ಮನೆ ಮಾರುವುದು ಬೇಡ ಎಂದ ಪತ್ನಿಗೆ ರಸ್ತೆಯಲ್ಲೇ 18 ಬಾರಿ ರಾಡ್​ನಲ್ಲಿ ಹೊಡೆದು ಕೊಂದ ಗಂಡ!

|

Updated on: Dec 10, 2024 | 8:30 PM

ಉತ್ತರ ಪ್ರದೇಶದ ಆಗ್ರಾದಲ್ಲಿ ಕುಟುಂಬದ ಮನೆಯನ್ನು ಮಾರಾಟ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪತ್ನಿಯನ್ನು 11 ಸೆಕೆಂಡ್‌ಗಳಲ್ಲಿ 18 ಬಾರಿ ಕಬ್ಬಿಣದ ರಾಡ್‌ನಿಂದ ಹೊಡೆದು ಗಂಡನೊಬ್ಬ ಕೊಂದಿರುವ ಭಯಾನಕ ಘಟನೆ ನಡೆದಿದೆ. ಮನೆಯ ಹೊರಗೆ ಓಡಿಬಂದ ಹೆಂಡತಿಯನ್ನು ಅಟ್ಟಾಡಿಸಿಕೊಂಡು ಬಂದ ಗಂಡ ಜನರೆದುರೇ ಆಕೆಯನ್ನು ಹೊಡೆದು ಸಾಯಿಸಿದ್ದಾನೆ.

ಮನೆ ಮಾರುವುದು ಬೇಡ ಎಂದ ಪತ್ನಿಗೆ ರಸ್ತೆಯಲ್ಲೇ 18 ಬಾರಿ ರಾಡ್​ನಲ್ಲಿ ಹೊಡೆದು ಕೊಂದ ಗಂಡ!
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ತಮ್ಮ ಕುಟುಂಬಕ್ಕೆ ಸೇರಿದ ಹಳೆಯ ಆಸ್ತಿಯನ್ನು ಮಾರಾಟ ಮಾಡುವುದು ಬೇಡ ಎಂದ ಹೆಂಡತಿಯ ಮೇಲೆ ಕೋಪಗೊಂಡ ಗಂಡ ಆಕೆಯನ್ನು ಮನೆಯಿಂದ ಹೊರಗೆ ಓಡಿಸಿಕೊಂಡು ಬಂದು ಕೊಲೆ ಮಾಡಿದ್ದಾನೆ. ಉತ್ತರ ಪ್ರದೇಶದ ಆಗ್ರಾದ ಶಂಭು ನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ರಮಾ ದೇವಿ ಎಂಬ ಮಹಿಳೆಯನ್ನು ಆಕೆಯ ಪತಿ ಮತ್ತು ಮಗ ಕೊಲೆ ಮಾಡಿದ್ದಾರೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬರುವಂತೆ, ಪತಿ ಕೇವಲ 18 ಸೆಕೆಂಡುಗಳಲ್ಲಿ 11 ಬಾರಿ ಹೆಂಡತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಇಷ್ಟಾದರೂ ನೆರೆಹೊರೆಯವರು ಪ್ರೇಕ್ಷಕರಂತೆ ನಿಂತು ನೋಡುತ್ತಿದ್ದರೇ ವಿನಃ ಆ ಮಹಿಳೆಯನ್ನು ರಕ್ಷಿಸಲು ಬರಲಿಲ್ಲ.

ಇದನ್ನೂ ಓದಿ: ಎದೆಗೂಡಿನ 17 ಮೂಳೆ ಮುರಿದಿವೆ; ಕೊಲೆ ಎನ್ನಲು ಹಲವು ಸಾಕ್ಷ್ಯಗಳಿವೆ: ಎಸ್​ಪಿಪಿ ವಾದ

ರಮಾ ದೇವಿಯವರ ಪತಿ ದಧಿಚ್ ಇತ್ತೀಚೆಗೆ ತಮ್ಮ ಕುಟುಂಬದ ಮನೆಯನ್ನು ಮಾರಾಟ ಮಾಡುವಂತೆ ರಮಾ ದೇವಿ ಮೇಲೆ ಒತ್ತಡ ಹೇರುತ್ತಿದ್ದು, ಇದಕ್ಕೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಭಿನ್ನಾಭಿಪ್ರಾಯವು ನಾಲ್ಕು ತಿಂಗಳ ಹಿಂದೆ ಹಿಂದಿನ ಜಗಳಕ್ಕೆ ಕಾರಣವಾಯಿತು. ರಮಾ ದೇವಿಯು ಮನೆಯನ್ನು ತೊರೆದು ತನ್ನ ಮಗ ಕೌಶಲ್ ಮತ್ತು ಸೊಸೆ ಮಧು ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.


ಇದನ್ನೂ ಓದಿ: ಹೆಂಡತಿ ಕಾಟದಿಂದ ಬೆಂಗಳೂರಿನ ಇಂಜಿನಿಯರ್ ಆತ್ಮಹತ್ಯೆ; ಟ್ವಿಟ್ಟರ್​ನಲ್ಲಿ ಟ್ರೆಂಡ್ ಆಯ್ತು ಮೆನ್​ಟೂ ಹ್ಯಾಶ್​ಟ್ಯಾಗ್

ಶನಿವಾರ, ರಮಾ ತನ್ನ ಮಗ, ಸೊಸೆಯೊಂದಿಗೆ ಮನೆಗೆ ಮರಳಿದರು. ಅದರ ನಂತರ ಪತಿಯೊಂದಿಗೆ ಮತ್ತೊಮ್ಮೆ ವಾದವು ನಡೆಯಿತು. ಭಾನುವಾರ ಬೆಳಗ್ಗೆ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದ್ದು, ರಮಾ ಅವರ ಪತಿ ಆಕೆಯ ಮೇಲೆ ಕಬ್ಬಿಣದ ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಮನೆಯಿಂದ ರಸ್ತೆಗೆ ಓಡಿಬಂದ ಆಕೆ ಹತ್ತಿರದ ಚರಂಡಿಗೆ ಬಿದ್ದ ನಂತರವೂ ಅವಳನ್ನು ಮನಬಂದಂತೆ ಥಳಿಸಲಾಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಕೆ ಸತ್ತು ಹೋಗಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಗಂಡ ಅಲ್ಲಿಂದ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ