Crime News: ಪ್ರಿಯಕರನನ್ನು ತುಂಡು ತುಂಡಾಗಿ ಕೊಯ್ದು ಗೆಳತಿಯ ಮನೆಯಲ್ಲಿ ಹೂತಿಟ್ಟ ಯುವತಿ

Shocking News: ಉತ್ತರಪ್ರದೇಶದ ಪ್ರತಾಪಗಢದಲ್ಲಿ ಸಂಚಲನ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರತಾಪಗಢದಲ್ಲಿ ನೆಲೆಸಿರುವ ಯುವತಿಯೊಬ್ಬರು ಈ ಕೃತ್ಯ ಎಸಗಿದ್ದು, ಆಕೆ ಮಾಡಿದ ಕೊಲೆಗೆ ಉತ್ತರ ಪ್ರದೇಶ, ಬಿಹಾರ, ಹರಿಯಾಣ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

Crime News: ಪ್ರಿಯಕರನನ್ನು ತುಂಡು ತುಂಡಾಗಿ ಕೊಯ್ದು ಗೆಳತಿಯ ಮನೆಯಲ್ಲಿ ಹೂತಿಟ್ಟ ಯುವತಿ
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Jul 24, 2024 | 2:47 PM

ಪ್ರತಾಪಗಢ: ತನ್ನ ಪ್ರೇಮಿಯನ್ನು ತುಂಡು ತುಂಡಾಗಿ ಕತ್ತರಿಸಿದ ಯುವತಿಯೊಬ್ಬಳು ಆತನ ದೇಹದ ಅಂಗಗಳನ್ನು ಗೆಳತಿಯ ಮನೆಯಲ್ಲಿ ಹೂತಿಟ್ಟಿರುವ ಆಘಾತಕಾರಿ ಮತ್ತು ಭಯಾನಕ ಕೃತ್ಯ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ. ಫತನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸುವಂಶ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವತಿ ತನ್ನ ಪತಿಯೊಂದಿಗೆ ಸೇರಿ ತನ್ನ ಪ್ರಿಯಕರನನ್ನು ಕೊಂದಿದ್ದಾಳೆ. ನಂತರ, ಸಮೀಪದಲ್ಲೇ ವಾಸಿಸುವ ತನ್ನ ಸ್ನೇಹಿತೆಯ ಮನೆಯಲ್ಲಿ ಆತನ ಶವವನ್ನು ಹೂತಿದ್ದಾಳೆ.

ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಮಹಿಳೆಯೊಬ್ಬರು ಇಂತಹ ಕೃತ್ಯ ಎಸಗಿದ್ದು ಮೂರು ರಾಜ್ಯಗಳ ಪೊಲೀಸರನ್ನು ಬೆಚ್ಚಿ ಬೀಳಿಸಿದೆ. ಮಹಿಳೆ ತನ್ನ ಪತಿಯೊಂದಿಗೆ ಸೇರಿ ತನ್ನ ಪ್ರಿಯಕರನನ್ನು ಕೊಂದಿರುವುದಾಗಿ ಆಕೆಯೇ ಒಪ್ಪಿಕೊಂಡಿದ್ದಾಳೆ. ಮೃತ ಯುವಕ ಬಿಹಾರದ ನಿವಾಸಿ. ಹಲವು ದಿನಗಳಿಂದ ಆತನ ಸುಳಿವು ಸಿಗದಿದ್ದಾಗ ಆತನ ಮನೆಯವರು ಬಿಹಾರ ಪೊಲೀಸರಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಈ ಹೃದಯ ವಿದ್ರಾವಕ ಕೊಲೆ ಪ್ರಕರಣ ಬಯಲಾಗಿದೆ.

ಇದನ್ನೂ ಓದಿ: 19ನೇ ವಯಸ್ಸಿಗೆ ಮದುವೆ 23ಕ್ಕೆ ಗರ್ಭಿಣಿ; ವರದಕ್ಷಿಣೆಗಾಗಿ ಕೈ ಕಾಲು ಕತ್ತರಿಸಿ ಗರ್ಭಿಣಿಯ ಬರ್ಬರ ಹತ್ಯೆ

ಫತನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುವಂಶ ಗ್ರಾಮದಲ್ಲಿ ಪ್ರಕರಣ ನಡೆದಿದೆ. ಇಲ್ಲಿ ನೆಲೆಸಿರುವ ವಿನೋದ್ ಮತ್ತು ಅವರ ಪತ್ನಿ ಪುಷ್ಪಾ ಅವರು ಹರಿಯಾಣದ ಗುರುಗ್ರಾಮದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಬಿಹಾರದ ಮುನಿಯಾರಿ ಡ್ಯಾಂ ನಿವಾಸಿಯಾದ 45 ವರ್ಷದ ಶಿವನಾಥ್ ಎಂಬುವವರೊಂದಿಗೆ ಪುಷ್ಪಾ ಅಕ್ರಮ ಸಂಬಂಧ ಹೊಂದಿದ್ದಳು. ಆದರೆ, ಸ್ವಲ್ಪದರಲ್ಲೇ ಆಕೆಗೆ ಶಿವನಾಥನ ಸಂಬಂಧ ಬೇಡವಾಯಿತು. ಅವಳು ಶಿವನಾಥನಿಂದ ದೂರವಾಗಲು ಬಯಸಿದ್ದಳು. ಆದರೆ ಶಿವನಾಥ್ ಆಕೆಯೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ಸಿದ್ಧರಿರಲಿಲ್ಲ. ಇದರಿಂದ ಗಂಡನಿಗೆ ವಿಷಯ ತಿಳಿಸಿ, ಆತನ ಜೊತೆ ಸೇರಿ ಪ್ಲಾನ್ ಮಾಡಿದ ಆ ಯುವತಿ ಕೊಲೆ ಮಾಡಲು ನಿರ್ಧರಿಸಿದ್ದಾಳೆ.

ಒಂದು ತಿಂಗಳ ಹಿಂದೆ ಪುಷ್ಪಾ ಕಂಪನಿಯಿಂದ ರಜೆ ಪಡೆದು ಊರಿಗೆ ಹೋಗಿದ್ದಳು. ತನ್ನ ಪ್ರಿಯಕರ ಶಿವನಾಥನನ್ನು ಕೂಡ ಅಲ್ಲಿಗೆ ಕರೆದಿದ್ದಳು. ತನ್ನ ಪ್ರೇಯಸಿಯನ್ನು ಭೆಟಿಯಾಗಲು ಬಂದ ಶಿವನಾಥನಿಗೆ ಮುಂದೆ ತನಗೆ ಏನಾಗಲಿದೆ ಎಂದು ತಿಳಿಯಲಿಲ್ಲ. ಪುಷ್ಪಾ ತನ್ನ ಸ್ನೇಹಿತೆ ಪೂನಂ ಮನೆಯಲ್ಲಿ ಭೇಟಿಯಾಗಲು ಶಿವನಾಥ್‌ಗೆ ಕರೆ ಮಾಡಿದ್ದಳು.

ಇದನ್ನೂ ಓದಿ: ಹೆತ್ತ ತಾಯಿಯನ್ನೇ ಕೊಂದು ನೇಣು ಹಾಕಿದ ಮಕ್ಕಳು; ಆ ಒಂದು ತಪ್ಪಿನಿಂದ ಕೊಲೆ ಬಯಲು 

ಅಲ್ಲಿಗೆ ಬಂದ ಶಿವನಾಥನನ್ನು ಕೊಂದ ಪುಷ್ಪಾ ಹಾಗೂ ಆಕೆಯ ಗಂಡ ಆತನ ಕತ್ತು ಹಿಸುಕಿ ಕೊಂದು, ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿದ್ದಾನೆ. ಹರಿತವಾದ ಆಯುಧದಿಂದ ದೇಹವನ್ನು ಮೂರು ತುಂಡುಗಳನ್ನಾಗಿ ಮಾಡಲಾಗಿದೆ. ನಂತರ ಪೂನಂ ಅವರ ಮನೆಯಲ್ಲಿ ಶವವನ್ನು ಹೂಳಲಾಯಿತು. ಇದಾದ ನಂತರ ವಿನೋದ್ ಮತ್ತು ಪುಷ್ಪಾ ಗುರುಗ್ರಾಮಕ್ಕೆ ಮರಳಿದರು.

ಈ ನಡುವೆ ಬಿಹಾರ ಪೊಲೀಸರು ಶಿವನಾಥ್‌ಗಾಗಿ ಹುಡುಕಾಟ ನಡೆಸಿದ್ದರು. ಆಗ ಪುಷ್ಪಾ ಜತೆ ನಿತ್ಯ ಸಂಪರ್ಕದಲ್ಲಿದ್ದುದು ಪತ್ತೆಯಾಗಿದೆ. ಅವಳು ಕೊನೆಯದಾಗಿ ಮಾತನಾಡಿದ ವ್ಯಕ್ತಿ ಪುಷ್ಪಾ ಆಗಿದ್ದರಿಂದ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಭಯದಿಂದ ಆಕೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.

ನಂತರ ಪೊಲೀಸರು ಪ್ರತಾಪಗಢದಲ್ಲಿರುವ ಪುಷ್ಪಾ ಅವರ ಸ್ನೇಹಿತೆಯ ಮನೆಯಿಂದ ಶವವನ್ನು ವಶಪಡಿಸಿಕೊಂಡರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಶಿವನಾಥ್ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಪುಷ್ಪಾಳ ಗೆಳತಿ ತಲೆಮರೆಸಿಕೊಂಡಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ