AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎದೆಗೂಡಿನ 17 ಮೂಳೆ ಮುರಿದಿವೆ; ಕೊಲೆ ಎನ್ನಲು ಹಲವು ಸಾಕ್ಷ್ಯಗಳಿವೆ: ಎಸ್​ಪಿಪಿ ವಾದ

ಈ ಮೊದಲು ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಾದ ಮಾಡಿದ್ದ ಸಿ.ವಿ. ನಾಗೇಶ್ ಅವರು ಪೊಲೀಸರ ತನಿಖೆಯಲ್ಲೇ ಲೋಪ ಇದೆ ಎಂದು ವಾದಿಸಿದ್ದರು. ಆದರೆ ಇಂದು (ಡಿ.9) ಪೊಲೀಸರ ಪರ ವಾದ ಮಾಡಿರುವ ಎಸ್​ಪಿಪಿ ಪ್ರಸನ್ನ ಕುಮಾರ್​ ಅವರು ಕೆಲವು ಪ್ರಮುಖ ವಿಚಾರಗಳನ್ನು ಕೋರ್ಟ್​ ಗಮನಕ್ಕೆ ತಂದಿದ್ದಾರೆ. ಹಲವು ಸಾಕ್ಷಿಗಳನ್ನು ಅವರು ನೀಡಿದ್ದಾರೆ.

ಎದೆಗೂಡಿನ 17 ಮೂಳೆ ಮುರಿದಿವೆ; ಕೊಲೆ ಎನ್ನಲು ಹಲವು ಸಾಕ್ಷ್ಯಗಳಿವೆ: ಎಸ್​ಪಿಪಿ ವಾದ
ದರ್ಶನ್, ರೇಣುಕಾಸ್ವಾಮಿ
Ramesha M
| Edited By: |

Updated on: Dec 09, 2024 | 6:15 PM

Share

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇಂದು (ಡಿಸೆಂಬರ್​ 9) ಹೈಕೋರ್ಟ್​ನಲ್ಲಿ ನಡೆದಿದೆ. ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಈ ಮೊದಲು ವಾದ ಮಾಡುವಾಗ ಪೊಲೀಸರ ತನಿಖೆಯ ಲೋಪಗಳನ್ನು ಪ್ರಶ್ನಿಸಿದ್ದರು. ಅವುಗಳಿಗೆ ಇಂದು ಎಸ್​ಪಿಪಿ ಪ್ರಸನ್ನ ಕುಮಾರ್​ ಪ್ರತಿ ವಾದ ಮಾಡಿದ್ದಾರೆ. ‘ಆರೋಪಿಗಳು ಎತ್ತಿದ್ದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇವೆ. ಕೇವಲ ಒಂದು ಏಟು ಹೊಡೆದು ರೇಣುಕಾಸ್ವಾಮಿ ಮೃತಪಟ್ಟಿಲ್ಲ. 17 ಎದೆಗೂಡಿನ ಮೂಳೆ ಮುರಿದಿವೆ. ರಕ್ತ ಬರುವಂತಹ ಗಾಯಗಳಿವೆ. ಹೀಗಾಗಿ ಇದು ಕೊಲೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ’ ಎಂದು ಎಸ್​ಪಿಪಿ ಹೇಳಿದರು.

ಘಟನೆ ನಡೆದಾಗ ಇದ್ದಂತಹ ವ್ಯಕ್ತಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಆ ಹೇಳಿಕೆಗಳನ್ನು ಕೂಡ ಉಲ್ಲೇಖಿಸಿ ಎಸ್​ಪಿಪಿ ವಾದ ಮಂಡಿಸಿದ್ದಾರೆ.‘ದರ್ಶನ್ ಕಾರಿನಿಂದ ಬಂದವರೇ ರೇಣುಕಾಸ್ವಾಮಿಗೆ ಒದ್ದರು. ಪವಿತ್ರಾಗೌಡ ಚಪ್ಪಲಿಯಿಂದ ಹೊಡೆಯುತ್ತಾಳೆ. ನಂತರ ಆ ಚಪ್ಪಲಿ ತೆಗೆದುಕೊಂಡು ದರ್ಶನ್ ಕೂಡ ಹೊಡೆಯುತ್ತಾರೆ. ನನ್ನ ಹೆಂಡತಿಗೆ ಮೆಸೇಜ್ ಮಾಡುತ್ತೀಯಾ ಎಂದು ಹೇಳುತ್ತಾ ಹೊಡೆಯುತ್ತಾರೆ. ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ದರ್ಶನ್ ತುಳಿಯುತ್ತಿದ್ದರು. ಪವನ್ ಕೈಲಿ ಮೆಸೇಜ್ ಓದಿಸಿದರು. ನಂತರ ಪ್ಯಾಂಟ್ ಬಿಚ್ಚಿಸಿ ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ದರ್ಶನ್ ಒದ್ದರು’ ಎಂದು ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಗಳು ಇವೆ ಎಂದು ಪ್ರಸನ್ನ ಕುಮಾರ್​ ತಿಳಿಸಿದರು.

‘ಬಾಸ್ ಹೊಡೆದ ಜಾಗದಲ್ಲಿ ಬ್ಲಡ್ ಬರುತ್ತಿರುವುದಾಗಿ ಸಹ ಆರೋಪಿ ಹೇಳಿದ್ದ. ನೀರು ಕೊಟ್ಟರೆ ಕುಡಿಯುತ್ತಿಲ್ಲವೆಂದು ಕೂಡ ಆರೋಪಿ ಹೇಳಿದ್ದ. ಈ ಎಲ್ಲವನ್ನೂ ಪ್ರತ್ಯಕ್ಷ ಸಾಕ್ಷಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾನೆ. ಆಗ ರೇಣುಕಾಸ್ವಾಮಿ ಸತ್ತಿದ್ದನೋ ಇಲ್ಲವೋ ಎಂದು ಹೇಳಲು ವೈದ್ಯರಿರಲಿಲ್ಲ. ಆಗ ನಡೆದ ಘಟನೆಯನ್ನಷ್ಟೇ ಪ್ರತ್ಯಕ್ಷ ಸಾಕ್ಷಿ ಹೇಳಿದ್ದಾನೆ. ಪೋಸ್ಟ್ ಮಾರ್ಟಮ್ ವರದಿಯಲ್ಲಿ ಎದೆಯ ಮೂಳೆ ಮುರಿದ ಬಗ್ಗೆ ಇದೆ. ಎದೆಯ ಒಟ್ಟು 17 ಮೂಳೆಗಳು ಮುರಿದಿವೆ. ದರ್ಶನ್ ಹಾಗೂ ಆರೋಪಿಗಳ ಉಪಸ್ಥಿತಿಗೆ ಫೋಟೋಗಳ ಸಾಕ್ಷಿಯಿದೆ. ಶೆಡ್​​ನಲ್ಲೇ ಈ ಪೋಟೋಗಳನ್ನು ತೆಗೆದುಕೊಂಡಿದ್ದಾರೆ. ಶೆಡ್​ನಲ್ಲಿದ್ದ ವಾಹನಗಳೂ ಫೋಟೋದಲ್ಲಿ ಕಾಣಬಹುದು’ ಪ್ರಸನ್ನ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್​ ಮಧ್ಯಂತರ ಜಾಮೀನು ಅವಧಿ ವಿಸ್ತರಣೆ; ದಾಸನಿಗೆ ತಾತ್ಕಾಲಿಕ ರಿಲೀಫ್

‘ಎ2, ಎ7, ಎ8 ಫೋಟೋ ತೆಗೆಸಿಕೊಂಡಿರುವ ಫೋಟೋ ಇದೆ. ಇದೇ ಶೂ, ಬಟ್ಟೆಗಳನ್ನು ರಿಕವರಿ ಮಾಡಲಾಗಿದೆ. ಎ8 ಡ್ರೈವರ್ ಪ್ಯಾಂಟ್ ಮಾತ್ರ ಬದಲಾಗಿದೆ. ಬಾಡಿ ಶಿಫ್ಟ್ ಮಾಡುವ ಉದ್ದೇಶದಿಂದ ಪ್ಯಾಂಟ್ ಬದಲಿಸಿದ್ದಾನೆ. ಇದಕ್ಕೆ ಪೂರಕವಾಗಿ ಎ8 ಹೇಳಿಕೆ ದಾಖಲಾಗಿದೆ. ನಂತರ ಈ ಫೋಟೋಗಳನ್ನು ಆರೋಪಿಗಳಿಗೆ ಕಳುಹಿಸಿರುತ್ತೇನೆ. ನಂತರ ಬಾಡಿಯನ್ನು ಹಾಲ್​ನಲ್ಲಿ ಮಲಗಿಸಿರುತ್ತಾರೆ. ಹಾಲ್​ನಲ್ಲಿ ರೇಣುಕಾಸ್ವಾಮಿಯ ಬ್ಲಡ್ ಸ್ವಾಬ್ ಸಿಕ್ಕಿದೆ’ ಎಂದು ಪೊಲೀಸರ ಪರ ಎಸ್​ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್