‘ಶಾಖಾಹಾರಿ’ ನಿರ್ದೇಶನಕ ಚಿತ್ರಕ್ಕೆ ಗೀತಾ ಶಿವರಾಜ್ಕುಮಾರ್ ಬಂಡವಾಳ; ಹೀರೋ ಯಾರು?
ಗೀತಾ ಶಿವರಾಜ್ಕುಮಾರ್ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ವೇದ’, ‘ಭೈರತಿ ರಣಗಲ್’ ರೀತಿಯು ಸಿನಿಮಾಗಳು ‘ಗೀತಾ ಪಿಕ್ಚರ್ಸ್’ ಮೂಲಕ ಮೂಡಿ ಬಂದಿದೆ. ಈಗ ಈ ಬ್ಯಾನರ್ ಅಡಿಯಲ್ಲಿ ನಾಲ್ಕನೇ ಸಿನಿಮಾ ಘೋಷಣೆ ಆಗಿದೆ.
‘ಶಾಖಾಹಾರಿ’ ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ಸಖತ್ ಇಷ್ಟ ಆದ ಚಿತ್ರ. ಈ ಸಿನಿಮಾ ಸಸ್ಪೆನ್ಸ್ ಶೈಲಿಯಲ್ಲಿ ಮೂಡಿ ಬಂದಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರವನ್ನು ಕೊಂಡಾಡಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸಂದೀಪ್ ಸುಕಂದ್ ಅವರು. ಅವರ ಬಿಗಿಯಾದ ನಿರ್ದೇಶನ ಚಿತ್ರವನ್ನು ಸುಂದರಗೊಳಿಸಿತ್ತು. ಈಗ ‘ಶಾಖಾಹಾರಿ’ ಸಿನಿಮಾ ನಿರ್ದೇಶಕನ ಜೊತೆ ಗೀತಾ ಶಿವರಾಜ್ಕುಮಾರ್ ಅವರು ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಹೀರೋ ಯಾರು ಎಂಬುದು ಕೂಡ ರಿವೀಲ್ ಆಗಿದೆ.
ಗೀತಾ ಶಿವರಾಜ್ಕುಮಾರ್ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ವೇದ’, ‘ಭೈರತಿ ರಣಗಲ್’ ರೀತಿಯು ಸಿನಿಮಾಗಳು ‘ಗೀತಾ ಪಿಕ್ಚರ್ಸ್’ ಮೂಲಕ ಮೂಡಿ ಬಂದಿದೆ. ಈಗ ಈ ಬ್ಯಾನರ್ ಅಡಿಯಲ್ಲಿ ನಾಲ್ಕನೇ ಸಿನಿಮಾ ಘೋಷಣೆ ಆಗಿದೆ. ಗೀತಾ ಶಿವರಾಜ್ಕುಮಾರ್ ನಿರ್ಮಾಣ ಇರುವ ಈ ಚಿತ್ರಕ್ಕೆ ಸಂದೀಪ್ ನಿರ್ದೇಶನ ಇದೆ.
ಹಾಗಾದರೆ, ಈ ಚಿತ್ರಕ್ಕೆ ಹೀರೋ ಯಾರು? ಅದಕ್ಕೂ ಉತ್ತರ ಇದೆ. ಹಿರಿಯ ನಟ ರಾಮ್ಕುಮಾರ್ ಅವರ ಪುತ್ರ ಧೀರೇನ್ ರಾಮ್ಕುಮಾರ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಮೊದಲು ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರು ಮತ್ತೊಂದು ಚಿತ್ರದಲ್ಲಿ ನಟಿಸಲು ರೆಡಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
View this post on Instagram
ಇದನ್ನೂ ಓದಿ: Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್; ರಂಗಾಯಣ ರಘು ಬೆಸ್ಟ್
‘ಶಾಖಾಹಾರಿ’ ಚಿತ್ರಮಂದಿರದಲ್ಲಿ ರಿಲೀಸ್ ಆದಾಗ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಆ ಬಳಿಕ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಯಿತು. ಒಟಿಟಿಯಲ್ಲಿ ನೋಡಿದ ಅನೇಕರು ಈ ಚಿತ್ರವನ್ನು ಹೊಗಳಿದ್ದಾರೆ. ರಂಗಾಯಣ ರಘು ಅವರ ನಟನೆಯನ್ನು ಜನರು ಕೊಂಡಾಡಿದರು. ಈಗ ಧೀರೇನ್ಗೆ ಸಂದೀಪ್ ಅವರು ನಿರ್ದೇಶನ ಮಾಡುತ್ತಿರುವುದು ಯಾವ ರೀತಿಯ ಸಿನಿಮಾ ಎಂಬ ಕುತೂಹಲವೂ ಇದೆ.
View this post on Instagram
ಗೀತಾ ಶಿವರಾಜ್ಕುಮಾರ್ ನಿರ್ಮಾಣ ಮಾಡಿದ ‘ಭೈರತಿ ರಣಗಲ್’ ಸಿನಿಮಾ ನವೆಂಬರ್ 15ರಂದು ತೆರೆಗೆ ಬಂತು. ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಇದೆ. ಈ ಚಿತ್ರ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Fri, 6 December 24