AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯನ್ ಮಹಿಳೆ ಮೇಲೆ ಫ್ರಾನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪ್ಯಾರಿಸ್ ಒಲಿಂಪಿಕ್ಸ್ ಶುರುವಾಗಲು ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಫ್ರಾನ್ಸ್‌ನ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಜುಲೈ 20ರಂದು ಐವರು 'ಆಫ್ರಿಕನ್' ಪುರುಷರು ಆಸ್ಟ್ರೇಲಿಯಾದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಆಸ್ಟ್ರೇಲಿಯನ್ ಮಹಿಳೆ ಮೇಲೆ ಫ್ರಾನ್ಸ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on:Jul 24, 2024 | 1:49 PM

Share

ಪ್ಯಾರಿಸ್: ಆಫ್ರಿಕನ್ ಮೂಲದ ಐವರಿಂದ ಆಸ್ಟ್ರೇಲಿಯನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ 25 ವರ್ಷದ ಆಸ್ಟ್ರೇಲಿಯನ್ ಮಹಿಳೆಯ ಬಟ್ಟೆ ಹರಿದುಹೋಗಿದ್ದು, ಆಕೆ ತನ್ನ ಜೀವ ಉಳಿಸಿಕೊಳ್ಳಲು ಕಬಾಬ್ ಅಂಗಡಿಯೊಳಗೆ ಬಚ್ಚಿಟ್ಟುಕೊಂಡಿರುವ ದೃಶ್ಯ ಆ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ಯಾರಿಸ್ ಒಲಿಪಿಂಕ್ಸ್ ಶುರುವಾಗಲು ಕೆಲವೇ ದಿನಗಳು ಬಾಕಿ ಇರುವುದರಿಂದ ಈ ಘಟನೆಯು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಕ್ರೀಡಾಪಟುಗಳು ಮತ್ತು ಪ್ರೇಕ್ಷಕರ ಸುರಕ್ಷತಾ ಕ್ರಮಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.

ಕಬಾಬ್ ಅಂಗಡಿಯಲ್ಲಿ ಬಚ್ಚಿಟ್ಟುಕೊಂಡ ಆ ಮಹಿಳೆ ಸಹಾಯಕ್ಕಾಗಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ವೇಳೆ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಆಕೆ ಅರೆನಗ್ನ ಸ್ಥಿತಿಯಲ್ಲಿ ಅಲ್ಲಿ ಬಚ್ಚಿಟ್ಟುಕೊಂಡಿರುವುದು ಗೊತ್ತಾಗಿದೆ. ಇದಾದ ನಂತರ ಪೊಲೀಸರು ತುರ್ತು ತನಿಖೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ: Shocking News: ಗೆಳೆಯನ ತಾಯಿಯ ಮೇಲೆ ಯುವಕನಿಂದ ಅತ್ಯಾಚಾರ; ಹೇಯ ಕೃತ್ಯ ಬಯಲು

ರಾತ್ರಿ ಜೀವನಕ್ಕೆ ಜನಪ್ರಿಯವಾಗಿರುವ ಪ್ಯಾರಿಸ್‌ನ ಪಿಗಲ್ಲೆ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಐವರು ಆಫ್ರಿಕನ್ ಪುರುಷರಿಂದ ಸಾಮೂಹಿಕ ಅತ್ಯಾಚಾರ ಸಂಭವಿಸಿದೆ. ಈ ಆಘಾತಕಾರಿ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕಬಾಬ್ ಅಂಗಡಿಗೆ ಪ್ರವೇಶಿಸಿದ ಮಹಿಳೆಯೊಬ್ಬರು ಐವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ನಂತರ ಸಹಾಯಕ್ಕಾಗಿ ಗೋಗರೆಯುತ್ತಿರುವುದನ್ನು ಗಮನಿಸಲಾಗಿದೆ. ದಾಳಿಕೋರರಲ್ಲಿ ಒಬ್ಬರು ಕಬಾಬ್ ಅಂಗಡಿಗೆ ಮತ್ತೆ ಬಂದು ಆಕೆಯ ಮೈಕೈ ಮುಟ್ಟುವುದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Crime News: ಚಲಿಸುತ್ತಿದ್ದ ಕಾರಿನಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಆಕೆಯ ಅಪ್ಪನಿಗೆ ವಿಡಿಯೋ ಕಳಿಸಿ ಬ್ಲಾಕ್​ಮೇಲ್

ಆ ಕಬಾಬ್ ಅಂಗಡಿಯಲ್ಲಿದ್ದ ಜನರು ಆಕೆಯ ಸುತ್ತಲೂ ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಯಾರೂ ಆಕೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಕೊನೆಗೆ ಮಹಿಳೆಯ ಸ್ಥಿತಿಯನ್ನು ನೋಡಿದ ರೆಸ್ಟೋರೆಂಟ್ ಮಾಲೀಕರು ಸಹಾಯ ಮಾಡಲು ಆಕೆಗೆ ಮೊಬೈಲ್ ನೀಡಿದರು. ಆಗ ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಫ್ರಾನ್ಸ್‌ನಲ್ಲಿ ಸುಮಾರು 7 ಮಿಲಿಯನ್ ವಲಸಿಗರು ವಾಸಿಸುತ್ತಿದ್ದಾರೆ, ಅಂದರೆ ಅಲ್ಲಿನ ಜನಸಂಖ್ಯೆಯ ಸುಮಾರು 10.3 ಪ್ರತಿಶತದಷ್ಟು ಜನರು ವಾಸಿಸುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Wed, 24 July 24