KSRTC ಬಸ್​ ಅಡ್ಡಗಟ್ಟಿ, ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿ

| Updated By: ವಿವೇಕ ಬಿರಾದಾರ

Updated on: Apr 06, 2024 | 10:34 AM

ಸುಭಾಷ್ ಬಾಡಕರ್ ಎಂಬಾತ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಬಳಿ ಕೆಎಸ್​ಆರ್​ಟಿಸಿ ಬಸ್​ ಮುಂದೆ ಬೈಕ್​ ನಿಲ್ಲಿಸಿದ್ದಾನೆ. ಈ ವೇಳೆ ದಾರಿ ಬಿಡುವಂತೆ ಪ್ರಯಾಣಿಕ ಹೇಳಿದ್ದಕ್ಕೆ ಅವರ ಮೇಲೆ ಸುಭಾಷ್ ಹಲ್ಲೆ ​ ಮಾಡಿದ್ದಾನೆ. ಅಲ್ಲದೆ, ವಿಚಾರಿಸಲು ಹೋದ ಚಾಲಕ ಮತ್ತು ನಿರ್ವಾಹಕರ ಶರ್ಟ್ ಹಿಡಿದು ಅವರ ಮೇಲೂ ಹಲ್ಲೆ ಮಾಡಿದ್ದಾನೆ.

KSRTC ಬಸ್​ ಅಡ್ಡಗಟ್ಟಿ, ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ವ್ಯಕ್ತಿ
ನಿರ್ವಾಹಕನ ಮೇಲೆ ಹಲ್ಲೆ
Follow us on

ಕಾರವಾರ, ಏಪ್ರಿಲ್​ 06: ವ್ಯಕ್ತಿಯೋರ್ವ ಕೆಎಸ್​ಆರ್​ಟಿಸಿ ಬಸ್ ಅಡ್ಡಗಟ್ಟಿ ಚಾಲಕ (Driver) ನಿರ್ವಾಹಕ (Conductor) ಮತ್ತು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಕನ್ನಡ (Uttar Kannada) ಜಿಲ್ಲೆಯ ಕಾರವಾರ (Karwar) ತಾಲೂಕಿನ ಶಿರವಾಡ ಜಾಂಬಾ ಕ್ರಾಸ್ ಬಳಿ ನಡೆದಿದೆ. ಶಿರವಾಡದ ಸುಭಾಷ್ ಬಾಡಕರ್  ಗೂಂಡಾ ವರ್ತನೆ ತೋರಿದ ವ್ಯಕ್ತಿ. ಬಸ್​ ಕಾರವಾರದಿಂದ ಸಿದ್ದರಗೆ ತೆರಳುತ್ತಿತ್ತು. ಈ ವೇಳೆ ಸುಭಾಷ್ ಬಾಡಕರ್ ಶಿರವಾಡ ಜಾಂಬಾ ಕ್ರಾಸ್ ಬಳಿ ಬಸ್​ ಮುಂದೆ ಬೈಕ್​ ನಿಲ್ಲಿಸಿದ್ದಾನೆ. ದಾರಿ ಬಿಡುವಂತೆ ಪ್ರಯಾಣಿಕ ಹೇಳಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ವಿಚಾರಿಸಲು ಹೋದ ಚಾಲಕ, ನಿರ್ವಾಹಕನ ಶರ್ಟ್ ಹಿಡಿದು ಅವರ ಮೇಲೂ ಹಲ್ಲೆ ಮಾಡಿದ್ದಾನೆ.

ಹಲ್ಲೆಯಲ್ಲಿ ಸಾರಿಗೆ ಬಸ್ ಚಾಲಕ ಮಹಮ್ಮದ್ ಇಸಾಕ್ (28) ತಲೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಬಸ್ ಚಾಲಕನನ್ನು 108 ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೊಬೈಲ್​ ಶಾಪ್​ ಮಾಲೀಕನ ಮೇಲೆ ಹಲ್ಲೆ ಪ್ರಕರಣ; ಹಲ್ಲೆಗೊಳಗಾದವನ ವಿರುದ್ಧವೂ ದಾಖಲಾಯ್ತು ಎಫ್​ಐಆರ್

ಫಾರ್ಮ್ ಹೌಸ್​ಗೆ ನುಗ್ಗಿ ಮಹಿಳೆ ಕೊಲೆ

ರಾಮನಗರ: ಫಾರ್ಮ್ ಹೌಸ್​ಗೆ ನುಗ್ಗಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಕಗ್ಗಲಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗಿರಿಗೌಡನ ದೊಡ್ಡಿಯಲ್ಲಿ ನಡೆದಿದೆ. ಶಾಂತಿ (53)‌ಕೊಲೆಯಾದ ಮಹಿಳೆ. ಶುಕ್ರವಾರ (ಏ.05)ರ ರಾತ್ರಿ ದರೋಡೆಕೋರರು ಮನೆಯೊಳಗೆ ನುಗ್ಗಿ, ಕೊಲೆ ಮಾಡಿರುವುದಾಗಿ ಮೃತ ಶಾಂತಿ ವಾಹನ ಚಾಲಕ ಹೇಳಿದ್ದಾನೆ.
ಹತ್ತು ವರ್ಷಗಳ ತಿಂಗಳ ಹಿಂದೆ ಶಾಂತಿ ಪತಿ ಹೃದಯಘಾತದಿಂದ ನಿಧನವಾಗಿದ್ದಾರೆ. ಐದು ವರ್ಷದ ಹಿಂದೆ ಇದ್ದೊಬ್ಬ ಮಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಶಾಂತಿಒಬ್ಬಂಟಿಯಾಗಿ ಫಾರ್ಮ್ ಹೌಸಿನಲ್ಲಿ ವಾಸಿಸುತ್ತಿದ್ದರು. ಸ್ಥಳಕ್ಕೆ ಕಗ್ಗಲಿಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ವಿಜಯನಗರ: ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಹಗರಿಬೊಮ್ಮನಳ್ಳಿ ತಾಲೂಕಿನ ಮೋರಿಗೆರಿ ಗ್ರಾಮದ ದಿದ್ಗಿ ಮೈಲವ್ವ (50) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅತಿಕ್ರಮಣ ಜಾಗದಲ್ಲಿ ಉಳಿಮೆ ಮಾಡುತ್ತಿದ್ದ ಮೈಲವ್ವ ಅವರನ್ನು ಒಕ್ಕಲೆಬ್ಬಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಿದ್ಗಿ ಮೈಲವ್ವ ಸುಮಾರು 5 ಎಕರೆ ಜಮೀನನ್ನು 30 ವರ್ಷದಿಂದ ಉಳಿಮೆ ಮಾಡುತ್ತಿದ್ದರು. ದಿದ್ಗಿ ಮೈಲವ್ವ ಉಳಿಮೆ ಮಾಡುತ್ತಿದ್ದ ಹೊಲದಲ್ಲಿ ಗ್ರಾಮ ಪಂಚಾಯತಿ ಉದ್ಯೋಗ ಖಾತ್ರಿ ಕೆಲಸ ಪ್ರಾರಂಭ ಮಾಡಿತು. ಸ್ಥಳಕ್ಕೆ ಪಂಚಾಯತಿ ಅಧಿಕಾರಿಗಳ, ಪೋಲಿಸರ ಬೇಟಿ ಪರಿಶೀಲನೆ ನಡೆಸಿದ್ದಾರೆ. ಇಟಗಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:26 am, Sat, 6 April 24