ನ ನಾನು ಕೊಟ್ಟಿದ್ದೇನೆ. ಆಸ್ಪತ್ರೆಗೆ ಬರುವ 4 ದಿನ ಮುಂಚೆ ನನಗೆ ವಾಟ್ಸಾಪ್ ಮಾಡಿದ್ರು. ಸೆ.23 ರಂದು ಆಸ್ಪತ್ರೆಗೆ ಬಂದಿದ್ದಾಗ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದೆ. ಕೊವಿಡ್ ಲಕ್ಷಣ ಕಂಡು ಬಂದ ಹಿನ್ನೆಲೆ ಸಲಹೆ ನೀಡಿದ್ದೆ. ತುಮಕೂರು ಅಥವಾ ಬೆಂಗಳೂರಿಗೆ ತೆರಳಲು ಸಲಹೆ ನೀಡಿದ್ದೆ ಎಂದು ಸಾಯಿಗಂಗಾ ಆಸ್ಪತ್ರೆಯ ವೈದ್ಯ ಡಾ. ವಿಜಯ್ ರಾಘವೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.
ಕೊರೊನಾ ಲಕ್ಷಣವಿದ್ದರೂ ಪರೀಕ್ಷೆ ನಡೆಸದೆ ಚಿಕಿತ್ಸೆ ಹಿನ್ನೆಲೆ ತುಮಕೂರು ಡಿಹೆಚ್ಒ ಡಾ. ನಾಗೇಂದ್ರಪ್ಪ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ನೋಟಿಸ್ ನೀಡಿದ್ದರು. ವೈದ್ಯ ಡಾ.ವಿಜಯ ರಾಘವೇಂದ್ರಗೆ DHO ನೋಟಿಸ್ ನೀಡಿದ್ರು. ಹೀಗಾಗಿ ಡಾ. ವಿಜಯ ರಾಘವೇಂದ್ರ ಪ್ರತಿಕ್ರಿಯೆ ನೀಡಿ, ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ನೋಟಿಸ್
ಇದನ್ನೂ ಓದಿ: ಕುಪ್ಪೂರು ಗದ್ದುಗೆ ಮಠದ ಮುಂದಿನ ಉತ್ತರಾಧಿಕಾರಿಯಾಗಿ 8ನೇ ತರಗತಿ ಓದುತ್ತಿರುವ ತೇಜಸ್ ಹೆಸರು ಘೋಷಣೆ
Published On - 5:18 pm, Wed, 29 September 21