ಪುನೀತ್ ಕಪ್ಪಿದ್ದಾರೆ ಎಂದಾಗ ರಾಜ್ಕುಮಾರ್ ಪ್ರತಿಕ್ರಿಯೆ ಹೇಗಿತ್ತು? ನಿಜಕ್ಕೂ ಇವರು ಅನೇಕರಿಗೆ ಮಾದರಿ
ರಾಜ್ಕುಮಾರ್ಗೆ ಮೂವರು ಗಂಡುಮಕ್ಕಳು. ಪುನೀತ್ ಅವರು ನಮ್ಮೊಂದಿಗೆ ಇಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ರಾಜ್ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಅವರು ಕಪ್ಪು ಎಂದು ಕೆಲವರು ಟೀಕಿಸಿದಾಗ ರಾಜ್ಕುಮಾರ್ ಖಡಕ್ ಆಗಿ ಉತ್ತರ ಕೊಟ್ಟಿದ್ದರು.
ರಾಜ್ಕುಮಾರ್ ಅವರು ಸಿನಿಮಾಗಳ ಮೂಲಕ ಅನೇಕ ಆದರ್ಶಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ನಿಜ ಜೀವನದಲ್ಲೂ ಇದ್ದರು. ಅವರಿಗೆ ಯಾರದ್ದಾದರೂ ಕೆಟ್ಟದು ಬಯಸಿದರೆ ಅವರು ಒಳಿತನ್ನೇ ಬಯಸುತ್ತಿದ್ದರು. ಈ ಕಾರಣಕ್ಕೆ ರಾಜ್ಕುಮಾರ್ ಅನೇಕರಿಗೆ ಇಷ್ಟ ಆಗುತ್ತಾರೆ. ರಾಜ್ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಕಪ್ಪಗಿದ್ದಾರೆ ಎಂದು ಹೇಳಿದಾಗ ಅವರು ಕೊಟ್ಟ ಉತ್ತರ ಅನೇಕರಿಗೆ ಮಾದರಿ ಆಗಿತ್ತು.
ರಾಜ್ಕುಮಾರ್ಗೆ ಮೂವರು ಗಂಡುಮಕ್ಕಳು. ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಈಗಲೂ ನಮ್ಮ ಜೊತೆ ಇದ್ದಾರೆ. ಆದರೆ, ಪುನೀತ್ ಅವರು ನಮ್ಮೊಂದಿಗೆ ಇಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ರಾಜ್ಕುಮಾರ್ ಅವರು ಪುನೀತ್ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು. ಪುನೀತ್ ಅವರು ಕಪ್ಪು ಎಂದು ಕೆಲವರು ಟೀಕಿಸಿದಾಗ ರಾಜ್ಕುಮಾರ್ ಖಡಕ್ ಆಗಿ ಉತ್ತರ ಕೊಟ್ಟಿದ್ದರು.
ಪುನೀತ್ ತಾಯಿ ಪಾರ್ವತಮ್ಮ ಅವರು ಈ ಬಗ್ಗೆ ಮಾತನಾಡಿದ್ದರು. ‘ರಾಮ ಕೃಷ್ಣ ಎಲ್ಲ ಕಪ್ಪು. ಅದಕ್ಕೆ ಅವನು ಕಪ್ಪಗೆ ಹುಟ್ಟಿದ್ದಾನೆ. ಅವನು ದೇವರು. ಏನು ಅಂದುಕೋಬೇಡ ಎಂದು ರಾಜ್ಕುಮಾರ್ ಸಮಾಧಾನ ಮಾಡಿದ್ದರು’ ಎಂಬುದಾಗಿ ಪಾರ್ವತಮ್ಮ ಹೇಳಿದ್ದರು. ‘ಕಪ್ಪು ಕಸ್ತೂರಿ, ಕೆಂಪು ಕಿಸ್ಬಾಯಿ. ನನಗೇನೋ ಮಗನ ಬಣ್ಣ ಸಾಕಷ್ಟು ಇಷ್ಟ ಆಯ್ತು’ ಎಂಬುದು ರಾಜ್ಕುಮಾರ್ ಮಾತಾಗಿತ್ತು.
View this post on Instagram
ಪುನೀತ್ ರಾಜ್ಕುಮಾರ್ ಓರ್ವ ಅದ್ಭುತ ನಟ. ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾಗಳನ್ನು ಅವರು ಕೊಡುತ್ತಿದ್ದರು. ಅಷ್ಟೇ ಅಲ್ಲ, ಡ್ಯಾನ್ಸ್ನಲ್ಲಿ ಅವರು ಎತ್ತಿದ ಕೈ. ಚಿಕ್ಕ ವಯಸ್ಸಿನಲ್ಲೇ ಪುನೀತ್ ನಟನೆಗೆ ಕಾಲಿಟ್ಟರು. ಇದಕ್ಕೆ ಕಾರಣ ಆಗಿದ್ದು ರಾಜ್ಕುಮಾರ್ ಅವರು. ಪುನೀತ್ ಅವರನ್ನು ಸೆಟ್ಗೆಲ್ಲ ಕರೆದುಕೊಂಡು ಹೋಗುತ್ತಿದ್ದುದು ಇದೇ ರಾಜ್ಕುಮಾರ್.
ಇದನ್ನೂ ಓದಿ: ‘ಶಾಖಾಹಾರಿ’ ನಿರ್ದೇಶನಕ ಚಿತ್ರಕ್ಕೆ ಗೀತಾ ಶಿವರಾಜ್ಕುಮಾರ್ ಬಂಡವಾಳ; ಹೀರೋ ಯಾರು?
ರಾಜ್ಕುಮಾರ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಅನೇಕರಿಗೆ ಮಾದರಿ. ಅವರು ಚಿತ್ರರಂಗದಲ್ಲಿ ಯಾವಾಗಲೂ ಮಿಂಚಿದವರು. ಅವರಿಂದ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಈಗಲೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Mon, 9 December 24