ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಚಾಲಕನ ಬರ್ಬರ ಕೊಲೆ; ಕೇಸ್ ಬೆನ್ನತ್ತಿದ್ದ ಪೊಲೀಸ್ರಿಗೆ ಸಿಕ್ತು ಟ್ವಿಸ್ಟ್, ಆರೋಪಿಗಳು ಅಂದರ್
ಅವರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರು, ಅಣ್ಣ-ತಮ್ಮಂದಿರಂತಿದ್ದ ಇಬ್ಬರ ನಡುವೆ ಹಲವು ತಿಂಗಳಿಂದ ಶುರುವಾಗಿದ್ದ ಕಲಹ ಇದೀಗ ಕೊಲೆಯಲ್ಲಿ ಅಂತ್ಯವಾಗಿದ್ದು, ಹೆದ್ದಾರಿ ಕೊಲೆ ಕೇಸ್ ಬೆನ್ನತ್ತಿದ್ದ ಪೊಲೀಸರು, ಸ್ನೇಹಿತರ ದುಷ್ಮನ್ ಕಹಾನಿಯನ್ನ ರಿವೀಲ್ ಮಾಡಿದ್ದಾರೆ. ಏನಿದು ಪ್ರಕರಣ? ಈ ಸ್ಟೋರಿ ಓದಿ.
ಬೆಂಗಳೂರು ಗ್ರಾಮಾಂತರ, ಜು.24: ಜೂನ್ 13 ರ ಬೆಳಗಿನ ಜಾವ ಬೆಳ್ಳಂ ಬೆಳಗ್ಗೆ ಹೆದ್ದಾರಿಗೆ ಬಂದಿದ್ದ ಜನರಿಗೆ ಅಪಘಾತದ ರೀತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಸ್ಥಳೀಯರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು. ಪೊಲೀಸರಿಗೂ ಹೊಸ ತಲೆ ನೋವು ತಂದೊಡ್ಡಿತ್ತು. ಇನ್ನು ಈ ಕೇಸ್ ಬೆನ್ನತ್ತಿದ್ದ ಪೊಲೀಸರು ಇದೀಗ ಪ್ರವಿಣ್, ಪ್ರಭು, ಪ್ರಜ್ವಲ್ ಮತ್ತು ಅಶೋಕ್ ಎಂಬ ನಾಲ್ವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದು, ಕೊಲೆಗೆ ಕಾರಣವೇನು ಎಂಬುದನ್ನ ರಿವೀಲ್ ಮಾಡಿದ್ದಾರೆ.
ಹೌದು, ಕೋಲಾರದ ಭಾರ್ಗವ್ ಎಂಬ ಯುವಕ ಕಳೆದ ಜೂ. 12 ರಂದು ಕೋಲಾರದಿಂದ ಹೊಸಕೋಟೆಗೆ ಮಧ್ಯರಾತ್ರಿ ತನ್ನ ಕಾರಿನಲ್ಲಿ ಬರುತ್ತಿದ್ದ. ಈ ವೇಳೆ ಅದೇ ಹೆದ್ದಾರಿಯಲ್ಲೆ ಕಾರನ್ನ ಹಿಂಬಾಲಿಸಿಕೊಂಡು ಬಂದಿದ್ದ ನಾಲ್ಕು ಜನ, ಹೈವೆಯಲ್ಲೆ ಭಾರ್ಗವ್ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಹೀಗಾಗಿ ಅಂದು ಸ್ಥಳ ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ನಂದಗುಡಿ ಪೊಲೀಸರು, ಮೃತ ಭಾರ್ಗವ್ ಸ್ನೇಹಿತರಾದ ಕೋಲಾರ ಮೂಲದ ಪ್ರವೀಣ್, ಪ್ರಭು, ಪ್ರಜ್ವಲ್ ಮತ್ತು ಅಶೋಕ್ ಎಂಬ ನಾಲ್ಕು ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಇದನ್ನೂ ಓದಿ:ರಾಮನಗರ: ಸಂಬಂಧಿಯಿಂದಲೇ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ! ಆರೋಪಿ ಬಂಧನ
ಬಂಧಿತ ಆರೋಫಿ ಪ್ರವೀಣ್ ಮತ್ತು ಭಾರ್ಗವ್ ಒಂದೇ ಪೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಒಂದಷ್ಟು ಜನ ಯುವಕರನ್ನ ಜೊತೆಯಲ್ಲಿಟ್ಟುಕೊಂಡು ವಾಹನಗಳ ಸೀಜಿಂಗ್ ಕೆಲಸ ಮಾಡುತ್ತಿದ್ದರಂತೆ. ಹೀಗಾಗಿ ಇದೇ ವಿಚಾರಕ್ಕೆ ಇಬ್ಬರ ನಡುವೆ ಕಲಹ ಶುರುವಾಗಿದ್ದು, ಹಲವು ಭಾರಿ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರಂತೆ. ಜೊತೆಗೆ ಕೊಲೆಯಾದ ಭಾರ್ಗವ್, ಪ್ರವೀಣ್ನ ಮನೆಗೆ ಹೋಗಿ ಪತ್ನಿ ಮತ್ತು ತಾಯಿ ಮುಂದೆ ಅವಾಜ್ ಹಾಕಿ ಬಂದಿದ್ದು, ಪ್ರವೀಣ್ನನ್ನ ಕೆರಳಿಸಿದೆ.
ಕಳೆದ 12 ರಂದು ಒಬ್ಬನೆ ಕಾರಿನಲ್ಲಿ ಹೋಗ್ತಿದ್ದನ್ನ ಕಂಡು ಹಿಂಬಾಲಿಸಿಕೊಂಡು ಹೋಗಿ ನಾಲ್ಕು ಜನ ಸೇರಿಕೊಂಡು ಹೆದ್ದಾರಿಯಲ್ಲಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಒಟ್ಟಾರೆ ಒಂದೇ ಕಡೆ ತಿಂದು ತೇಗಿ ಅಣ್ಣ ತಮ್ಮಂದಿರಂತಿದ್ದ ಸ್ನೇಹಿತರೆ ದುಷ್ಮನ್ಗಳಾಗಿ ಕೊಲೆ ಮಾಡುವ ಹಂತಕ್ಕೆ ತಲುಪಿದ್ದು ನಿಜಕ್ಕೂ ದುರಂತ. ಇನ್ನು ದುಡುಕಿ ಮನೆಗೆ ಹೋಗಿ ಅವಾಜ್ ಹಾಕಿದಕ್ಕೆ ಭಾರ್ಗವ್ ಇಹಲೋಕ ಸೇರಿದ್ರೆ, ಕುಟುಂಬವಿದೆ ಎನ್ನುವುದನ್ನ ಮರೆತು ರೌಡಿಸಂ ತೋರಿಸಲು ಹೋಗಿ ಕೊಲೆ ಮಾಡಿದವನು ಪರಪ್ಪನ ಅಗ್ರಹಾರ ಸೇರಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ