ಚೈತ್ರಾ ಕುಂದಾಪುರ ಬಗ್ಗೆ ಸುದೀಪ್ಗೆ ಶುರುವಾಗಿದೆ ಭಯ; ಓಪನ್ ಆಗಿ ಹೇಳಿದ ಕಿಚ್ಚ
ಕಳೆದ ವಾರದ ಟಾಸ್ಕ್ನಲ್ಲಿ ಚೈತ್ರಾ ಅವರನ್ನು ರಜತ್ ಅವರು ಆಟದಿಂದ ಹೊರಹಾಕಿದರು. ಇದರಿಂದ ಕೋಪಗೊಂಡ ಚೈತ್ರಾ ಅವರು ಶಾಪ ಹಾಕೋಕೆ ಆರಂಭಿಸಿದರು. ‘ನೀವು ಸೋಲಬೇಕು’ ಎಂದು ನೇರವಾಗಿ ಹೇಳಿದ ಚೈತ್ರಾ, ದೇವರ ಬಳಿ ಹೋಗಿಯೂ ಈ ಬಗ್ಗೆ ಕೇಳಿಕೊಂಡರು. ಈ ಬಗ್ಗೆ ಸುದೀಪ್ಗೆ ಭಯ ಶುರುವಾಗಿದೆ.
ಕಿಚ್ಚ ಸುದೀಪ್ ಅವರು ಯಾರಿಗೂ ಭಯಪಟ್ಟು ಬದುಕಿದವರಲ್ಲ. ಏನೇ ಇದ್ದರೂ ಅದನ್ನು ಓಪನ್ ಆಗಿ ಹೇಳುತ್ತಾರೆ. ಅವರ ನೇರಾನೇರ ಮಾತುಗಳು ಎಲ್ಲರಿಗೂ ಇಷ್ಟ ಆಗುತ್ತವೆ. ಬಿಗ್ ಬಾಸ್ ವೇದಿಕೆ ಮೇಲೆ ನಿಂತರೆ ಅವರು ಮಾತುಗಳು ಸಖತ್ ಇಷ್ಟ ಆಗುತ್ತವೆ. ಈಗ ಅವರಿಗೆ ಚೈತ್ರಾ ಕುಂದಾಪುರ ಅವರ ಮೇಲೆ ಭಯ ಶುರುವಾಗಿದೆ. ಈ ವಿಚಾರವನ್ನು ಅವರು ಫನ್ ರೂಪದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಚೈತ್ರಾ ಅವರ ಶಾಪ.
ಕಳೆದ ವಾರದ ಟಾಸ್ಕ್ನಲ್ಲಿ ಚೈತ್ರಾ ಅವರನ್ನು ರಜತ್ ಅವರು ಆಟದಿಂದ ಹೊರಹಾಕಿದರು. ಇದರಿಂದ ಕೋಪಗೊಂಡ ಚೈತ್ರಾ ಅವರು ಶಾಪ ಹಾಕೋಕೆ ಆರಂಭಿಸಿದರು. ‘ನೀವು ಸೋಲಬೇಕು’ ಎಂದು ನೇರವಾಗಿ ಹೇಳಿದ ಚೈತ್ರಾ, ದೇವರ ಬಳಿ ಹೋಗಿಯೂ ಈ ಬಗ್ಗೆ ಕೇಳಿಕೊಂಡರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಯಿತು. ವೀಕೆಂಡ್ನಲ್ಲಿ ಈ ವಿಚಾರ ಚರ್ಚೆಗೆ ಬಂತು.
ಯೆಸ್ ಆರ್ ನೋ ರೌಂಡ್ನಲ್ಲಿ ‘ಚೈತ್ರಾ ಶಾಪ ಹಾಕಿದ್ದರಿಂದಲೇ ರಜತ್ ಔಟ್ ಆದರು’ ಎಂಬ ಸ್ಟೇಟ್ಮೆಂಟ್ನ ಸುದೀಪ್ ಕೊಟ್ಟರು. ಈ ಮಾತನ್ನು ರಜತ್ ಒಪ್ಪಿದರೆ ಚೈತ್ರಾ ಅವರು ಒಪ್ಪಿಕೊಳ್ಳಲಿಲ್ಲ. ‘ಚೈತ್ರಾ ಪದೇ ಪದೇ ಶಾಪ ಹಾಕುತ್ತಿದ್ದರು. ಅವರ ಶಾಪ ತಾಗಿದೆ. ಈ ಕಾರಣಕ್ಕೆ ನಾನು ಔಟ್ ಆದೆ’ ಎಂದು ರಜತ್ ಅವರು ಹೇಳಿಕೊಂಡರು.
ಇದನ್ನೂ ಓದಿ: ‘ಬಿಗ್ ಬಾಸ್ಗೆ ಒಳ್ಳೆಯ ಟಿಆರ್ಪಿ ಬರೋಕೆ ನೀವಲ್ಲ, ನಾನು ಕಾರಣ’; ಓಪನ್ ಆಗಿ ಹೇಳಿದ ಸುದೀಪ್
ಇದರಿಂದ ಸುದೀಪ್ ಭಯವಾದಂತೆ ನಟಿಸಿದರು. ‘ನಾನು ಇನ್ಮುಂದೆ ಚೈತ್ರಾ ಅವರ ಬಳಿ ಎಚ್ಚರಿಕೆಯಿಂದ ಮಾತನಾಡುತ್ತೇನೆ. ಚೈತ್ರಾ ನನಗೆ ಶಾಪ ಹಾಕಬೇಡಿ. ನಿಮ್ಮ ಕೈನ ಮೇಲೆ ಎತ್ತಬೇಡಿ. ಒಳಕ್ಕೆ ಇಟ್ಟುಕೊಳ್ಳಿ. ಅದರಿಂದ ಶಾಪ ಹಾಕಿದ್ರೆ ಕಷ್ಟ’ ಎಂದು ಸುದೀಪ್ ಅವರು ಹೇಳುತ್ತಿದ್ದಂತೆ ಎಲ್ಲರೂ ನಕ್ಕರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.