AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಂಡಲ್ ಜಲಾಶಯದಲ್ಲಿ ಕಾಲುಜಾರಿ ಬಿದ್ದ ತಾಯಿ: ರಕ್ಷಿಸಲು ಹೋದ ಇಬ್ಬರು ಮಕ್ಕಳು ಸಹ ಸಾವು

ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲುಜಾರಿ ಬಿದ್ದ ತಾಯಿ ರಕ್ಷಿಸಲು ಹೋಗಿ ಇಬ್ಬರು ಮಕ್ಕಳು ಸಹ ನೀರುಪಾಲಾಗಿ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗುಂಡಲ್ ಜಲಾಶಯದಲ್ಲಿ ನಡೆದಿದೆ. ಮತ್ತೊಂದು ಪ್ರಕರಣಲ್ಲಿ ಬೆಂಗಳೂರಿನ ಆನೇಕಲ್​ ಬಳಿ ಹಿಟ್​​ ಆ್ಯಂಡ್​ ರನ್​ಗೆ ಸವಾರ ಮೃತಪಟ್ಟಿರುವಂತಹ ಘಟನೆ ಆನೇಕಲ್​ನ ಮಿರ್ಜಾರಸ್ತೆಯ ಪೊಲೀಸ್ ಕ್ವಾರ್ಟರ್ಸ್​​ ಬಳಿ ನಡೆದಿದೆ.

ಗುಂಡಲ್ ಜಲಾಶಯದಲ್ಲಿ ಕಾಲುಜಾರಿ ಬಿದ್ದ ತಾಯಿ: ರಕ್ಷಿಸಲು ಹೋದ ಇಬ್ಬರು ಮಕ್ಕಳು ಸಹ ಸಾವು
ಗುಂಡಲ್ ಜಲಾಶಯ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ

Updated on:Apr 05, 2024 | 4:23 PM

ಚಾಮರಾಜನಗರ, ಏಪ್ರಿಲ್​ 05: ಜಿಲ್ಲೆಯ ಹನೂರು ತಾಲೂಕಿನ ಗುಂಡಲ್ ಜಲಾಶಯ (Gundal Dam) ದಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಪುದೂರು ಗ್ರಾಮದ ಮೀನಾ(33), ಪವಿತ್ರಾ(13), ಕೀರ್ತಿ(12) ಮೃತರು. ಗುಂಡಲ್ ಜಲಾಶಯದಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಕಾಲುಜಾರಿ ಬಿದ್ದ ತಾಯಿ ರಕ್ಷಿಸಲು ಹೋಗಿ ಇಬ್ಬರು ಮಕ್ಕಳು ಸಹ ಸಾವನ್ನಪ್ಪಿದ್ದಾರೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರಿನ ಆನೇಕಲ್​ ಬಳಿ ಹಿಟ್​​ ಆ್ಯಂಡ್​ ರನ್​ಗೆ ಸವಾರ ಬಲಿ

ಆನೇಕಲ್: ಬೆಂಗಳೂರಿನ ಆನೇಕಲ್​ ಬಳಿ ಹಿಟ್​​ ಆ್ಯಂಡ್​ ರನ್​ಗೆ ಸವಾರ ಮೃತಪಟ್ಟಿರುವಂತಹ ಘಟನೆ ಆನೇಕಲ್​ನ ಮಿರ್ಜಾರಸ್ತೆಯ ಪೊಲೀಸ್ ಕ್ವಾರ್ಟರ್ಸ್​​ ಬಳಿ ನಡೆದಿದೆ. ಬೈಕ್​ಗೆ ಡಿಕ್ಕಿ ಹೊಡೆದು ವಾಹನ ಸಮೇತವಾಗಿ ಚಾಲಕ ಪರಾರಿ ಆಗಿದ್ದಾನೆ. ಪೊಲೀಸರು ಮೃತ ಬೈಕ್ ಸವಾರನ ಗುರುತು ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ: ದಾವಣಗೆರೆ‌: ತಲೆಮರೆಸಿಕೊಂಡಿದ್ದ ಅತ್ಯಾಚಾರ ಪ್ರಕರಣದ ಆರೋಪಿ‌ ಪಾದ್ರಿ ಬಂಧನ

ವಾಹನ ಡಿಕ್ಕಿ ರಭಸಕ್ಕೆ ಸವಾರನ ತಲೆ ಭಾಗ ಸಂಪೂರ್ಣ ಛಿದ್ರ ಛಿದ್ರವಾಗಿದೆ. ಆನೇಕಲ್​ನ ಮಿರ್ಜಾ ರಸ್ತೆಯಲ್ಲಿ ಒಂದೇ ವಾರದಲ್ಲಿ 2 ಅಪಘಾತ ಸಂಭವಿಸಿದೆ. 3-4 ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದ. ಅಪಘಾತ ಸ್ಥಳಕ್ಕೆ ಆನೇಕಲ್ ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪರಾರಿಯಾಗಿರುವ ವಾಹನ ಚಾಲಕನಿಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.

ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ: ಸಾವು

ಚಾಮರಾಜನಗರ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಹಿನ್ನೀರಿನ ಬಳಿ ನಡೆದಿದೆ. ಕುಳ್ಳೂರು ಗ್ರಾಮದ ಜಡಿಯ (56) ಮೃತ ವ್ಯಕ್ತಿ.

ಇದನ್ನೂ ಓದಿ: ರಾಯಚೂರು: ತಮ್ಮನನ್ನೇ ಲೈವ್ ಮರ್ಡರ್ ಮಾಡಿದ್ದ ಅಣ್ಣಂದಿರು ಅರೆಸ್ಟ್!

ಬೇಸಿಗೆಯ ದಗೆ ಹಿನ್ನಲೆ ಹಿನ್ನೀರಿನ ಬಳಿ ನೀರು ಕುಡಿಯಲು ಕಾಡುಪ್ರಾಣಿಗಳು ಆಗಮಿಸಿದ್ದವು. ಇದೇ ವೇಳೆ ನಡೆದುಕೊಂಡು ಹೋಗುತ್ತಿದ್ದ ಸೋಲಿಗ ಜಡಿಯನ ಮೇಲೆ ಕಾಡಾನೆ ದಾಳಿ ಮಾಡಿದೆ. ಸದ್ಯ ಸ್ಥಳಕ್ಕೆ ಬಿ.ಆರ್.ಟಿ ಸಿಸಿಎಫ್ ಹೀರಾಲಾಲ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಿಯತಮೆ ಕೈಕೊಟ್ಟ ಹಿನ್ನಲೆ ಪ್ರಿಯತಮ ಆತ್ಮಹತ್ಯೆ

ಚಿಕ್ಕಬಳ್ಳಾಫುರ: ಪ್ರಿಯತಮೆ ಕೈಕೊಟ್ಟ ಹಿನ್ನಲೆ ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪ್ರಶಾಂತ ನಗರದಲ್ಲಿ ನಡೆದಿದೆ. ಮಹೇಶ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ವಾಸವಿದ್ದ ಬಡಾವಣೆಯಲ್ಲೇ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರಿಯತಮೆ ನಿರ್ಲಕ್ಷಿಸುತ್ತಿದ್ದಾಳೆಂದು ಸಂಬಂಧಿಕರ ಬಳಿ ಅಳಲು ತೊಡಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ. ಸದ್ಯ ಮಹೇಶನ ಪ್ರಿಯತಮೆಯ ವಿರುದ್ಧ ಆತನ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಬಳ್ಳಾಪುರ ನಗರಠಾಣೆ ಸೇರಿದಂತೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಮತ್ತಷ್ಟು  ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:05 pm, Fri, 5 April 24