AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2024: ಈ ವರ್ಷ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸೈಕೋ ಕಿಲ್ಲರ್ಸ್​ಗಳಿವರು

2025 ಅನ್ನು ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಈ ವರ್ಷ ನಡೆದಿದ್ದೆಲ್ಲಾ ಕಹಿಗಳನ್ನು ಮರೆತು ಮುಂಬರುವ ವರ್ಷಗಳೆಲ್ಲಾ ಸಿಹಿಯನ್ನೇ ತರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ 2024ರಲ್ಲಿ ಒಳ್ಳೆಯ ಘಟನೆಗಳ ಜತೆಗೆ ಕೆಟ್ಟ ಘಟನೆಗಳೂ ಕೂಡ ನಡೆದಿವೆ. ಅದರಲ್ಲೂ ಸೈಕೋ ಕಿಲ್ಲರ್​ಗಳು ನಡೆಸಿರುವ ಕೃತ್ಯಗಳು ಮನಸ್ಸಿಂದ ಮಾಸುವುದು ತುಂಬಾ ಕಷ್ಟ. ಮೈಂಡ್‌ಫುಲ್ ಎಐ ಲ್ಯಾಬ್‌ನ ಸಂಸ್ಥಾಪಕಿ ಮತ್ತು ಸಿಇಒ, 39 ವರ್ಷದ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮುಗ್ಧ ಮಗನನ್ನು ಕೊಲೆ ಮಾಡಿದ್ದಳು.

Year Ender 2024: ಈ ವರ್ಷ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಸೈಕೋ ಕಿಲ್ಲರ್ಸ್​ಗಳಿವರು
ಕೊಲೆ
ನಯನಾ ರಾಜೀವ್
|

Updated on:Dec 11, 2024 | 2:27 PM

Share

2025 ಅನ್ನು ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಈ ವರ್ಷ ನಡೆದಿದ್ದೆಲ್ಲಾ ಕಹಿಗಳನ್ನು ಮರೆತು ಮುಂಬರುವ ವರ್ಷಗಳೆಲ್ಲಾ ಸಿಹಿಯನ್ನೇ ತರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ 2024ರಲ್ಲಿ ಒಳ್ಳೆಯ ಘಟನೆಗಳ ಜತೆಗೆ ಕೆಟ್ಟ ಘಟನೆಗಳೂ ಕೂಡ ನಡೆದಿವೆ. ಅದರಲ್ಲೂ ಸೈಕೋ ಕಿಲ್ಲರ್​ಗಳು ನಡೆಸಿರುವ ಕೃತ್ಯಗಳು ಮನಸ್ಸಿಂದ ಮಾಸುವುದು ತುಂಬಾ ಕಷ್ಟ.

ಗೋವಾದಲ್ಲಿ ಸ್ವಂತ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ತಾಯಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಂಸ್ಥಾಪಕಿ ಮತ್ತು ಸಿಇಒ, 39 ವರ್ಷದ ಸುಚನಾ ಸೇಠ್ ತನ್ನ ನಾಲ್ಕು ವರ್ಷದ ಮುಗ್ಧ ಮಗನನ್ನು ಕೊಲೆ ಮಾಡಿದ್ದಳು. ಮೊದಲು ಬೆಂಗಳೂರಿನಿಂದ ಗೋವಾಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದಳು. ನಂತರ ಜನವರಿ 6 ರಂದು ರಾತ್ರಿ ಮಗುವನ್ನು ಹೋಟೆಲ್ ಕೊಠಡಿಯಲ್ಲಿ ಕೊಲೆ ಮಾಡಲಾಗಿತ್ತು. ಇದಾದ ನಂತರ ಶವವನ್ನು ವಿಲೇವಾರಿ ಮಾಡಲು ಸೂಟ್‌ಕೇಸ್‌ನಲ್ಲಿಟ್ಟು ಬೆಂಗಳೂರಿಗೆ ವಾಪಸ್ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಡ್ರೈವರ್​ನಿಂದಾಗಿ ಆಕೆ ಸಿಕ್ಕಿಬಿದ್ದಿದ್ದಳು. ಪತಿ ತನ್ನ ಮಗನನ್ನು ವಾರಕ್ಕೊಮ್ಮೆ ಭೇಟಿಯಾಗಬಹುದು ಎಂದು ನ್ಯಾಯಾಲಯ ಆದೇಶಿಸಿತ್ತು, ಆದರೆ ಸುಚನಾಗೆ ಇದು ಇಷ್ಟವಾಗಲಿಲ್ಲ ಪತಿಯ ಮೇಲಿನ ಕೋಪದಿಂದ ಮಗುವನ್ನೇ ಕೊಂದಿದ್ದಳು. ಸದ್ಯ ಸೂಚನಾ ಸೇಠ್ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

ಸಂಜಯ್​ ದತ್ ಅಭಿಮಾನಿ ಸೈಕೋ ಕಿಲ್ಲರ್ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ಸಂಜಯ್ ದತ್ ಅಭಿಮಾನಿ ಎಂದು ಹೇಳಿಕೊಳ್ಳುವ ಅದ್ನಾನ್ ಅಲಿಯಾಸ್ ಬಲ್ಲು ಮದುವೆಯಾಗಿದ್ದರೂ ಬೇರೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಮಹಿಳೆಗೂ ವಿವಾಹವಾಗಿತ್ತು, ಆದರೆ ಅಷ್ಟರಲ್ಲಿ ತನ್ನ ಗೆಳತಿ ಕೂಡ ಬೇರೆ ಗಂಡಸರ ಜೊತೆ ಮಾತನಾಡುತ್ತಾಳೆ ಎಂದು ತಿಳಿದು ಕಂಗಾಲಾಗಿದ್ದ, ತನ್ನ ಗೆಳತಿಯನ್ನು ಸ್ಮಶಾನದಲ್ಲಿ ಭೇಟಿಯಾಗಲು ಕರೆದಿದ್ದ, ನಂತರ ಆಕೆಯನ್ನು ಇಲ್ಲಿಯೇ ಕೊಲೆ ಮಾಡಿದ್ದ, ಪೊಲೀಸರು ತನಿಖೆ ನಡೆಸಿದಾಗ ಸರಿಯಾಗಿ ಉತ್ತರಿಸಲಿಲ್ಲ, ಬಳಿಕ ಪೊಲೀಸರಿಗೆ ಅನುಮಾನ ಬಂದು ಸರಿಯಾಗಿ ವಿಚಾರಿಸಿದಾಗ ಒಪ್ಪಿಕೊಂಡಿದ್ದ, ಪೊಲೀಸರ ಬಳಿ ನಾನು ಸಂಜಯ್ ದತ್ ಅವರ ಅಭಿಮಾನಿ. ನನಗೆ ಮೋಸ ಇಷ್ಟವಿಲ್ಲ ಎಂದಿದ್ದ.

11 ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿದ್ದ ಹಂತಕ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಘಟನೆ ಇದು, 11 ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಹಿಡಿದಿದ್ದರು. ಆರೋಪಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆ ಮಾಡುತ್ತಿದ್ದ. ಮಹಿಳಾ ಆಭರಣಗಳಲ್ಲಿ ಒಂದನ್ನು ನೆನಪಿಗಾಗಿ ತೆಗೆದುಕೊಂಡು ಹೋಗುತ್ತಿದ್ದ. ಬರೇಲಿ ಪೊಲೀಸರ ಪ್ರಕಾರ ಆರೋಪಿಯ ಹೆಸರು ಕುಲದೀಪ್ ಗಂಗ್ವಾರ್. ಆತ ಬರೇಲಿಯ ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಕರ್‌ಗಂಜ್ ಸಮುವಾ ಗ್ರಾಮದ ನಿವಾಸಿ. ಆತನ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಕುಲದೀಪ್ ಭಾನ್‌ಪುರ ಗ್ರಾಮದ ನಿವಾಸಿ ಲಾಂಗ್‌ಶ್ರೀ ಅವರನ್ನು ವಿವಾಹವಾಗಿದ್ದರು. ಆಕೆ ಬೇರೊಬ್ಬರೊಂದಿಗೆ ಹೋದಾಗ ಆತನ ಮಾನಸಿಕ ಸ್ಥಿತಿ ಹದಗೆಟ್ಟಿತ್ತು.

ಆರ್​ಜಿ ಕರ್ ಆಸ್ಪತ್ರೆ ಮಹಿಳಾ ವೈದ್ಯೆ ಕೊಲೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್​ಜಿ ಕರ್ ಕಾಲೇಜು, ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯನ್ನು ಕೊಲೆ ಮಾಡಲಾಗಿತ್ತು. ಆಗಸ್ಟ್ 10ರಂದು ಸಂಜಯ್ ರಾಯ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಅದಕ್ಕೂ ಒಂದು ದಿನ ಮೊದಲು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆರ್‌ಜಿ ಕರ್ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಆತ ಈಗಾಗಲೇ 5 ಮದುವೆಯಾಗಿದ್ದ, ಆದರೆ ಯಾವುದೇ ಹೆಚ್ಚು ಸಮಯಗಳ ಕಾಲ ಉಳಿಯಲಿಲ್ಲ. ಎಲ್ಲ ಪತ್ನಿಯರಿಗೂ ಚಿತ್ರಹಿಂಸೆ ನೀಡುತ್ತಿದ್ದ ಎಂಬುದು ಆರೋಪ. ಆದ್ದರಿಂದಲೇ ಯಾವ ಹೆಂಡತಿಯೂ ಅವನೊಂದಿಗೆ ಬಾಳಲು ಬಯಸಲಿಲ್ಲ. ಆತ ಅಪರಾಧ ಪ್ರವೃತ್ತಿ ಹೊಂದಿರುವ ವ್ಯಕ್ತಿ. ಸದ್ಯ ಕೋಲ್ಕತ್ತಾದಲ್ಲಿ ವೈದ್ಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಕರ್ನಾಟಕ ಪ್ರಕರಣ ಸೆ.2ರಂದು ಇಲ್ಲಿ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಹಾಲಕ್ಷ್ಮಿಗೆ ಆಗಲೇ ಮದುವೆಯಾಗಿತ್ತು. ಅವರಿಗೆ ಒಬ್ಬ ಮಗಳೂ ಇದ್ದಾಳೆ. ಆದರೆ ಆಕೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ನಂತರ ಮಹಾಲಕ್ಷ್ಮಿಗೆ ಬಾಯ್ ಫ್ರೆಂಡ್ ಸಿಕ್ಕಿದ್ದಾನೆ. ಒಡಿಶಾ ನಿವಾಸಿಯಾಗಿದ್ದ ರಂಜನ್ ರಾಯ್ ಹೆಸರು. ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ್ದು ಮುಕ್ತಿ ರಂಜನ್ ರಾಯ್. ನಂತರ ಶವವನ್ನು 59 ತುಂಡು ಮಾಡಿ ಫ್ರಿಡ್ಜ್ ನಲ್ಲಿಟ್ಟು ಓಡಿ ಹೋಗಿದ್ದಾನೆ. ಕೆಲ ದಿನಗಳ ನಂತರ ಫ್ಲಾಟ್‌ನಿಂದ ದುರ್ವಾಸನೆ ಬರಲಾರಂಭಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ರಂಜನ್ ರಾಯ್ ಅವರನ್ನು ಬಂಧಿಸಲು ಪೊಲೀಸರು ಒಡಿಶಾ ತಲುಪಿದಾಗ ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಅವರು ಆತ್ಮಹತ್ಯೆ ಪತ್ರವನ್ನೂ ಬರೆದಿದ್ದಾರೆ, ಅದರಲ್ಲಿ ಮಹಾಲಕ್ಷ್ಮಿ ನನಗೆ ಚಿತ್ರಹಿಂಸೆ ನೀಡುತ್ತಿದ್ದರು. ಅದಕ್ಕಾಗಿಯೇ ಕೊಲೆ ಮಾಡಿರುವುದಾಗಿ ಹೇಳಿದ್ದ.

ಗುಜರಾತ್ ಪ್ರಕರಣ ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟಿದ ಅಂತಹ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆತನ ಮಕ್ಕಳಿಂದ ಹಿಡಿದು ಮಹಿಳೆಯರ ವರೆಗೆ ಯಾರನ್ನೂ ಬಿಟ್ಟಿರಲಿಲ್ಲ. ಬಾಲಕಿಯೊಬ್ಬಳನ್ನು ಕೊಲೆ ಮಾಡಿ ನಂತರ ಆಕೆಯ ಶವದ ಮೇಲೆ ಗಂಟೆಗಳ ಕಾಲ ಅತ್ಯಾಚಾರವೆಸಗಿದ್ದ. ಆತ 5 ರಾಜ್ಯಗಳಲ್ಲಿ ಅಪರಾಧಗಳನ್ನು ಮಾಡಿದ್ದ, ಹಂತಕ ರಾಹುಲ್ ಸಿಂಗ್ ಜಾಟ್ (29) ಹರ್ಯಾಣದ ರೋಹ್ಟಕ್ ನಿವಾಸಿಯಾಗಿದ್ದು, ಅಂಗವಿಕಲ ಎಂದು ಪೊಲೀಸರು ತಿಳಿಸಿದ್ದಾರೆ. ವಾಸ್ತವವಾಗಿ, ಗುಜರಾತ್‌ನ ವಲ್ಸಾದ್‌ನಲ್ಲಿ, 19 ವರ್ಷದ ಹುಡುಗಿಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ.

ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ರೈಲಿನಲ್ಲಿ ಕೊಲೆ ಮಾಡಿದ್ದೇನೆ ಮತ್ತು ರೈಲಿನಲ್ಲಿ ಅತ್ಯಾಚಾರ ಎಸಗಿದ್ದೇನೆ ಎಂದು ಹಂತಕ ಪೊಲೀಸರಿಗೆ ತಿಳಿಸಿದ್ದಾನೆ. ಇಷ್ಟು ಮಾತ್ರವಲ್ಲದೆ, ಆತನ ಬಂಧನಕ್ಕೆ ಕೇವಲ ಎರಡು ದಿನಗಳ ಮೊದಲು ತೆಲಂಗಾಣದಲ್ಲಿ ಮಹಿಳೆಯನ್ನು ಕೊಂದಿದ್ದ. 11 ದಿನಗಳಲ್ಲಿ ಒಟ್ಟು 5 ಕೊಲೆಗಳನ್ನು ಮಾಡಿದ್ದಾನೆ. ಸದ್ಯ ಆತ ಜೈಲಿನಲ್ಲಿದ್ದಾನೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:26 pm, Wed, 11 December 24

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು